ಚಾಕು ಹಿಡಿದು ಬೆದರಿಸಿ, ಅಪ್ರಾಪ್ತೆ ಹಾಳು ಮಾಡಿದ

ವೃತ್ತಿಯಿಂದ ಬಸ್ ಕಂಡೆಕ್ಟರ್ ಆಗಿರುವ ಮಹೇಂದ್ರ ಪ್ರಹ್ಲಾದ್ ಚತುರ್ ಎಂಬ ವ್ಯಕ್ತಿ ವಿರುದ್ಧ ಸಮತಾ ನಗರ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸತ್ತಿದ್ದಾರೆ.
ಕಂಡಿವಿಲಿ, ಪೊಯ್ಸರ್ ಪ್ರದೇಶದ ಜನತಾ ನಗರದಲ್ಲಿ ಹುಡುಗಿ ಮನೆಯ ನೆರೆ ಮನೆಯಲ್ಲೇ ವಾಸವಾಗಿರುವ ಮಹೇಂದ್ರ, ಅಮಾನುಷವಾಗಿ ವರ್ತಿಸಿ, ಅತ್ಯಾಚಾರ ಎಸೆಗಿದ ಕತೆಯನ್ನು ಹುಡುಗಿ ತನ್ನ ತಾಯಿಗೆ ಹೇಳಿದ್ದಾಳೆ. ನೊಂದ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಐಪಿಸಿ ಸೆಕ್ಷನ್ 376 ರ ಅನ್ವಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿ ಪ್ರವೀಣ್ ನವಡ್ಕರ್ ಹೇಳಿದ್ದಾರೆ.
ಆದರೆ, ಮಹೇಂದ್ರ ಆ ರೀತಿ ವ್ಯಕ್ತಿಯಲ್ಲ. ಆತನನ್ನು 10 ವರ್ಷದಿಂದ ಚೆನ್ನಾಗಿ ಬಲ್ಲೆವು. ಈ ಹುಡುಗಿ ಪಕ್ಕದ ಮನೆಗೆ ಬಂದು 10 ದಿನ ಆಗಿಲ್ಲ. ಆಗಲೆ ಈ ರೀತಿ ಆರೋಪ ಬಂದಿರುವುದು ಹಲವು ಶಂಕೆ ಮೂಡಿಸುತ್ತದೆ ಎಂದು ಮಹೇಂದ್ರನ ಸಂಬಂಧಿಕರು ಹೇಳಿದ್ದಾರೆ.












Click it and Unblock the Notifications