ಬಾಷ್ 300 ಕೋಟಿ ಹೂಡಿಕೆ, 400 ಜನಕ್ಕೆ ಕೆಲಸ

ನಾಸಿಕ್ ಘಟಕದ ಮೇಲೆ ಸುಮಾರು 300 ಕೋಟಿ ರು ಬಂಡವಾಳ ಹೂಡಿಕೆ ಮಾಡಲಾಗುವುದು. 35,000 ಚ.ಮೀ ವಿಸ್ತೀರ್ಣದ ಹೊಸ ಘಟಕಕ್ಕೆ ಆರಂಭದಲ್ಲಿ 400 ಜನರಿಗೆ ಉದ್ಯೋಗ ಲಭಿಸಲಿದೆ. ಉಳಿದಂತೆ, ಬೆಂಗಳೂರು ಇನ್ನಿತರ ಘಟಕಗಳ ತಜ್ಞರನ್ನು ನಾಸಿಕ್ ಘಟಕಕ್ಕೆ ಕೆಲಕಾಲ ರವಾನಿಸಲಾಗುವುದು ಎಂದು ಉಪಾಧ್ಯಕ್ಷ (ವಾಣಿಜ್ಯ)ಗೋಪಿಕುಮಾರ್ ಹೇಳಿದ್ದಾರೆ.
ಸುಮಾರು 67 ಬಿಲಿಯನ್ ಡಾಲರ್(51 ಬಿಲಿಯನ್ ಯುರೋ) ಮೌಲ್ಯದ ಬಾಷ್ ಸಮೂಹದಲ್ಲಿ ರಾಬರ್ಟ್ ಬಾಷ್ GmbH ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. 60 ದೇಶಗಳಲ್ಲಿ ಸುಮಾರು 300,000 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ.
ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ 5.3 ಬಿಲಿಯನ್ ಡಾಲರ್ ಹೂಡಿಕೆ ಮಾಡಿ 4,100ಕ್ಕೂ ಆಧಿಕ ಪೇಟೆಂಟ್ ಪಡೆಯಲಾಗಿದೆ. ಭಾರತದ 6 ಪ್ರಮುಖ ಘಟಕಗಳಲ್ಲಿ ಉತ್ಪಾದನೆ, ಅಭಿವೃದ್ಧಿಗೆ ಹೆಚ್ಚ ಒತ್ತು ನೀಡಲಾಗಿದ್ದು 25,000ಕ್ಕೂ ಅಧಿಕ ನೌಕರರನ್ನು ಹೊಂದಲಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.












Click it and Unblock the Notifications