• search
For Quick Alerts
ALLOW NOTIFICATIONS  
For Daily Alerts

  ರೇಖಾ ಪಕ್ಕದಲ್ಲಿ ಕೂಡಲು ಜಯಾಗೆ ಇಷ್ಟವಿಲ್ಲವಂತೆ!

  By Prasad
  |
  ನವದೆಹಲಿ, ಮೇ. 2 : ಕೆಲವರಿಗೆ ಸಂಖ್ಯಾಶಾಸ್ತ್ರದ ಮೇಲೆ ಅಪಾರವಾದ ನಂಬಿಕೆ. ಇಂಥ ಅಂಕಿಯ ಸೀಟಿನಲ್ಲಿ ಕುಳಿತರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿರುತ್ತಾರೆ. ಕೆಲವರು ತಮಗೂ ಆ ಸಂಖ್ಯೆಗೂ ಆಗಿಬರುವುದಿಲ್ಲ ಎಂದು ದೂರ ಹೋಗುತ್ತಾರೆ. ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್‌ಗೂ 91 ಸಂಖ್ಯೆಯ ಸೀಟಿನಲ್ಲಿ ಕುಳಿತುಕೊಳ್ಳಲು ಕಿರಿಕಿರಿಯಾಗಿ ಸೀಟನ್ನು ಬದಲಾಯಿಸಿಕೊಂಡಿದ್ದಾರೆ.

  64 ವರ್ಷದ ಜಯಾ ಬಚ್ಚನ್ ಅವರು 91ನೇ ನಂಬರಿನ ಸೀಟಿನಿಂದ ಜಿಗಿದು 143ನೇ ಸೀಟಿಗೆ ಸ್ಥಳಾಂತರಗೊಂಡಿದ್ದಾರೆ. ಇದಕ್ಕೆ ಸಂಖ್ಯಾಸಾಸ್ತ್ರ ಖಂಡಿತ ಕಾರಣವಲ್ಲ. ಅದಕ್ಕೆ ಕಾರಣ, ಕೆಲ ದಿನಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿರುವ 57 ವರ್ಷದ ಚಿರಯೌವನೆ ರೇಖಾ ಅವರು ಸೆಂಚುರಿಗೆ ಒಂದೇ ಒಂದು ನಂಬರ್ ಕಡಿಮೆಯಿರುವ ಸೀಟನ್ನು ಅಲಂಕರಿಸುತ್ತಿರುವುದು.

  99ನೇ ಸೀಟಿನ ಹತ್ತಿರ ಕೂಡಲೂ ಇಷ್ಟಪಡದ ಜಯಾ ಬಚ್ಚನ್ ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡು 143 ಅಂಕೆಯ ಸೀಟಿಗೆ ಸ್ಥಳಾಂತರಗೊಂಡಿದ್ದಾರೆ. ಜಯಾ ಮತ್ತು ರೇಖಾ ನಡುವಿನ ಹಾವು ಮುಂಗುಸಿ ದ್ವೇಷ ಎಲ್ಲರಿಗೂ ಗೊತ್ತಿರುವ ಸಂಗತಿ. 70ರ ದಶಕದಲ್ಲಿ ರೇಖಾ ಮತ್ತು ಅಮಿತಾಬ್ ಬಚ್ಚನ್ ನಡುವಿನ ಚಿತ್ರದಲ್ಲಿನ ಮತ್ತು ಚಿತ್ರದಾಚೆಗಿನ ಪ್ರೇಮ ಸಲ್ಲಾಪದಿಂದಾಗಿ ಜಯಾ ಮತ್ತು ಅಮಿತಾಬ್ ನಡುವಿನ ಸಂಬಂಧದಲ್ಲಿ ಬಿರುಕು ಕೂಡ ಬಿಡುವ ಹಂತ ತಲುಪಿತ್ತು.

  ಯಶ್ ಚೋಪ್ರಾ ಅವರ ಸಂಗೀತಮಯ, ಪ್ರೇಮಮಯ ಚಿತ್ರ 'ಸಿಲ್ ಸಿಲಾ'ದಲ್ಲಿ ಅಮಿತಾಬ್ ಬಚ್ಚನ್, ರೇಖಾ ಮತ್ತು ಜಯಾ ಬಚ್ಚನ್ ನಟಿಸಿದ್ದರು. ಇದರ ಕಥೆ ಮೂವರ ತ್ರಿಕೋನ ಪ್ರೇಮದ ನಡುವೆಯೇ ಗಿರಿಕಿ ಹೊಡೆದಿತ್ತು. ಇದು ಮೂವರ ನಿಜ ಜೀವನದ ಕಥೆಯೇನೋ ಎಂಬಷ್ಟರ ಮಟ್ಟಿಗೆ ಪುಕಾರು ಎದ್ದಿತ್ತು. ಸ್ಟಾರ್ ಡಸ್ಟ್ ಪತ್ರಿಕೆ ಬಚ್ಚನ್ ಮತ್ತು ರೇಖಾ ಸಂಬಂಧದ ಬಗ್ಗೆ ಪುಟಗಟ್ಟಲೆ ಬರೆದಿತ್ತು. ಕೊನೆಗೆ ಬಚ್ಚನ್ ಮತ್ತು ರೇಖಾ ದೂರವಾಗಿದ್ದರೂ ಎರಡೂ ಕುಟುಂಬಗಳ ನಡುವಿನ ವೈಮನಸ್ಯವನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ ಎಂಬುದಕ್ಕೆ ರಾಜ್ಯಸಭೆಯಲ್ಲಿನ ಘಟನೆಯೇ ಸಾಕ್ಷಿ.

  ಹಳೆಯ ಕಥೆ ಏನೇ ಇರಲಿ, ಏನೇ ಕಥೆಯನ್ನು ಹೇಳಲಿ ಅಮಿತಾಬ್ ಬಚ್ಚನ್ ಪಕ್ಕಾ ವೃತ್ತಿಪರರು ಎಂಬುದರಲ್ಲಿ ಎರಡು ಮಾತಿಲ್ಲ. ಈಗಲೂ ಕೂಡ ಅತ್ಯುತ್ತಮವಾದ ಕಥೆ ಸಿಕ್ಕರೆ ರೇಖಾ ಜೊತೆಗೆ ಮತ್ತೆ ಅಭಿನಯಿಸಲು ಸಿದ್ಧ ಎಂದು ಅಮಿತಾಬ್ ಬಚ್ಚನ್ ಹೇಳಿ ಮತ್ತೆ ಬೆಚ್ಚಿ ಬೀಳಿಸಿದ್ದಾರೆ. ಇದಕ್ಕೆ ಜಯಾ ಪ್ರತಿಕ್ರಿಯೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಂದ ಹಾಗೆ, ರಾಜ್ಯಸಭೆಗೆ ಆಯ್ಕೆಯಾಗಿರುವ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರಿಗೆ 103ನೇ ನಂಬರ್ ಸೀಟನ್ನು ನೀಡಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Actress and politician Jaya Bachchan has refused sit near to Actress Rekha in Rajya Sabha. Rekha is elected to Rajya Sabha along with cricketer Sachin Tendulkar. It is known fact that Rekha was linked to Jaya's husband Amitabh in 70s in previous century.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more