ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ: ಯಡಿಯೂರಪ್ಪ ರಾಜಕೀಯ ಭವಿಷ್ಯ ಅವನತಿಯತ್ತ

By Srinath
|
Google Oneindia Kannada News

BSY political life in doldrums,
ನವದೆಹಲಿ, ಮೇ 11: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಗಣಿ ಲಂಚ ಪ್ರಕರಣವನ್ನು ತನಿಖೆಗೊಳಪಡಿಸುವಂತೆ ನ್ಯಾಯಮೂರ್ತಿ ನ್ಯಾ. ಸ್ವತಂತ್ರಕುಮಾರ್ ನೇತೃತ್ವದ ಅರಣ್ಯ ಪೀಠ ಸೂಚಿಸಿದೆ. ಸದ್ಯದ ರಾಜಕೀಯ ಪರಿಸ್ಥತಿಯನ್ನು ಗಣನೆಗೆ ತೆಗೆದುಕೊಂಡು, ಯಡಿಯೂರಪ್ಪ ಅವರು ಸ್ವತಃ ಸೃಷ್ಟಿಸಿಕೊಂಡಿರುವ ವಿರೋಧಿ ಪಡೆಯ ಬಲವನ್ನು ಗಮನಿಸಿದರೆ ಯಡಿಯೂರಪ್ಪ ಅವರ ರಾಜಕೀಯ ಅವನತಿ ಶುರುವಾಗಿದೆ ಎಂದು ಹೇಳಬಹುದು.

ಸುಪ್ರೀಂಕೋರ್ಟಿನ ತೀರ್ಪು ಹೊರಬೀಳುವ ಘಳಿಗೆಯಲ್ಲಿ ಯಡಿಯೂರಪ್ಪ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯಲ್ಲಿದ್ದಾರೆ. ಸುಪ್ರೀಂ ತೀರ್ಪನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಅಲ್ಲಿಂದಲೇ ಪ್ರತಿಕ್ರಿಯಿಸಿದ್ದಾರೆ.

ಇದರೊಂದಿಗೆ ಅರಸೀಕೆರೆಯ ಜೇನುಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ಅಡ್ಡಬಿದ್ದರೂ ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಈಗ ಜೇನುಕಲ್ಲು ಬೆಟ್ಟದಿಂದ ಜಾರಿ ಪ್ರಪಾತಕ್ಕೆ ಬಿದ್ದಿದೆ. ಮತ್ತೆ ಮುಖ್ಯಮಂತ್ರಿ ಪಟ್ಟ ಬೇಕೇಬೇಕು ಎಂದು ಹಠ ಹಿಡಿದಿದ್ದ ಯಡಿಯೂರಪ್ಪನವರಿಗೆ ಅವರ ರಾಜಕೀಯ ಭವಿಷ್ಯ ಮಸುಕಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸದ್ಯಕ್ಕೆ ತನಿಖೆ ಎದುರಿಸುವುದೊಂದೇ ಯಡಿಯೂರಪ್ಪ ಎದುರಿಗಿರುವ ಮಾರ್ಗ. ನಿರಪರಾಧಿ ಎಂದು ಸಾಬೀತು ಆದರೆ ಮಾತ್ರ ರಾಜಕೀಯವಾಗಿ ಅವರು ಪುನಸ್ಚೇತಗೊಳ್ಳಬಹುದು ಎಂದು ಕಾನೂನು ಪಂಡಿತರು ವ್ಯಾಖ್ಯಾನಿಸಿದ್ದಾರೆ.

ಈ ಮಧ್ಯೆ, ಯಡಿಯೂರಪ್ಪ ವಿರೋಧಿಗಳು ತೀರ್ಪಿನಿಂದ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಅವರನ್ನು ಹಣಿಯಲು ದಿವ್ಯಸ್ತ್ರ ದೊರೆತಿದೆ. ಬಿಜೆಪಿ ಹೈಕಮಾಂಡಿಗಂತೂ ಸಖತ್ ನಿರಾಳವಾಗಿದೆ. ಇನ್ನು ರಾಜ್ಯದಲ್ಲಿ ಸಿಎಂ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರಿಗೆ ದೊಡ್ಡ ತಲೆನೋವು ಮಾಯವಾಗಿದೆ.

English summary
CBI enquiry orders from Supreme court of India puts Ex-bjp-cm of Karnataka BS Yeddyurappas political career in trouble. The verdict is rude shock to BSY and to his loyal MLAs and MPS who support him in Bharateeya Janata Party, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X