ಆರೆರೆ, ರಾಜಾಗೆ ಜೈಲು ಬೋರ್ ಅಂತೆ, ಬೇಲ್ ಬೇಕಂತೆ

ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ದಾರ್ಥ್ ಬೆಹುರಾ ಅವರು 5 ಲಕ್ಷ ವೈಯಕ್ತಿಕ ಶ್ಯೂರಿಟಿ ಹಾಗೂ 10 ಲಕ್ಷ ಜಾಮೀನು ಬಾಂಡ್ ಪಡೆದ ನಂತರ ಜಾಮೀನು ಮಂಜೂರು ಮಾಡಲಾಗಿದೆ.
ಎ ರಾಜಾ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸ್ವೀಕರಿಸಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಮೇ.11ಕ್ಕೆ ಮುಂದೂಡಿದೆ. ಬೆಹುರಾಗೆ ಬೇಲ್ ಸಿಕ್ಕ ನಂತರ ಬಹುಕೋಟಿ 2ಜಿ ಹಗರಣದ ಏಕೈಕ ಪ್ರಮುಖ ಆರೋಪಿಯಾಗಿ ರಾಜಾ ಜೈಲಿನಲ್ಲಿದ್ದಾರೆ.
ಫೆ.2 ರಂದು,2011 ರಂದು ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ರಾಜಾ ಈವರೆಗೂ ಜಾಮೀನು ಅರ್ಜಿ ಹಾಕದೆ ಅಚ್ಚರಿ ಮೂಡಿಸಿದ್ದರು. ವಂಚನೆ, ಭ್ರಷ್ಟಾಚಾರ, ಸಂಚು ಮುಂತಾದ ಆರೋಪಗಳನ್ನು ಮೈ ಮೇಲೆ ಹೊತ್ತಿಕೊಂಡಿರುವ ರಾಜಾ ಅವರ ಜಾಮೀನು ಅರ್ಜಿ ವಿಚಾರಣೆ ಮೇ.11ರಂದು ನಡೆಯಲಿದೆ. ಮೇ.10 ರಾಜಾ ಅವರ ಹುಟ್ಟುಹಬ್ಬದ ದಿನವಾಗಿದ್ದು, ತಮ್ಮ ಕ್ಲೈಂಟ್ ಗೆ ಬರ್ಥ್ ಡೇ ಗಿಫ್ಟ್ ಕೊಡಿಸಲು ರಾಜಾ ವಕೀಲರು ಹರ ಸಾಹಸ ಪಡುತ್ತಿದ್ದಾರೆ.












Click it and Unblock the Notifications