• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲೆಳೆದ ಅನಂತುಗೆ ಯಡಿಯೂರಪ್ಪ ತಿರುಗೇಟು

By Srinath
|
i-have-been-targeted-continuously-yeddyurappa
ಬೆಂಗಳೂರು, ಮೇ1: ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದ ಯಾವುದೇ ನಾಯಕನಿಗಾಗಲಿ ಅಧಿಕಾರ ಭಾಗ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಮೊನ್ನೆಯಷ್ಟೇ ಯಡಿಯೂರಪ್ಪಗೆ ಮನವರಿಕೆ ಮಾಡಿಕೊಟ್ಟಿದ್ದ ಅನಂತಕುಮಾರ್ ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ರಾಜಧಾನಿಯಲ್ಲಿ ಬಸವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪನವರು ತಮ್ಮ ವಿರೋಧಿಗಳ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದರು. ವೀರಶೈವನಾಗಿ ಹುಟ್ಟಿದ್ದೇ ನನ್ನ ತಪ್ಪಾ? ಎಂದು ವಾಗ್ದಾಳಿ ಆರಂಭಿಸಿದ ಯಡಿಯೂರಪ್ಪನವರು ಪದೇಪದೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತಮ್ಮ ನೋವು ತೋಡಿಕೊಂಡರು.

ಗಮನಾರ್ಹವೆಂದರೆ ನಾಡಿನ ಹಾಲಿ ಮತ್ತು ಮಾಜಿ ದೊರೆಗಳಿಬ್ಬರೂ ಇದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಅವರಿಬ್ಬರ ಮಧ್ಯೆ ಸಚಿವ ಸೋಮಣ್ಣ ಆಸೀನರಾಗಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ಮತ್ತು ಸದಾನಂದ ಗೌಡರು ಅಪ್ಪಿತಪ್ಪಿಯೂ ಕಣ್ಣು ಮಿಲಾಯಿಸಲಿಲ್ಲ. ಮಾತೂ ಆಡಲಿಲ್ಲ.

ಫ್ಲ್ಯಾಷ್ ಬ್ಯಾಕ್: ಬಿಜೆಪಿ ಭ್ರಷ್ಟಾಚಾರವನ್ನು ಬಲವಾಗಿ ವಿರೋಧಿಸುತ್ತದೆ. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮುಖಂಡರಿಗೆ ದೋಷಮುಕ್ತರಾಗುವವರೆಗೂ ಪಕ್ಷದಲ್ಲಿ ಸ್ಥಾನಮಾನ ನೀಡಿದ ಉದಾಹರಣೆಗಳಿಲ್ಲ. ನೀಡುವುದೂ ಇಲ್ಲ ಎಂದು ಅನಂತಕುಮಾರ್ ಭಾನುವಾರ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ್ದರು.

ಇದನ್ನೇ ನೆಪವಾಗಿಸಿಕೊಂಡ ಯಡಿಯೂರಪ್ಪನವರು ಅನಂತ ಕುಮಾರ್ ಅಥವಾ ಮತ್ಯಾರ ಹೆಸರನ್ನೂ ಪ್ರಸ್ತಾಪಿಸದೇ 'ನನ್ನನ್ನು ಪದೇಪದೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಯತ್ನಗಳು ನಡೆಯುತ್ತಿವೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ನನಗೆ ಮನವರಿಕೆಯಾಗಿದೆ. ಕಾಲ ಬಂದಾಗ ಎಲ್ಲವನ್ನೂ ಹೇಳುವೆ' ಎಂದು ಗುಡುಗಿದರು.

ನಾನು ಮಾಡದ ತಪ್ಪಿಗೆ ಶಿಕ್ಷೆ ವಿಧಿಸುತ್ತಿದ್ದಾರೆ. ಆದರೆ ನ್ಯಾಯಾಂಗದಲ್ಲಿ ನನಗೆ ಅಪಾರವಾದ ನಂಬಿಕೆಯಿದೆ. ಖಂಡಿತ ನಿರಪರಾಧಿಯಾಗಿ ಹೊರಬರುವೆ ಎಂದು ಅವರು ತುಂಬು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅಪರಾಧಿ ನಾಯಕರುಗಳು ಪಕ್ಷದಲ್ಲಿಲ್ಲ: ಈ ಮಧ್ಯೆ, ಮಂಗಳೂರಿನಲ್ಲಿ ಮಾತನಾಡಿರುವ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ತಮ್ಮ ಪುರಾತನ ಗೆಳೆಯನ ನೆರವಿಗೆ ಧಾವಿಸಿದ್ದಾರೆ. ಶಿಕ್ಷೆಗೊಳಗಾದವರು ಯಾರೂ ಪಕ್ಷದ ರಾಜ್ಯ ಘಟಕದಲ್ಲಿ ಇಲ್ಲ. ಕೋರ್ಟಿನಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಅಂದ ಮಾತ್ರಕ್ಕೆ ಅಂತಹವರನ್ನು ತಪ್ಪಿತಸ್ಥರು ಎಂದು ಘೋಷಿಸುವುದು ಸರಿಯಲ್ಲ ಎಂದು ಅನಂತ ಕುಮಾರ್ ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP crisis: Karnataka ex CM BS Yeddyurappa has said once again that he has been targeted continuously and branded as a convict for no fault of mine. He was speaking at a function organised by Basava Samithi in Bangalore on May 1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more