ಚಿನ್ನಸ್ವಾಮಿ ಸ್ಟೇಡಿಯಂ ಸ್ಪೋಟ: 2 ಉಗ್ರರು ಸೆರೆ

ಬಂಧಿತ ಉಗ್ರರನ್ನು ಕಾಫಿಲ್ ಅಖ್ತರ್ ಹಾಗೂ ಸೈಯದ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಏಪ್ರಿಲ್ 17, 2010ರಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿಂದರೆ ಅಖ್ತರ್ ಪ್ರಮುಖ ಆರೋಪಿಯಾಗಿದ್ದಾನೆ. ಸೈಯದ್ ಲಷ್ಕರ್ ಸಂಘಟನೆಯ ಕಮ್ಯಾಂಡರ್ ಆಗಿದ್ದಾನೆ.
ಏ.17ರಂದು ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯ ನಡೆಯುವ 1 ಗಂಟೆ ಮುಂಚೆ ಲಘು ಸಾಮರ್ಥ್ಯದ ಸ್ಫೋಟಕಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಪತ್ತೆಯಾಗಿತ್ತು. ಸ್ಫೋಟದಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ರಾಂಚಿ ಕೋರ್ಟಿಗೆ ಹಾಜರು: ಬಿಹಾರ್ ನ ದರ್ಭಾಂಗ ಜಿಲ್ಲೆಯ ಬ್ರಹ ಸಮೇಲಿ ಗ್ರಾಮದ ಖಫಿಲ್ ಅಖ್ತರ್ ಅಲಿಯಾಸ್ ಖಫಿದ್ (26) ನನ್ನು ಜಾರ್ಖಂಡ್ ನಲ್ಲಿ ಬಂಧಿಸಲಾಗಿದೆ. ಚಾಮರಾಜಪೇಟ ಟಿಪ್ಪುನಗರ ನಿವಾಸಿ ರೆಹಮಾನ್(25) ನನ್ನು ಬೆಂಗಳೂರಿನಲ್ಲಿ ಮೇ.7ರಂದು ಸೆರೆ ಹಿಡಿಯಲಾಗಿದೆ. ಇಬ್ಬರ ಬಳಿ ಕೇವಲ ಒಂದು ಪಿಸ್ತೂಲ್ ಮಾತ್ರ ಇತ್ತು ಎಂದು ತಿಳಿದುಬಂದಿದೆ. ಆರೋಪಿಗಳನ್ನು ರಾಂಚಿ ಕೋರ್ಟಿಗೆ ಮಂಗಳವಾರ (ಮೇ.8) ಹಾಜರುಪಡಿಸಲಾಗಿದೆ.
ಅಖ್ತರ್ ಸ್ಫೋಟಕಗಳನ್ನು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿದ್ದ. ಸೈಯದ್ ಅಬ್ದುಲ್ ತಕ್ಷಣವೇ ಪಾಕಿಸ್ತಾನಕ್ಕೆ ತೆರಳಿ ಉನ್ನತ ತರಬೇತಿ ಹೊಂದಲು ಯೋಜಿಸಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ(ಕ್ರೈಂ) ಬಿ ದಯಾನಂದ ಹೇಳಿದ್ದಾರೆ.












Click it and Unblock the Notifications