ಎಸ್ಸೆಸ್ಸೆಲ್ಸಿ 2012 ಫಲಿತಾಂಶ ಬರತ್ತೆ, ಕಾಯ್ತಾ ಇರಿ

Students eagerly waiting for SSLC results
ಬೆಂಗಳೂರು, ಮೇ. 9 : ಎಸ್ಸೆಸ್ಸೆಲ್ಸಿ ಫಲಿತಾಂಶ ಯಾವಾಗ ಬರತ್ತೆ ಯಾವಾಗ ಬರತ್ತೆ ಅಂತ ನೀವೆಲ್ಲ ಕಾಯ್ತಾ ಇದೀರಿ. ಪಾಸಾಗೋದು ಅಂಥದೇನೂ ದೊಡ್ಡ ವಿಷ್ಯ ಅಲ್ಲ. ಆದ್ರೆ, ಫಸ್ಟ್ ಕ್ಲಾಸ್ ಬರ್ತೀನಾ, ಸೆಕೆಂಡ್ ಕ್ಲಾಸ್ ತೊಗೊತೀನಾ ಅಥವಾ Rank ಬರತ್ತಾ ಅಂತಾನೂ ಕೆಲವರು ಕಾಯ್ತಾ ಇದೀರಿ. ತಂದೆ ತಾಯಿಗಳಿಗೂ ಇದೇ ಚಿಂತೆ. ಹಾಗೇನೆ, ಫ್ರೌಢಶಾಲೆಯ ಪ್ರಾಂಶುಪಾಲರು ಮತ್ತು ಬೋಧಕ ವರ್ಗಕ್ಕೂ ತುಂಬಾನೇ ಕುತೂಹಲ.

ಪ್ರತೀವರ್ಷದಂತೆ ನಿಮಗೆ ಪರೀಕ್ಷೆ ಫಲಿತಾಂಶ ನೀಡೋದಕ್ಕೆ ನಾವಂತೂ ಸಿದ್ಧರಾಗಿದೀವಿ. ಮೌಲ್ಯಮಾಪನ ಇದೀಗ ಮುಗಿದಿದೆ, ಮೇ ಮೂರನೇ ವಾರದಲ್ಲಿ ಫಲಿತಾಂಶ ಕೊಡ್ತೀವಿ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಬಳ್ಳಾರಿಯಲ್ಲಿ ನಮ್ಮ ವೆಬ್ ಸೈಟಿಗೆ ತಿಳಿಸಿದರು.

ಮೇ ಮೂರನೇ ವಾರದಲ್ಲಿ ಅಂತ ಸಚಿವರು ಹೇಳಿದರೇ ವಿನಃ ನಿರ್ದಿಷ್ಟ ದಿನಾಂಕ ಯಾವತ್ತು ಎಂದು ಹೇಳಲಿಲ್ಲ. ಯಾಕಂದ್ರೆ, ಫಲಿತಾಂಶ ಪ್ರಕಟಣೆಗೆ ಮುಂಚೆ ಉತ್ತರ ಪತ್ರಿಕೆಗಳಲ್ಲಿರುವ ಮೌಲ್ಯಗಳನ್ನು ಕಂಪ್ಯೂಟರಿಗೆ ಹಾಕಬೇಕು, ಆನಂತರ ಟೆಸ್ಟಿಂಗ್ ಆಗಬೇಕು, ತದನಂತರ ಮತ್ತೆ ಚೆಕಿಂಗ್ ಆಗಬೇಕು. ಈ ಎಲ್ಲ ಕೆಲಸಗಳನ್ನು ಪ್ರೌಢಶಾಲಾ ಪರೀಕ್ಷಾ ಮಂಡಳಿಯ ಸಿಬ್ಬಂದಿ ಮಾಡ್ತಾಯಿದಾರೆ.

ಎಸ್ಸೆಸ್ಸೆಲ್ಸಿ, ಪಿಯೂಸಿ ಪರೀಕ್ಷೆ ಫಲಿತಾಂಶಗಳನ್ನು ನಾವು ನಮ್ಮ ಅಂತರ್ ಜಾಲದಲ್ಲಿ ಪ್ರಕಟಿಸುವುದಷ್ಟೇ ಅಲ್ಲದೆ, ಫಲಿತಾಂಶದ ದತ್ತಾಂಶ ನಮಗೆ ಲಭ್ಯವಾಗುವವರೆಗೆ ರಿಸಲ್ಟ್ ಯಾವತ್ತು ಸಿಗತ್ತೆ ಮತ್ತು ಎಷ್ಟು ಗಂಟೆಗೆ ಸಿಗತ್ತೆ ಎಂಬ ಬಗ್ಗೆ ತಾಜಾ ಸುದ್ದಿಗಳನ್ನು ಪ್ರಕಟಿಸುತ್ತಿರುತ್ತೇವೆ, ಗಮನಿಸುವುದು.

ನೀವು ಈಗ ಮಾಡಬೇಕಾದುದಿಷ್ಟೆ : ಒನ್ ಇಂಡಿಯಾದ ಶೈಕ್ಷಣಿಕ ವೆಬ್ ಸೈಟಿಗೆ ಹೋಗಿ ನಿಮ್ಮ ಈ ಮೇಲ್ ಐಡಿಯನ್ನು ಎಂಟರ್ ಮಾಡಿ. ಫಲಿತಾಂಶ ಕುರಿತ ಲೇಟೆಸ್ಟ್ ಸುದ್ದಿಯನ್ನು ನಾವು ನಿಮಗೆ ಈ ಮೇಲ್ ಮಾಡಿ ತಿಳಿಸುತ್ತೇವೆ. Best wishes to you in Advance.

ಕಳೆದ ವರ್ಷದ (2011) ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ 12ರ ಗುರುವಾರದಂದು ಪ್ರಕಟವಾಗಿತ್ತು. ಆವತ್ತಿನ ಸುದ್ದಿಯ ಹೈಲೈಟ್ಸ್ ಮೇಲೆ ಕಣ್ಣಾಡಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+