ಪ್ರವೀಣ್ ತೊಗಾಡಿಯಾ ಮೇ 6ರಂದು ಕಾಸರಗೋಡಿಗೆ
ಕಾಸರಗೋಡು,
ಮೇ 4: 'ಹಿಂದೂ ಶಕ್ತಿ ಸಂಗಮದಲ್ಲಿ' ಪಾಲ್ಗೊಳ್ಳಲು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಮಾವೇಶವನ್ನು ಭಾನುವಾರ (ಮೇ 6) ನಡೆಸಲು ಉದ್ದೇಶಿಸಲಾಗಿದೆ. ಆದರೆ ಜಿಲ್ಲೆಯು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ತೊಗಾಡಿಯಾ ಭೇಟಿಗೆ ಪೊಲೀಸರು ಇನ್ನೂ ಅವಕಾಶ ನೀಡಿಲ್ಲ. id="toptextpromo">ಕೇರಳ
ಮತ್ತು ಕರ್ನಾಟಕದ ನೂರಾರು ಸ್ವಾಮೀಜಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹಿಂದೂ ಐಕ್ಯ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ರವೀಶ್ ತಂತ್ರಿ ಕಂದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಥಲಿಪಡಪ್ಪು ಬಳಿ ಸಮಾವೇಶ ನಡೆಯುವ ಸಾಧ್ಯತೆಯಿದೆ. id='are-slot-1' class='oiad oi-axt oiadv'> id='top-searched-articles'>ಪ್ರಚೋದನಕಾರಿ
ಭಾಷಣಕ್ಕೆ ಹೆಸರುವಾಸಿಯಾದ ಪ್ರವೀಣ್ ತೊಗಾಡಿಯಾಗೆ ಸಮಾವೇಶದಲ್ಲಿ ಪಾಳ್ಗೊಳ್ಳಲಿದ್ದಾರೆ. ಆದ್ದರಿಂದ ಸಮಾವೇಶಕ್ಕೆ ಅವಕಾಶ ನೀಡುವ ಬಗ್ಗೆ ಜಿಲ್ಲಾಡಳಿತ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಟಿಕೆ ಶಿಬು ಹೇಳಿದ್ದಾರೆ.











Click it and Unblock the Notifications