ಜಮಖಂಡಿಯಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ
ಜಮಖಂಡಿ,
ಮೇ. 10 : ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಗಂಡನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಾಲೂಕಿನ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. id="toptextpromo">ಈ
ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಎಸಗಿದ ಆರೋಪಿ ರಾಜು ಸಂಗಪ್ಪ ಕಾಮಗೊಂಡ ಅವರನ್ನು ಮಾತ್ರ ಬಂದಿಸಲಾಗಿದೆ. ಆದರೆ ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯ ಗಂಡನ ಮೇಲೆ ಮಾರಣಾಂತಿಕ ಹಲ್ಲೆನಡೆಸಿರುವ ಶಿವು ಸಂಗಪ್ಪ ಕಾಮಗೊಂಡ, ಪ್ರಕಾಶ ಸಂಗಪ್ಪ ಕಾಮಗೊಂಡ ಅವರನ್ನು ಕೂಡಲೇ ಬಂದಿಸಬೇಕು ಎಂದು ಒತ್ತಾಯಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಲ್ಲಿನ
ದಲಿತ ಕುಟುಂಬಗಳಿಗೆ ಜೀವ ಬೆದರಿಕೆ ಹಾಕಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಲಾಗಿದೆ. ಕಳೆದ ಏಪ್ರಿಲ್ 27ರಂದು ಘಟನೆ ನಡೆದಿದ್ದರೂ ಆರೋಪಿಗಳನ್ನು ಕೂಡಲೆ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಾಲೂಕಾ ಸಂಚಾಲಕ ಮುತ್ತಣ ಮೆತ್ರಿ, ಸಂಘಟನಾ ಸಂಚಾಲಕ ಲಕ್ಷ್ಮಣ ಹರಿಜನ, ಶರಣು ಮೂಲಂಗಿ, ವಿದಾರ್ಥಿ ಒಕ್ಕೂಟದ ಸಂಚಾಲಕ ಉದಯ ಕಡಕೋಳ, ಶ್ರೀಕಾಂತ ಘಾಟಗೆ ಹಾಗೂ ಮಾರತಿ ದೊಡವಾಡ ಎಚ್ಚರಿಸಿದ್ದಾರೆ. ಜಮಖಂಡಿ ಡಿ ವೈ ಎಸ್ ಪಿ ಗಿರೀಶ ಕಾಂಬಳೆ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications