ಬೃಹತ್ ಬೆಂಗಳೂರಿನಲ್ಲಿ1.83 ಕೋಟಿ ರು ದರೋಡೆ
ಬೆಂಗಳೂರು,
ಮೇ.14: ಎಟಿಎಂಗಳಿಗೆ ಹಣ ಸಾಗಿಸುವ ವಾಹನ ನಿಲ್ಲಿಸಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ 1.83 ಕೋಟಿ ರು.ನಗದನ್ನು ದೋಚಿದ ಘಟನೆ ಆರ್ ಟಿ ನಗರದಲ್ಲಿ ಸೋಮವಾರ(ಮೇ.14) ನಡೆದಿದೆ. id="toptextpromo">ಕಾರ್ಪೊರೇಷನ್
ಬ್ಯಾಂಕಿನ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸಲು ಬ್ಯಾಂಕಿನ ಅಧಿಕಾರಿಗಳು ಟವೆರಾ ವಾಹನ(KA 03 c 2428)ದಲ್ಲಿ ಕೋಟಿಗಟ್ಟಲೆ ಹಣ ತುಂಬಿಕೊಂಡು ತರಳಬಾಳು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೆಳಗ್ಗೆ 11.30ರ ಸುಮಾರಿಗೆ ಎರಡು ವಾಹನಗಳಿಂದ ಬಂದ 6 ಪ್ಲಸ್ 7 ಜನರ ಗುಂಪು ಪಿಸ್ತೂಲು ತೋರಿಸಿ, ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ 1.83 ಕೋಟಿ ರು ಹಣವನ್ನು ಅಪಹರಿಸಿದ್ದಾರೆ. ದುಷ್ಕರ್ಮಿಗಳು ದೋಚಿದ ಹಣದ ಪ್ರಮಾಣ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. id='are-slot-1' class='oiad oi-axt oiadv'> id='top-searched-articles'>ಘಟನೆಯಲ್ಲಿ
ಗಾಯಗೊಂಡಿದ್ದ ಭದ್ರತಾ ಸಿಬ್ಬಂದಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೊಂದು ಯೋಜಿತ ದಾಳಿ ಎಂದು ಶಂಕಿಸಲಾಗಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿರುವ ಸಿಸಿಟಿವಿಯಿಂದ ಮಾಹಿತಿ ಪಡೆದು ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.











Click it and Unblock the Notifications