ನಂಜುಂಡನ ಸನ್ನಿಧಿಗೆ ತೆರಳಿದ ಯಡಿಯೂರಪ್ಪ
ಬೆಂಗಳೂರು,
ಮೇ 11: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಪ್ರೀಂ ಭೀತಿಯಲ್ಲಿದ್ದಾರೆ. ಹಾಗಾಗಿ ಯಾವುದಕ್ಕೇ ಆಗಲಿ ಆ ನಂಜುಂಡನ ಆಶೀರ್ವಾದವಿರಲಿ ಎಂದು ಅವರು ಶುಕ್ರವಾರ ಬೆಳಗ್ಗೆ ಸೀದಾ ನಂಜನಗೂಡಿಗೆ ತೆರಳಿದ್ದಾರೆ. id="toptextpromo">ಗಣಿ
ಕಂಪನಿಗಳಿಂದ ದೇಣಿಗೆ ಪಡೆದ ಹಾಗೂ ಭೂಸ್ವಾಧೀನ ಅಧಿಸೂಚನೆಯನ್ನು ಕಾನೂನುಬಾಹಿರವಾಗಿ ರದ್ದು ಮಾಡಿದ ಆರೋಪಕ್ಕೆ ಒಳಗಾಗಿರುವ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮಾಡಿರುವ ಶಿಫಾರಸು ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅವರ ಅರಣ್ಯ ಪೀಠ ತೀರ್ಪು ನೀಡಲಿದೆ. (ಸಮಯ ಬಹುಶಃ ಬೆಳಗ್ಗೆ 11.30 ಗಂಟೆಗೆ) id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರದ
ಆರೋಪಕ್ಕೆ ಒಳಗಾಗಿ ಮುಖ್ಯಮಂತ್ರಿ ಪದವಿ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಲಿದೆ. ಹಾಗಾಗಿ ತೀವ್ರ ತಳಮಳದಲ್ಲಿರುವ ಅವರು ನಂಜುಂಡೇಶ್ವರನ ಕೃಪಾಕಟಾಕ್ಷ ಸಂಪಾದಿಸಲು ನಂಜನಗೂಡಿಗೆ ತೆರಳಿದ್ದಾರೆ.











Click it and Unblock the Notifications