ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ 'ರಾಜಿ'ನಾಮೆ: ಷರತ್ತುಗಳ ಮೇಲೆ ಷರತ್ತು

By Srinath
|
Google Oneindia Kannada News

ಬೆಂಗಳೂರು, ಮೇ 14: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮ ಪ್ರಹಸನ ಕುತೂಹಲಕಾರಿಯಾಗಿ ಸಾಗಿದೆ. ತಮ್ಮ ಬೆಂಬಲಿಗರನ್ನು ಕೆಎಸ್ ಈಶ್ವರಪ್ಪ ಮನೆಗೆ ಅಟ್ಟಿರುವ ಯಡಿಯೂರಪ್ಪ, ತಾವು 'ರಾಜೀ'ನಾಮೆಯಿಂದ ಹಿಂದೆ ಸರಿಯಲು ಷರತ್ತುಗಳ ಮೇಲೆ ಷರತ್ತುಗಳನ್ನು ಹಾಕಿದ್ದಾರೆ.

ಷರತ್ತುಗಳ ಪಟ್ಟಿ ಹೀಗಿದೆ:
ಮೊಟ್ಟಮೊದಲ ಬಾಣವನ್ನು ನಿರೀಕ್ಷಿತವಾಗಿ ಸಿಎಂ ಸದಾನಂದ ಗೌಡರತ್ತ ನೆಟ್ಟಿದ್ದಾರೆ. ಸದಾನಂದ ಗೌಡರು ಯಡಿಯೂರಪ್ಪನವರ ಕ್ಷಮೆಯಾಚಿಸಬೇಕು. ತಮ್ಮನ್ನು ಸಿಎಂ ಮಾಡಿದ್ದು, ಹೈಕಮಾಂಡ್ ಅಲ್ಲ ಯಡಿಯೂರಪ್ಪನವರು ಎಂದು ಬಹಿರಂಗವಾಗಿ ಘೋಷಿಸಬೇಕು.

ವಿಧಾನ ಪರಿಷತ್ ಗೆ RSSನ ಸಂತೋಷ್ ಅವರನ್ನು ನೇಮಕ ಮಾಡಬಾರದು. ಯಡಿಯೂರಪ್ಪ ಹೇಳಿದ 6 ಮಂದಿಯನ್ನೇ ಮೇಲ್ಮನೆಗೆ ಆಯ್ಕೆ ಮಾಡಬೇಕು. ಸಿಟಿ ರವಿ ಮತ್ತು ಶಂಕರಲಿಂಗೇಗೌಡಗೆ ಮಂತ್ರಿ ಪದವಿ ನೀಡಬಾರದು.

ಹೀಗೆ ಸಾಗಿದೆ ಯಡಿಯೂರಪ್ಪ ಷರತ್ತುಗಳ ಪಟ್ಟಿ. ಗಮನಿಸಿ, ಇದು ಈ ತಕ್ಷಣಕ್ಕೆ ತಮ್ಮ ರಾಜೀನಾಮೆ ನಿರ್ಧಾರ ಕೈಬಿಡಲು ಯಡಿಯೂರಪ್ಪ ಕಳಿಸಿರುವ ಷರತ್ತು ಪಟ್ಟಿ. ಸದ್ಯದ ಬಿಕ್ಕಟ್ಟು ಬಗೆಹರಿದ ನಂತರ ರಾಜ್ಯ ಬಿಜೆಪಿಯ ಮುಂದಿನ ದಿಕ್ಕನ್ನು ತಾವು ನಿರ್ಧರಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆಂದು ಆಪ್ತ ಮೂಲಗಳು ಹೇಳಿವೆ.

ಯಡಿಯೂರಪ್ಪನವರ ಷರತ್ತುಪಟ್ಟಿಯನ್ನು ನೋಡಿ ಸಂಪ್ರೀತರಾಗಿರುವ ಈಶ್ವರಪ್ಪ ಸಂಹೆ 4 ಗಂಟೆ ವೇಳೆಗೆ ಯಡಿಯೂರಪ್ಪ ಸಹಿ ಸುದ್ದಿ ನೀಡಲಿದ್ದಾರೆ ಎಂದು ಅತೀವ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಹೈ ಡ್ರಾಮಾ: ಅತ್ತ ದೆಹಲಿ ಹೈಕಮಾಂಡ್ ಸಹ ಯಡಿಯೂರಪ್ಪ ಅವರನ್ನು ಸಮಧಾನಪಡಿಸಲು ಭಾರಿ ಕಸರತ್ತು ನಡೆಸಿದೆ. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸಂಸದರನ್ನು ಕರೆಸಿಕೊಂಡಿರುವ ಅರುಣ್ ಜೇಟ್ಲಿ ಮತ್ತು ಪ್ರಧಾನ್ ಅವರು ಮಾತುಕತೆಯಲ್ಲಿ ತೊಡಗಿದ್ದಾರೆ. ಯಾವುದೇ ದುಡುಕಿನ ಕ್ರಮ ಕೈಗೊಳ್ಳದಂತೆ ಮತ್ತು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ ಸಂಸದರ ಮೂಲಕ ಯಡಿಯೂರಪ್ಪಗೆ ಮನವಿ ಮಾಡಿಕೊಂಡಿದ್ದಾರೆ.

English summary
BJP crisis : Even as BS Yeddyurappa gets ready for sumbitting his resignation for MLA seat, he sends conditions list to KS Eshwarappa in order to avoid the crisis in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X