ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಟ್ ಶಿಫ್ಟಿಗೆ ಬೆಚ್ಚಿ ಬೀಳುವ ಬೆಂಗಳೂರು ಮಹಿಳೆ

By Mahesh
|
Google Oneindia Kannada News

Bangalore Working Woman
ಬೆಂಗಳೂರು, ಮೇ.8: ಬೆಂಗಳೂರಿನ ಶೇ 48ರಷ್ಟು ಮಹಿಳಾ ಉದ್ಯೋಗಿಗಳು ನೈಟ್ ಶಿಫ್ಟ್ ಕೆಲಸ ಎಂದರೆ ಬೆಚ್ಚಿ ಬೀಳುತ್ತಾರೆ ಎಂದು ಇತ್ತೀಚಿನ ಸಮೀಕ್ಷೆ ವರದಿ ಬಹಿರಂಗ ಪಡಿಸಿದೆ.

2005ರಲ್ಲಿ ಬಿಪಿಒ ಉದ್ಯೋಗಿ ಪ್ರತಿಭಾ ಎಂಬುವವರನ್ನು ಕ್ಯಾಬ್ ಚಾಲಕ ಅತ್ಯಾಚಾರ ಎಸೆಗಿ ಕೊಲೆಗೈದ ಪ್ರಕರಣದ ನಂತರ ಬೆಂಗಳೂರಿನ ಮಹಿಳಾ ಉದ್ಯೋಗಿಗಳ ಭಯ ಇನ್ನಷ್ಟು ಹೆಚ್ಚಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರಕಟಿಸಿದೆ.

Associated Chambers of Commerce and Industry (ASSOCHAM) ಸಾಮಾಜಿಕ ಅಭಿವೃದ್ಧಿ ಫೌಂಡೇಶನ್ ನಡೆಸಿದ ಇನ್ನೊಂದು ಸಮೀಕ್ಷೆ ಪ್ರಕಾರ ಶೇ 78ರಷ್ಟು ಮಹಿಳೆಯರು ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವುದು ಕಷ್ಟ ಎಂದಿದ್ದಾರೆ.

ಸಣ್ಣ ಕೈಗಾರಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇ.49 ರಷ್ಟು ಮಹಿಳೆಯರು ಸುರಕ್ಷಿತವಾಗಿ ಮನೆ ತಲುಪುದೇ ಕಷ್ಟ ಎಂದಿದ್ದಾರೆ. ಶೇ 28 ರಷ್ಟು ಮಹಿಳೆಯರು ನೈಟ್ ಶಿಫ್ಟ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೃಹತ್ ಉದ್ದಿಮೆ, ಐಟಿ ಬಿಟಿ ಕ್ಷೇತ್ರದ ಶೇ 23 ರಷ್ಟು ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳವೇ ಡೇಂಜರ್ ಎಂದಿದ್ದಾರೆ.

ಬಿಪಿಒ, ಕಾಲ್ ಸೆಂಟರ್, ಐಟಿಯೇತರ ಸಂಸ್ಥೆಗಳು, ಆಸ್ಪತ್ರೆ, ಮಾಧ್ಯಮ, ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಉದ್ಯೋಗ ನಿರತ ಮಹಿಳೆಯರು ಹೆಚ್ಚಾಗಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷಾ ಸಂಸ್ಥೆ ಮುಖ್ಯಸ್ಥ ಡಿಎಸ್ ರಾವತ್ ಹೇಳಿದ್ದಾರೆ.

ನರ್ಸಿಂಗ್ ವಲಯದಲ್ಲಿ ಶೇ 53 ರಷ್ಟು ಮಹಿಳೆಯರು ನೈಟ್ ಶಿಫ್ಟ್ ಎಂದರೆ ಕಣ್ಣೀರು ಸುರಿಸುತ್ತಾರೆ ಎಂದು ವರದಿ ಹೇಳುತ್ತದೆ.

English summary
Forty-eight per cent of women in Bangalore feel unsafe while working in night shifts, according to a survey conducted by a trade body. The survey was conducted after the rape and murder of a BPO employee by a cab driver in Bangalore in 2005.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X