• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರಿನ ಬುರ್ಖಾ ಸರಿಸಲು ಪೊಲೀಸ್ ಡೆಡ್‌ಲೈನ್

By Prasad
|
Jyoti Prakash Mirji
ಬೆಂಗಳೂರು, ಮೇ. 9 : ನಿಮ್ಮ ಕಾರುಗಳಿಗೆ ಬೆಳಕು ನಿರ್ಬಂಧಿಸುವ ಬಣ್ಣದ ಫಿಲ್ಮ್ ಅಂಟಿಸಿದ್ದರೆ ಮೇ 19ರೊಳಗಾಗಿ ತೆಗೆಸಿಬಿಡಿ. ಇಲ್ಲದಿದ್ದರೆ ದಂಡ ಕಟ್ಟಲು ಸಿದ್ಧರಾಗಿರಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಕಾರು ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮುಂಬದಿಯ ಮತ್ತು ಹಿಂಬದಿಯ ಗಾಜಿನ ಕಿಟಕಿಗಳ ಮುಖಾಂತರ ಶೇ.70ರಷ್ಟು ಮತ್ತು ಬದಿಯ ಕಿಟಕಿಯ ಮುಖಾಂತರ ಶೇ.50ರಷ್ಟು ಬೆಳಕು ಒಳಗಡೆ ತೂರುವಂತಿರಬೇಕು. ಟಿಂಟೆಡ್ ಗ್ಲಾಸ್ ಅಳವಡಿಸಿದ್ದರಿಂದ ಕುಡಿತ, ಜೂಜು, ಶಸ್ತ್ರಾಸ್ತ್ರ ಸಾಗಾಣಿಕೆ, ಅತ್ಯಾಚಾರಗಳಂಥ ಅಪರಾಧಗಳು ಹೆಚ್ಚುತ್ತಿರುವುದರ ಕಾರಣ ಈ ಆದೇಶ ನೀಡಲಾಗಿದೆ.

ಈ ಟಿಂಟೆಡ್ ಫಿಲ್ಮ್ ತೆಗೆಸಲು ವಾಹನ ಮಾಲಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಡೆಡ್ ಲೈನ್ ಮೇ 19ರಂದು ಕೊನೆಗೊಳ್ಳುತ್ತಿದೆ. ಇದರಿಂದಾಗಿ ದಂಡಗಳಿಗೆ ಅವಕಾಶ ನೀಡದೆ, ಬಣ್ಣದ ಫಿಲ್ಮ್ ತೆಗೆಸಿ ಸುಪ್ರೀಂ ಕೋರ್ಟ್ ಆದೇಶವನ್ನು ಮಾಲಿಕರು ಮಾನ್ಯ ಮಾಡಬೇಕಾಗಿದೆ. ಈ ನಿರ್ಬಂಧ ಝಡ್ ಮತ್ತು ಝಡ್ ಪ್ಲಸ್ ಸೆಕ್ಯೂರಿಟಿ ಇರುವ ವಾಹನಗಳಿಗೆ ಅನ್ವಯವಾಗುವುದಿಲ್ಲ.

ಟಿಂಟೆಡ್ ಫಿಲ್ಮ್ ತೆಗೆಸುವುದು ಎಲ್ಲಿ? :
ಹಿಂಬದಿ ಮತ್ತು ಮುಂಬದಿಯ ಗ್ಲಾಸ್ ಶೇ.70ರಷ್ಟು ಮತ್ತು ಬದಿಯ ಗ್ಲಾಸ್‌ಗಳು ಶೇ.50ರಷ್ಟು ಬೆಳಕಿಗೆ ಅವಕಾಶ ಕೊಡದ ಗ್ಲಾಸುಗಳನ್ನು ತೆಗಸಲು ಕೆಲ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಶಿವಾಜಿನಗರದ ಬಿಆರ್‌ವಿ ಮೈದಾನ, ಆಡುಗೋಡಿ ಮತ್ತು ಮೈಸೂರು ರಸ್ತೆಯಲ್ಲಿರುವ ನಗರ ಶಸ್ತ್ರ ಮೀಸಲು ಪಡೆ ಮೈದಾನ, ಮಲ್ಲೇಶ್ವರದ ಆಟದ ಮೈದಾನ, ಜಯನಗರದ ಮಾಧವನ್ ಪಾರ್ಕ್‌ಗಳಲ್ಲಿ ಇವುಗಳನ್ನು ತೆಗೆಸಬಹುದು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಪ್ಲಾಜಾ, ಯಲಹಂಕ ಪೊಲೀಸ್ ಠಾಣೆ, ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್, ಕಂಠೀರವ ಕ್ರೀಡಾಂಗಣ, ಫ್ರೇಸರ್ ಟೌನ್‌ನಲ್ಲಿರುವ ಫುಟ್ಬಾಲ್ ಮೈದಾನಗಳಲ್ಲಿಯೂ ನಿರ್ಬಂಧಿತ ಟಿಂಟೆಡ್ ಗ್ಲಾಸ್‌‌ಗಳನ್ನು ತೆಗೆಸಲು ಅವಕಾಶ ಮಾಡಿಕೊಡಲಾಗಿದೆ. ಈ ಸೌಲಭ್ಯ ಉಚಿತ.

ಈ ಆದೇಶವನ್ನು ಎಷ್ಟು ಜನ ಪಾಲಿಸುತ್ತಾರೆ? ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯವಾಗಿದ್ದರೂ ಇಲ್ಲದೆ ವಾಹನ ಚಲಾಯಿಸುತ್ತಾರೆ. ಕುಡಿದು ಓಡಿಸುವುದನ್ನು ನಿಷೇಧಿಸಲಾಗಿದ್ದರೂ ಕುಡಿದೇ ಚಲಾಯಿಸುತ್ತಾರೆ. ಸಿಗ್ನಲ್ ಜಂಪ್ ಮಾಡುವುದು ಅಪರಾಧವೆಂದು ತಿಳಿದಿದ್ದರೂ ಜಂಪ್ ಮಾಡುತ್ತಾರೆ. ರಾತ್ರಿ ಹೈಬೀಮ್ ಬಳಸಿದರೆ ದಂಡ ಕಕ್ಕಿಸುತ್ತಾರೆ ಎಂದು ಗೊತ್ತಿದ್ದರೂ ಹೈಬೀಮ್ ಬಳಸುತ್ತಾರೆ. ಇದಕ್ಕೆ ಟಿಂಟೆಡ್ ಗ್ಲಾಸ್ ಕೂಡ ಸೇರ್ಪಡೆಯಾಗಲಿದೆಯೆ?

ದಂಡ ಎಷ್ಟು? : ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಂದ್ರ ಮೋಟಾರ್ ವೆಹಿಕಲ್ ಕಾಯ್ದೆಯ 177ನೇ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಮೇ 19ರ ನಂತರವೂ ಬಣ್ಣದ ಫಿಲ್ಮ್ ಬಳಸಿದರೆ 100 ರು. ದಂಡ ವಿಧಿಸಲಾಗುವುದು. ಎರಡನೇ ಬಾರಿ ಅಪರಾಧವೆಸಗಿದರೆ 300 ರು. ದಂಡ. ಮಾಡಿದ ತಪ್ಪು ತಿದ್ದಿಕೊಳ್ಳದೆ ಮೂರನೇ ಬಾರಿಯೂ ಇದೇ ಅಪರಾಧ ಎಸಗಿದರೆ 300 ರು. ದಂಡ ಮತ್ತು ಲೈಸೆನ್ಸ್ ಕಳೆದುಕೊಳ್ಳಲು ಸಿದ್ಧರಾಗಿರಬೇಕಾಗಿದೆ. ಆಯ್ಕೆ ವಾಹನ ಮಾಲಿಕರದ್ದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕಾರು ಸುದ್ದಿಗಳುView All

English summary
Remove dark tinted glass on your Car before May 19, or be prepared to pay fine, as per order passed by Supreme Court of India. Bangalore Police commission Jyoti Prakash Mirji has given soft remainder to the owners of Cars to get rid of tinted glasses.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more