ಹಿಂದೂಗಳಿಗೆ ಫೋನ್ ನಂಬರ್ ಕೊಟ್ಟ ತೊಗಾಡಿಯಾ

kasargod-togadia-hindu-helpline-020-66803300
ಹೊನ್ನಾವರ, ಮೇ 7: ಸಂಕಷ್ಟದ ಕಾಲದಲ್ಲಿ ಹಿಂದುಗಳಿಗೆ ನೆರವಾಗಲು ಸಹಾಯವಾಣಿ ದೂರವಾಣಿ ಸಂಖ್ಯೆನ್ನು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರು ಶನಿವಾರ ನೀಡಿದ್ದಾರೆ. 020- 6680 3300 ಹೆಲ್ಪ್ ಲೈನ್‌ ದೂರವಾಣಿ ಸಂಖ್ಯೆಯಾಗಿದೆ.

ಹಿಂದೂ ಐಕ್ಯ ವೇದಿಯಡಿ 'ಹಿಂದೂ ಶಕ್ತಿ ಸಂಗಮದಲ್ಲಿ' ಪಾಲ್ಗೊಳ್ಳಲು ಆಗಮಿಸಿದ್ದ ಪ್ರವೀಣ್ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು. ಆ ವೇಳೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾವುದೇ ಭಾಗದಲ್ಲಿ ವಸತಿ, ದೇವರ ದರ್ಶನ, ಆಂಬುಲೆನ್ಸ್‌ ಮತ್ತು ಇತರ ಯಾವುದೇ ಅವಶ್ಯಕತೆ ಬಿದ್ದರೆ ತಕ್ಷಣ ಈ ನಂಬರಿಗೆ ಕರೆ ಮಾಡುವಂತೆ ಅವರು ವಿನಂತಿಸಿದರು.

ಕರ್ನಾಟಕದಲ್ಲಿ ಪ್ರವೀಣ ಕಾಮತ್‌ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸೇವೆ ಸಂಪೂರ್ಣ ಉಚಿತ. ಆದರೆ ವಸತಿ, ವಾಹನ, ದೇವರದರ್ಶನ ಮೊದಲಾದವುಗಳಿಗೆ ಸೂಕ್ತ ಹಣ ಪಾವತಿಸಬೇಕಾಗುತ್ತದೆ. ಎಲ್ಲಿಯೂ ಶೋಷಣೆ ನಡೆಯದಂತೆ ನ್ಯಾಯವಾದ ಸೇವೆ ದೊರಕಿಸಿಕೊಡಲಾಗುವುದು ಎಂದು ತೊಗಾಡಿಯಾ ತಿಳಿಸಿದರು.

ಜತೆಗೆ, [email protected] ಇಮೇಲ್ ವಿಳಾಸವನ್ನೂ ನೀಡಿದ್ದಾರೆ. ಪ್ರವೀಣ್ ತೊಗಾಡಿಯಾ ಅವರು ಶನಿವಾರ ಉಡುಪಿ ಮತ್ತು ಕುಂದಾಪುರಕ್ಕೂ ಭೇಟಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+