ಬಿಳಿಗಿರಿರಂಗನ ಬಂಗಾರದ ಪಾದುಕೆ ಕಳ್ಳತನ

Biligiri Ranaganatha Swamy Temple
ಚಾಮರಾಜನಗರ, ಮೇ.7: ಸೋಲಿಗರ ಆರಾಧ್ಯ ದೈವ ಬಿಳಿಗಿರಿ ರಂಗನಾಥಸ್ವಾಮಿಯ ಪಾದಕ್ಕೆ ಹಾಕಿದ್ದ ಚಿನ್ನದ ಪಾದುಕೆ ಬದಲಿಗೆ ತಗಡಿನ ಪಾದುಕೆ ಬಂದಿದ್ದು ನೋಡಿ ಅರ್ಚಕರು ದಂಗಾಗಿ ಹೋಗಿದ್ದಾರೆ. ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮೀಜಿಗೆ ಚಿನ್ನದ ಆಭರಣಗಳನ್ನು ತೊಡಿಸಲಾಗಿತ್ತು.

ಆದರೆ, ಸೋಮವಾರ ಬೆಳಗ್ಗೆ (ಮೇ.7) ಗರ್ಭಗುಡಿ ಬಾಗಿಲು ತೆಗೆದು ಸ್ವಾಮಿಯ ಪಾದಕ್ಕೆ ಬಿದ್ದ ಅರ್ಚಕರಿಗೆ ಶಾಕ್ ಆಗಿದೆ. ಸ್ವಾಮಿಯ ಪಾದದಲ್ಲಿದ್ದ ಸುಮಾರು ಅರ್ಧ ಕೆ.ಜಿ ತೂಕದ ಚಿನ್ನದ ಪಾದುಕೆ ಬದಲಿಗೆ ತಾಮ್ರದ ಪಾದುಕೆ ಕಂಡು ಬಂದಿದೆ. ಸಾಮಾನ್ಯವಾಗಿ ಬೆಳಗ್ಗಿನ ಹೊತ್ತು, ಸುಪ್ರಭಾತ, ಅಭಿಷೇಕದ ನಂತರ ದೇವರಿಗೆ ವಸ್ತ್ರಧಾರಣೆ ಮಾಡಲಾಗುತ್ತದೆ. ರಥೋತ್ಸವದ ಹಿನ್ನೆಲೆಯಲ್ಲಿ ರಂಗನಾಥಸ್ವಾಮಿಗೆ ಹಾಕಿದ ಆಭರಣಗಳನ್ನು ತೆಗೆಯದೆ ಹಾಗೆ ಬಿಡಲಾಗಿತ್ತು.

ಆದರೂ, ಚಿನ್ನದ ಪಾದುಕೆ ಬದಲಿಗೆ ತಾಮ್ರದ ಪಾದುಕೆ ಇಟ್ಟಿದು ಯಾಕೆ? ಕಳ್ಳತನ ಮಾಡಿದವರಿಗೆ ಪಾಪಪ್ರಜ್ಞೆ, ಭಯ ಕಾಡಿತ್ತೆ? ಅಥವಾ ದೇಗುಲದ ಮಂಡಳಿಯವರ ಕೈವಾಡವೇ? ಎಂಬ ಪ್ರಶ್ನೆಯೊಂದಿಗೆ ಚಾಮರಾಜನಗರ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಧಾನ ಅರ್ಚಕ ರವಿ ಹಾಗೂ ಇನ್ನಿತರರನ್ನು ಪ್ರಶ್ನಿಸದ್ದಾರೆ.

ತಹಸೀಲ್ದಾರ್ ಕಾರಣವೇ?: ಬಿಳಿಗಿರಿರಂಗನಾಥ ಸ್ವಾಮಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ. ಹೀಗಾಗಿ ದೇಗುಲದ ಆಭರಣಗಳು, ಪ್ರಮುಖ ಪತ್ರಗಳು, ಮೈಸೂರು ಅರಸರು ನೀಡಿದ ದೇಣಿಗೆ ಎಲ್ಲವೂ ತಹಸೀಲ್ದಾರ್ ಸಮಕ್ಷಮದಲ್ಲಿ ಯಳಂದೂರಿನ ಉಪ ಖಜಾನೆ ಕಚೇರಿಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ.

ವೈರಮುಡಿ ಉತ್ಸವದಲ್ಲಿ ಅನುಸರಿಸುವ ಕ್ರಮದಂತೆ ಇಲ್ಲೂ ಕೂಡಾ ರಥೋತ್ಸವದ ವೇಳೆಯಲ್ಲಿ ಮಾತ್ರ ದೇವರ ಆಭರಣಗಳನ್ನು ಹೊರಕ್ಕೆ ತೆಗೆದು ದೇವರಿಗೆ ತೊಡೆಸಲಾಗುತ್ತದೆ ಹಾಗೂ ಸಂಜೆ ನಂತರ ತಹಸೀಲ್ದಾರ್ ಕಚೇರಿಗೆ ವಾಪಸ್ ಮಾಡಲಾಗುತ್ತದೆ.

ಆದರೆ, ಈ ಪ್ರಕರಣದಲ್ಲಿ ಚಿನ್ನಾಭರಣಗಳು ಪ್ರಧಾನ ಅರ್ಚಕರ ಬಳಿಯೇ ಇರಲಿ ಎಂದು ತಹಸೀಲ್ದಾರ್ ಹೇಳಿದ್ದರು ಎಂದು ತಿಳಿದು ಬಂದಿದೆ. ತಹಸೀಲ್ದಾರ್ ಹೇಳಿದಂತೆ ಅರ್ಚಕರು ಆಭರಣಗಳ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಎಂದಿನಂತೆ ದೇಗುಲಕ್ಕೆ ಬೀಗ ಜಡಿದು ಹೋಗಿದ್ದಾರೆ. ಆದರೆ, ರಾತ್ರಿ ಕಳೆದು ಬೆಳಗ್ಗೆ ಆಗುವಷ್ಟರಲ್ಲಿ ಚಿನ್ನದ ಪಾದುಕೆ ಕಾಣೆಯಾಗಿದೆ. [ಜೋಕ್ಸ್ : ಕಳ್ಳರು ಜಾಣರೋ ದಡ್ಡರೋ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+