ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲು ಸಿಕ್ತು, ಟೆಲಿಕಾಂ ರಾಜಾ ಇನ್ನು ಮಹಾರಾಜ!

By Srinath
|
Google Oneindia Kannada News

2g-scam-a-raja-gets-bail-cbi-court
ನವದೆಹಲಿ, ಮೇ 15:2ಜಿ ಹಗರಣದ ಪ್ರಮುಖ ಆರೋಪಿ ಎ ರಾಜಾಗೆ ಜಾಮೀನು ಸಿಕ್ಕಿದ್ದು, ಇಂದು ಸಂಜೆ ವೇಳೆಗೆ ಸ್ವತಂತ್ರ ಹಕ್ಕಿಯಾಗಲಿದ್ದಾರೆ. ಹಗರಣದಲ್ಲಿ ಬಂಧಿತರಾಗಿದ್ದ 13 ಆರೋಪಿಗಳ ಪೈಕಿ ಜಾಮೀನು ಮೇಲೆ ಬಿಡುಗಡೆಗೊಂಡ ಕೊನೆಯ ಆರೋಪಿ ಇವರಾಗಿದ್ದಾರೆ. ಗಮನಾರ್ಹವೆಂದರೆ ರಾಜಾ ಇದೇ ಮೊದಲ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಸಿಬಿಐ ವಿಶೇಷ ಜಡ್ಜ್ ಒ.ಪಿ. ಸೈನಿ ಅವರು ಮಂಗಳವಾರ ಡಿಎಂಕೆ ಸಂಸದ ರಾಜಾಗೆ ಜೈಲಿನಿಂದ ಮುಕ್ತಿ ನೀಡಿದ್ದಾರೆ. ಷರತ್ತುಗಳು: ರಾಜಾ, ದೆಹಲಿ ಬಿಟ್ಟು ತೆರಳಬಾರದು. ಚೆನ್ನೈಗೂ ಹೋಗುವಂತಿಲ್ಲ. ಕೋರ್ಟಿಗೆ 30 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಸಿಬಿಐ, ಕಳೆದ ವರ್ಷ ಫೆ. 2ರಂದು ರಾಜಾರನ್ನು ಬಂಧಿಸಿ, ತಿಹಾರ್ ಜೈಲಿಗೆ ಕಳಿಸಿತ್ತು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಘಟಿಸಿರುವ ಅತಿ ದೊಡ್ಡ ಹಗರಣದ ಸರದಾರ ಈ ರಾಜಾ ಎಂದು ಬಿಂಬಿತರಾಗಿದ್ದಾರೆ. ಆದರೆ ಡಿಎಂಕೆಯ ಬಹುಮುಖ ಪ್ರತಿಭೆ ಕನ್ನಿಮೋಳಿ ಸಹ ಪ್ರಕರಣದ ಪ್ರಮುಖ ಪಾತ್ರಧಾರಿ ಎನ್ನಲಾಗಿದೆಯಾದರೂ ಆರೇ ತಿಂಗಳಿಗೆ ತಿಹಾರ ಜೈಲುವಾಸ ಮುಗಿಸಿಕೊಂಡು ಜಾಮೀನಿನ ಮೇಲೆ ಈಗಾಗಲೇ ಮನೆ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಗಮನಾರ್ಹ.

English summary
Former telecom minister in UPA cabinet A Raja (DMK) gets bail by CBI Court. He was arrested and jailed on 2 February 2011, facing trial in the biggest scam in post independent India, the 2G spectrum allocation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X