ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆ; ಜಾಗ ಖಾಲಿ ಮಾಡಲು ಮಲ್ಯಗೆ ನೋಟಿಸ್

By Srinath
|
Google Oneindia Kannada News

rent-default-eviction-notice-kingfisher-mumbai
ಬೆಂಗಳೂರು, ಮೇ 4: ಬೆಂಗಳೂರಿನ land mark ಗಳಲ್ಲಿ ಒಂದಾದ UB Tower ಅನ್ನೇ ಮಾರಾಟ ಕಮ್ ಭೋಗ್ಯಕ್ಕೆ ಇಟ್ಟಿರುವ ಸುದ್ದಿಯ ಬೆನ್ನಲ್ಲೇ ಮದ್ಯದ ದೊರೆ ವಿಜಯ್‌ ಮಲ್ಯ ಅವರು ಮುಂಬೈನಲ್ಲಿ ಬೆರೆಯದೇ ಆದ ಸಂಕಷ್ಟಕ್ಕೆ ಇಡಾಗಿದ್ದಾರೆ. ಅಲ್ಲೂ ರಿಯಲ್ ಎಸ್ಟೇಟ್ ವಿಷಯವೇ ಆಗಿದ್ದರೂ...

ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿರುವುದರಿಂದ ತಕ್ಷಣ ಕಚೇರಿಗಳನ್ನು ತೆರವುಗೊಳಿಸುವಂತೆ ಕಟ್ಟಡದ ಮಾಲೀಕರು ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆಗೆ ಸೂಚಿಸಿದ್ದಾರೆ. ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆ ಕಳೆದ ನವೆಂಬರಿನಿಂದ ಬಾಡಿಗೆಯನ್ನು ಕಟ್ಟಿಲ್ಲ. ಆದ್ದರಿಂದ ತಕ್ಷಣ ತೆರವುಗೊಳಿಸಿ ಎಂದು ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳು ತಿಳಿಸಿವೆ.

ಆದರೆ ಬಾಡಿಗೆ ಕಟ್ಟುವ ಬಗ್ಗೆ ತಮ್ಮ ಸಂಸ್ಥೆ ಮಾತುಕತೆಗೆ ಒಲವು ತೋರಿದೆ. ಸ್ವಲ್ಪ ಸಮಯಾವಕಾಶವನ್ನು ಕೋರಲಾಗಿದೆ. ಮಾಲೀಕರಾದ ಸಮುದ್ರ ರಿಯಾಲ್ಟರ್ಸ್ ಮತ್ತು ಧ್ರುವಂ ರಿಯಾಲ್ಟರ್ಸ್ ಸಂಸ್ಥೆಗಳೊಂದಿಗೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಹೇಳಿಕೊಂಡಿದೆ.

ದಿವಾಳಿ ಹಂತ ತಲುಪಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಅಂಧೇರಿ ಪೂರ್ವದಲ್ಲಿ ಕಚೇರಿಗಳನ್ನು ಹೊಂದಿದೆ. ಜತೆಗೆ, Kingfisher House ಕಾರ್ಪೊರೇಟ್ ಕಚೇರಿಯನ್ನೂ ಹೊಂದಿದೆ. ಸಮುದ್ರ ರಿಯಾಲ್ಟರ್ಸ್ ಮತ್ತು ಧ್ರುವಂ ರಿಯಾಲ್ಟರ್ಸ್ ಏಪ್ರಿಲ್ 11ರಂದು ತಮ್ಮ ವಕೀಲರ ಮೂಲಕ ನೋಟಿಸ್ ನೀಡಿದ್ದು, ಒಂದು ತಿಂಗಳೊಳಗಾಗಿ ಕಚೇರಿಗಳನ್ನು ತೆರವುಗೊಳಿಸುವಂತೆ ಏರ್‌ಲೈನ್ಸ್‌ಗೆ ಸೂಚಿಸಿದೆ.

ಒಂದು ವರ್ಷದಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಏರ್‌ಲೈನ್ಸ್‌ ಸಂಸ್ಥೆಯ ತಲೆಯ ಮೇಲೆ 7,000 ಕೋಟಿ ರೂ. ಸಾಲದ ಹೊರೆಯಿದ್ದು. 6,400 ಕೋಟಿ ರೂ. ನಷ್ಟದ ಸುಳಿಗೆ ಸಿಕ್ಕಿದೆ.

English summary
The Mumbai-based developers – Samruddha Realtors and Dhruvam Realtors – are understood to have served notices on April 11 to Kingfisher Airlines for allegedly defaulting on rent payments on a Mumbai property since November 2011, through their lawyers, giving Kingfisher Airlines a month's time to vacate the Andheri (East) space held by the airline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X