ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಿಸಿ: ಚಿನ್ನದ ಬೆಲೆ 28,000 ರೂಪಾಯಿಯತ್ತ

By Srinath
|
Google Oneindia Kannada News

gold-rates-may-slide-to-28000-per-10-gram
ಬೆಂಗಳೂರು, ಮೇ 8: ಮೊನ್ನಯಷ್ಟೆ 30,000 ರುಪಾಯಿ ಗಡಿಯತ್ತ ಸಾರ್ವಕಾಲಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಕೆಳಗಿಳಿಯುತ್ತಾ ಬಂದಿದೆ. ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಇದೇ ಚಿನ್ನದ ಬೆಲೆ 10 ಗ್ರಾಂ.ಗೆ 28,000 ರೂ. ಇತ್ತು. ಮತ್ತೆ ಆ ದರಕ್ಕೆ ಚಿನ್ನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ಕಡೆ ಕೇಂದ್ರ ಸರಕಾರ ಚಿನ್ನದ ಖರೀದಿ ಮೇಲಿನ ತೆರಿಗೆಯನ್ನು ರದ್ದುಪಡಿಸಿ, ಉದ್ಯಮಕ್ಕೆ ನೆರವಾಗಿದೆ. ಅದು ಸಕಾಲಿಕವೂ ಎನ್ನಬಹುದು. ಏಕೆಂದರೆ ವಿದೇಶದಿಂದ ಚಿನ್ನದ ಆಮದಿಗೆ ಇದು ನೆರವು ನೀಡಲಿದೆ. ಇದೇ ವೇಳೆ ಚಿನ್ನದ ಆಮದಿಗೆ ಇದು ಸಕಾಲವೂ ಆಗಿದೆ. ಏಕೆಂದರೆ ವಿದೇಶಗಳಲ್ಲಿ ಗ್ರಾಹಕರು ಹೂಡಿಕೆಯ ಸರಕರಾಗಿ ಚಿನ್ನದಿಂದ ವಿಮುಖರಾಗುತ್ತಿದ್ದಾರೆ.

ಇನ್ನು, ಚಿನ್ನ ಸಾರ್ವಕಾಲಿಕ ದಾಖಲೆಯ ಬೆಲೆಯತ್ತ (30,000 ರು.) ಸಾಗುತ್ತಿದ್ದಂತೆ ಭಾರತದ ಗ್ರಾಹಕರೂ ಚಿನ್ನವನ್ನು ಮತ್ತು ಅದರ ದರವನ್ನು ದೂರದಿಂದಲೇ ನೋಡಿದರೆ ಹೊರತು ಖರೀದಿಗೆ ಮುಂದಾಗಲಿಲ್ಲ. ಇದರಿಂದ ಉದ್ಯಮ ಅನಿವಾರ್ಯವಾಗಿ ಬೆಲೆ ಹೆಚ್ಚಳವನ್ನು ತಹಬಂದಿಗೆ ತರಲು ಯತ್ನಿಸಿತು.

ತತ್ಫಲವಾಗಿ, ಬೆಲೆ ಮತ್ತಷ್ಟು ಹೆಚ್ಚಾಗದೆ ತುಸು ಇಳಿಯುತ್ತಾ ಬಂತು. ಇದೇ ವೇಳೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೋಹ ಕಡಿಮೆಯಾಗಿ, ಹಿಂಜರಿಕೆಯ ವಾತಾವರಣ ನಿರ್ಮಾಣವಾಗಿದೆ. ಯುರೋಪಿನಲ್ಲಿ ರಾಜಕೀಯ ತಲಮಳ ಕಂಡುಬಂದಿದ್ದು, ಯುರೊ ಕರೆನ್ಸಿ ಮೌಲ್ಯ ಡಾಲರ್ ಎದುರು ಕಳೆಗುಂದಿದೆ. ಇದರಿಂದಾಗಿ ಚಿನ್ನದ ಬದಲು ಡಾಲರ್ ನತ್ತ ಮುಖ ಮಾಡಲಾಗಿದೆ. ಹಾಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿದಿದ್ದು, ಭಾರತದಲ್ಲೂ ಚಿನ್ನದ ಬೆಲೆ ಇಳಿಯುತ್ತಾ ಸಾಗಿದೆ.

ಸದ್ಯಕ್ಕೆ, ಮುಂಬೈ ಮತ್ತು ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರ 10 ಗ್ರಾಂ. ಗೆ ಕ್ರಮವಾಗಿ ರೂ. 385 ಮತ್ತು ರೂ. 475ರಷ್ಟು ಕುಸಿತ ಕಂಡಿದ್ದು ಮೂರು ವಾರಗಳ ಹಿಂದಿನ ಮಟ್ಟಕ್ಕೆ ಇಳಿದಿದೆ. ಇದು ಮೂರು ತಿಂಗಳ ಹಿಂದಿನ ಮಟ್ಟಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಮೇ 5ರಂದು ಚಿನ್ನದ ಬೆಲೆ 10 ಗ್ರಾಂಗಳಿಗೆ ರೂ.29,750 ತಲುಪಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿತ್ತು.

English summary
Thanks to a weakening global trend and due to reduced offtake by stockists and retailers at existing higher levels Gold slipped from its previous record on May 9. According to analysts gold rates may slide further towards 28000 per 10 gram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X