ಭರ್ಜರಿ ಮಳೆಗೆ ಬೆಂಗಳೂರು ತತ್ತರ, ಸಂಚಾರ ಸ್ಥಗಿತ

ಆಲಿಕಲ್ಲು ಸಹಿತ ಮಳೆಗೆ ಸಂಚಾರ ಸ್ಥಗಿತವಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ವಿಧಾನಸೌಧ ಸುತ್ತ ಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ರಸ್ತೆಗಳ ಹೊಂಡದಲ್ಲಿ ನೀರು ತುಂಬಿದ್ದು ಹೆದರಿಕೆಯಿಂದ ವಾಹನ ಸವಾರರು ನಿಧಾನಗತಿಯಿಂದ ಸಂಚರಿಸುತ್ತಿದ್ದಾರೆ.
ಉಳಿದಂತೆ ರಿಚ್ಮಂಡ್ ಟೌನ್, ಶಾಂತಿನಗರದಲ್ಲೂ ಮಳೆಯಿಂದ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಜಯನಗರ, ಬಸವನಗುಡಿ, ಮೈಸೂರು ರಸ್ತೆಯಲ್ಲೂ ಮಳೆ ಹೆಚ್ಚಾಗುತ್ತಿರುವ ವರದಿ ಬಂದಿದೆ.
ಮಾರತ್ ಹಳ್ಳಿ ಬಳಿಯ ಯಶೋಮತಿ ಆಸ್ಪತೆಗೆ ಕ್ಯಾಂಟೀನ್ ಒಳಗೆ ನೀರು ನುಗ್ಗಿದೆ. ಹಲಸೂರಿನ ಬಳಿ ಲಾವಣ್ಯ ಥೇಟರ್ ಮುಂದಿದ್ದ ಬೃಹತ್ ಮರ ನೆಲಕ್ಕುರಳಿದೆ. ಯಡಿಯೂರಿನ ಕೆರೆ ಬಳಿ ಮರ ನೆಲಕ್ಕೆ ಉರುಳಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ: ಮುಂದಿನ 48 ಗಂಟೆಗಳಲ್ಲಿ (ಮೇ.16, ಮೇ.17) ಕನಿಷ್ಠ ತಾಪಮಾನ 22 ಡಿಗ್ರಿ, ಗರಿಷ್ಠ ತಾಪಮಾನ 31 ಡಿಗ್ರಿ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.












Click it and Unblock the Notifications