ಕಾಮರಾಜ 'ಮಾರ್ಗ' ಹಿಡಿದ ರವಿ, ಈಶ್ವರಪ್ಪ

ಕಷ್ಟ ಕಾಲ ಎದುರಿಸುತ್ತಿರುವ ಬಿಜೆಪಿಗೆ ಕಾಮರಾಜ ಮಾರ್ಗವೇ ಸೂಕ್ತ ಎಂದು ಈಶ್ವರಪ್ಪ ನಂಬಿದ್ದಾರೆ. ಈ ಯೋಜನೆಗೆ ಅಧ್ಯಕ್ಷ ಸಚಿವ ಸಂಪುಟದ ಹಿರಿಯ ಸಚಿವರೂ ಬೆಂಬಲ ಸೂಚಿಸುವ ಸಾಧ್ಯತೆಯಿದೆ. ಸಿಟಿ ರವಿ ಪತ್ರಕ್ಕೆ ಸಹಿ ಹಾಕಿರುವ 49 ಶಾಸಕರ ಬೆಂಬಲ ರಾಜೀನಾಮೆ ನೀಡಿದ ಪಕ್ಷದಲ್ಲಿ ಬಲವರ್ಧನೆಗೆ ಇದು ಅನಿವಾರ್ಯ ಎಂದು ಹೇಳಲು ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ. ಮುಂದಿನ ಸೋಮವಾರದೊಳಗೆ ಪಕ್ಷದ ಹಿರಿಯರ ಕೈಗೆ ಪತ್ರ ತಲುಪಲಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಈ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗಲು ಬಿಜೆಪಿಗೆ ಕರೆ ನೀಡಿರುವ ಈಶ್ವರಪ್ಪ, ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸೂಚಿಸಿದ್ದಾರೆ. ಸಚಿವ ಸಂಪುಟದಲ್ಲಿರುವ ಯಡಿಯೂರಪ್ಪ ಬೆಂಬಲಿತ ಸಚಿವರಿಗೆ ಕೊಕ್ ನೀಡುವುದು ಇದರ ಹಿಂದಿನ ಉದ್ದೇಶ ಎನ್ನಬಹುದು.
ಏನಿದು ಕಾಮರಾಜಮಾರ್ಗ?: ಖಂಡಿತವಾಗಿಯೂ ಇದು ರವಿ ಬೆಳೆಗೆರೆ ಅವರ ಪುಸ್ತಕದ ಕತೆಯಲ್ಲ. ದೇಶ ಕಂಡ ಉತ್ತಮ ರಾಜಕೀಯ ಮುತ್ಸದ್ಧಿ ಕೆ ಕಾಮರಾಜ್ ಅವರು ಅನುಸರಿಸಿದ ಮಾರ್ಗವೇ 'Kamaraj Plan' ಎಂದು ಹೆಸರುವಾಸಿಯಾಯಿತು. ಇದೇ ಯೋಜನೆಯನ್ನು ಈಗ ಈಶ್ವರಪ್ಪ ಅನುಸರಿಸಲು ಮುಂದಾಗಿದ್ದಾರೆ.
1963ರಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ರಾಜೀನಾಮೆ ನೀಡುವಂತೆ ಸೂಚಿಸಿ, ಪಕ್ಷದ ಬಲವರ್ಧನೆ, ಸಂಘಟನೆಗೆ ಬಳಸಿಕೊಳ್ಳಲಾಯಿತು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹ್ರೂ ಕೂಡಾ ಈ ಯೋಜನೆಗೆ ತಲೆ ಬಾಗಿದ್ದರು.
6 ಕೇಂದ್ರ ಸಚಿವರು ಹಾಗೂ 6 ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪಕ್ಷಕ್ಕಾಗಿ ದುಡಿಯಲು ಮುಂದಾದರು. ಲಾಲ್ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್ ಹಾಗೂ ಎಸ್ ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ನಂತರ ಎಐಸಿಸಿ ಅಧ್ಯಕ್ಷರಾದ ಕಾಮರಾಜ್ ಅವರು ನೆಹರೂ ನಿಧನ ನಂತರ ಉಂಟಾದ ರಾಜಕೀಯ ಅಸ್ಥಿರತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು.












Click it and Unblock the Notifications