ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 to 6 ವಾಹನ ಸವಾರರ ತಲೆಗೆ ಪೊಲೀಸ್ ಗುರಿ

By Srinath
|
Google Oneindia Kannada News

ಬೆಂಗಳೂರು, ಮೇ 11: ರಾಜಧಾನಿಯಲ್ಲಿ ಇಂದು ಶುಕ್ರವಾರ ಬೆಳಗ್ಗೆ ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಖತ್ ಷಾಕ್ ನೀಡಿದ್ದಾರೆ. ದ್ವಿಚಕ್ರ ವಾಹನ ಸವಾರರ ತಲೆಯ ಮೇಲೆ ಹೆಲ್ಮೆಟ್ ಕಾಣಿಸಲಿಲ್ಲ ಅಂದರೆ ಅಂತಹವರನ್ನೆಲ್ಲ ಹಿಡಿದುಹಾಕುತ್ತಿದ್ದಾರೆ. ಇದು ಇಡೀ ನಗರದಾದ್ಯಂತ ಬಹುತೇಕ ಎಲ್ಲ ಟ್ರಾಫಿಕ್ ಸಿಗ್ನಲ್ಲುಗಳಲ್ಲೂ ಕಂಡುಬರುತ್ತಿದೆ. '6 to 6 ವಾಹನ ಸವಾರರ ತಲೆಗೆ ಗುರಿಯಿಡಿ ಎಂದು ಮೇಲಿಂದ orders ಬಂದಿದೆ. ಅದನ್ನು ಪಾಲಿಸುತ್ತಿದ್ದೇವೆ ಅಷ್ಟೆ' ಎಂದು ಟ್ರಾಫಿಕ್ ಪೊಲೀಸರು ಅಮಾಯಕ ನಗೆ ನಗುತ್ತಿದ್ದಾರೆ.

ವಿಷಯ ಏನಪಾ ಅಂದರೆ ಬೆಂಗಳೂರು ಟ್ರಾಫಿಕ್ ಪೊಲೀಸಿನವರು ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಎಲ್ಲ ಟ್ರಾಫಿಕ್ ಸಿಗ್ನಲ್ಲುಗಳಲ್ಲೂ 12 ಗಂಟೆ ಕಾಲ ರಸೀದಿ ಪುಸ್ತಕ ತೆರೆದಿಟ್ಟುಕೊಂಡು ನಿಂತಿದ್ದಾರೆ. ಸುಂಕದವನ ಮುಂದೆ ಸುಖ-ದುಃಖವಾ ಎಂಬಂತೆ ಯಾವುದೇ ಮುಲಾಜಿಗೂ ಬಗ್ಗದೆ ಹೆಲ್ಮಟ್ ರಹಿತ ವಾಹನ ಚಾಲಕರನ್ನು ತಡೆದು ನಿಲ್ಲಿಸುತ್ತಿದ್ದಾರೆ.

ಬೆಳಗ್ಗೆ 4-5 ಗಂಟೆಗೆ ಎಂದಿನಂತೆ ಪಾರ್ಕಿಗೆ ಬಂದು ರನ್ನಿಂಗ್, ಜಾಗಿಂಗ್, ವಾಕಿಂಗ್ ಅದೂ ಇದೂ ಅಂತ ಮಾಡಿಮುಗುಸಿ ವಾಪಸಾಗುವಾಗ ಅವರಿಗೆಲ್ಲ ಪೊಲೀಸರು ಶಾಕ್ ನೀಡುತ್ತಿದ್ದಾರೆ. 6 ಗಂಟೆಯ ನಂತರ ಪ್ರತ್ಯಕ್ಷರಾಗಿರುವ ಪೊಲೀಸರು ಪಾರ್ಕಿನಿಂದ ಹೊರಬಂದು ಹೆಲ್ಮೆಟ್ ಇಲ್ಲದೆ ವಾಹನವೇರುವವರನ್ನು ಹಿಡಿಯುತ್ತಿದ್ದಾರೆ.

'ಸ್ವಾಮಿ ನಾವು ದಿನಾ ಬರೋರು. ಏನು ವಾಕಿಂಗ್ ಮಾಡುವಾಗಲೂ ಹೆಲ್ಮೆಟ್ ಹಾಕಿಕೊಳ್ಳಬೇಕಾ?' ಎಂದು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೆ ಫಲಿತಾಂಶ ಶೂನ್ಯ. ತೆಪ್ಪಗೆ ದಂಡ ಕಟ್ಟಿ ಹೋಗುತ್ತಿದ್ದಾರೆ. ಇನ್ನು ಕೆಲವರು ದೂರದಿಂದಲೇ ಇದನ್ನು ಗಮನಿಸಿ, ವಾಹನಗಳನ್ನು ಹೊರಗೆ ತೆಗೆಯುತ್ತಿಲ್ಲ. ಪಾರ್ಕ್ ಬಳಿಯೇ ವಾಹನ ನಿಲ್ಲಿಸಿ, ಮತ್ತೆ ಬಂದು ತೆಗೆದುಕೊಂಡು ಹೋದರಾಯಿತು ಎಂದು ತಲೆಮೇಲೆ ಕೈಹೊತ್ತುಕೊಂಡು ವಾಪಸಾಗುತ್ತಿದ್ದಾರೆ.

ಇನ್ನು ಬಹಳಷ್ಟು ಮಂದಿ, ಮನೆಗಳಿಂದ ಕಚೇರಿಗೆ ತೆರಳಲು ಸಜ್ಜಾಗುತ್ತಿರುವವರಿಗೆ ಬೆಳಗ್ ಬೆಳಗ್ಗೇನೇ ಮೊಬೈಲುಗಳಲ್ಲಿ ಸಂಪರ್ಕಿಸಿ, ಜೋಪಾನ ಎಲ್ಲ ಸಿಗ್ನಲ್ಲುಗಳಲ್ಲೂ ಪೊಲೀಸರು ಕಾಯುತ್ತಿದ್ದಾರೆ. ಮೊದಲು ಹೆಲ್ಮೆಟ್ ಹಾಕಿಕೊಂಡು ನಂತರ ವಾಹನವನ್ನು ಆಚೆ ತೆಗಿ ಎಂದು ಸಕಾಲಿಕ ಸಂದೇಶ ರವಾನಿಸಿ, ಧನ್ಯರಾಗುತ್ತಿದ್ದಾರೆ.

ಇದು ಬೆಳಗಿನ ಮೊದಲ ರೌಂಡ್ ಷಾಕ್ ಆಗಿದ್ದರೆ ಮುಂದಿದೆ ಮಾರಿ ಹಬ್ಬ ಎನ್ನುವಂತೆ ಇನ್ನೇನು ಕೆಲ ಹೊತ್ತಿನಲ್ಲಿ peak hour traffic ಶುರುವಾಗುತ್ತದೆ. ಆಗ ಶುರುವಾಗಲಿದೆ ವಾಹನ ಸವಾರರ ನಿಜವಾದ ಗೋಳು. ಬಹಳಷ್ಟು ಮಂದಿ ಇಂದು officeಗೆ late ಆಗುವುದಂತೂ ದಿಟ. ಬಾಸ್ ಮುಂದೆ ಹ್ಯಾಪ್ ಮೋರೆ ಹಾಕಿಕೊಂಡು 'ಸಾರ್! traffic police ಕಾಟ helmet ಹಾಕಿರಲಿಲ್ಲ. ಅದಕ್ಕೆ ದಂಡ ಕಟ್ಟಿಬರುವಷ್ಟರಲ್ಲಿ ಇಷ್ಟೊತ್ತು ಆಯಿತು' ಎಂದು ಅಲವತ್ತುಕೊಳ್ಳುವುದು ಗ್ಯಾರಂಟಿ.

ಕೊನೆಗೆ, well done traffic police. ಒಳ್ಳೆಯ ಕೆಲಸವನ್ನೇ ಮಾಡುತ್ತೀದ್ದೀರಿ. ಆದರೂ ದ್ವಿಚಕ್ರ ವಾಹನ ಸವಾರರ ಮೇಲೆ ಸ್ವಲ್ಪ ಕನಿಕರ ಇರಲಿ.

English summary
Bangalore two-wheelers have recieved a rude shock from the traffic police. Those voilating the rules, that is riding without helmets, are fined. Today the police are on special drive from 6 in the morning to 6 in the evening will stop the two-wheeler riders without helmets. Beware!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X