ಅಂಬೇಡ್ಕರ್ ಕಾರ್ಟೂನ್ ವಿವಾದ: ಕಪಿಲ್ ಕ್ಷಮೆ

ಈ ರೀತಿ ಖಂಡನೀಯ ಕಾರ್ಟೂನ್ ಗಳನ್ನು ಬಳಸದಂತೆ ಎಚ್ಚರಿಕೆ ವಹಿಸಲಾಗುವುದು. ಈ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. ಮುಂದಿನ ವರ್ಷದಿಂದ ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಈ ರೀತಿ ಪ್ರಮಾದವಾಗುವುದಿಲ್ಲ ಎಂದು HRD ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆಯಲ್ಲಿ ಗದ್ದಲ: ಸಂವಿಧಾನ ಕರ್ತೃ ಅಂಬೇಡ್ಕರ್ ಅವರಿಗೆ ಅಪಮಾನವಾಗಿರುವುದನ್ನು ಪ್ರತಿಪಕ್ಷ ಮುಖಂಡರು ಒಕ್ಕೊರಲಿನಿಂದ ಖಂಡಿಸಿದರು. ಎರಡು ಮೂರು ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸಂಸತ್ತಿನ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಬಿಎಸ್ಪಿ ಮಾಯಾವತಿ ಗುಡುಗಿದರು.
ವಿಶೇಷವೆಂದರೆ, ಕಾಂಗ್ರೆಸ್ ಪಕ್ಷದ ಪಿಎಲ್ ಪೂನಿಯಾ ಅವರು ಕಪಿಲ್ ಸಿಬಲ್ ಅವರನ್ನು ಗುರಿಯಾಗಿಸಿಕೊಂಡು ಕ್ಷಮಾಪಣೆಗೆ ಆಗ್ರಹಿಸಿದರು.
"Indian Constitution at Work" ಶೀರ್ಷಿಕೆಯ ಚಾಪ್ಟರ್ 1ರ ರಾಜ್ಯನೀತಿ ವಿಷಯ ಸಿಬಿಎಸ್ ಸಿ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅಪಮಾನಕರ ಕಾರ್ಟೂನ್ ಬಳಸಲಾಗಿದೆ.












Click it and Unblock the Notifications