ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ

ಭಾನುವಾರ(ಏ.29) ನಡೆದ ಚುನಾವಣೆಯಲ್ಲಿ 1,08,028 ಮತದಾರರ ಪೈಕಿ 64,496 ಮತಗಳು ಎಣಿಕೆ ಬಂದಿತ್ತು. ಈ ಪೈಕಿ 21,956 ಮತಗಳು ಹಾಲಂಬಿ ಅವರಿಗೆ ಬಂದಿದೆ. ಚಂಪಾ ಅವರಿಗೆ 15,273 ಮತಗಳು ಬಂದಿದ್ದು, 10,111 ಮತಗಳು ಜಯಪ್ರಕಾಶ್ ಗೌಡ ಅವರ ಪಾಲಾಗಿದೆ.
ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ ಸುಮಾರು 14 ವರ್ಷ ಕರ್ತವ್ಯ ನಿರ್ವಹಿಸಿರುವ ಹಾಲಂಬಿ ಅವರನ್ನು ಮತದಾರರು ಕೈ ಹಿಡಿದಿದ್ದಾರೆ. ಎರಡನೇ ಬಾರಿ ಆಯ್ಕೆ ಬಯಸಿದ್ದ ಪ್ರೊ ಚಂದ್ರಶೇಖರ ಪಾಟೀಲರಿಗೆ ತೀವ್ರ ನಿರಾಶೆಯಾಗಿದೆ.
ಅಧ್ಯಕ್ಷರ ನುಡಿ: ಕಸಾಪವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇನೆ. ಕಸಾಪ ಪ್ರವೇಶ ದ್ವಾರದಲ್ಲಿರುವ ಪಂಪನ 'ಮಾನವ ಜಾತಿ ತಾನೊಂದೇ ವಲಂ' ಎಂಬುದನ್ನು ಪಾಲಿಸುತ್ತೇನೆ. ಇದನ್ನು ಅಧಿಕಾರ ಎಂದು ಸ್ವೀಕರಿಸದೆ ಸೇವಾ ಮನೋಭಾವದಿಂದ ನನ್ನ ಕರ್ತವ್ಯ ಪಾಲಿಸುತ್ತೇನೆ ಎಂದು ಪುಂಡಲೀಕ ಹಾಲಂಬಿ ಅವರು ಹೇಳಿದ್ದಾರೆ.
ಕಸಾಪ ಜಿಲ್ಲಾ ಕೇಂದ್ರಗಳ ಅಧ್ಯಕ್ಷರ ಆಯ್ಕೆ ಫಲಿತಾಂಶ ಭಾನುವಾರವೇ ಹೊರಬಿದ್ದಿತ್ತು. ಅದರ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications