ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೆಂದ್ರ ಮೋದಿಯವರೇ ಬ್ರಿಟನ್ನಿಗೂ ಬರಬೇಡಿ

By Srinath
|
Google Oneindia Kannada News

may-be-no-entry-for-modi-in-uk-also
ನವದೆಹಲಿ‌, ಮೇ1: ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ರಾಜ್ಯವನ್ನು ಸುಭಿಕ್ಷಗೊಳಿಸಿರಬಹುದು ಆದರೆ ನಾವು ಮಾತ್ರ ಅಮೆರಿಕಕ್ಕೆ ಬರುವುದಕ್ಕೆ ಆತನಿಗೆ ವೀಸಾ ನೀಡಲು ಸುತರಾಂ ಸಾಧ್ಯವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿರುವ ಬೆನ್ನಲ್ಲೇ ಬ್ರಿಟನ್ ಸಹ ಅದೇ ಹಾದಿ ಹಿಡಿದಿದೆ. ನಮ್ಮ ಹಾದಿಯಲ್ಲಿ ಬರಬೇಡಿ ಮೋದಿಜೀ ಎಂದು ನಯವಾಗಿಯೇ ಹೇಳಲು ಬ್ರಿಟನ್ ಸಜ್ಜಾಗುತ್ತಿದೆ.

ಈ ನಿಟ್ಟಿನಲ್ಲಿ, ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ತುತ್ತಾಗಿರುವ ಯುರೋಪ್ ಒಕ್ಕೂಟೇತರ ನಾಗರಿಕರಿಗೆ ನಿಷೇಧ ಹೇರುವ ಹೊಸ ಕಾನೂನನ್ನು ಜಾರಿಗೆ ತರಲು ಬ್ರಿಟನ್ ಹವಣಿಸುತ್ತಿದೆ. ಈ ಕಾನೂನು ಜಾರಿ ಬಳಿಕ 2002ರ ಗುಜರಾತ್ ಹತ್ಯಾಕಾಂಡವನ್ನು ನೆಪವಾಗಿಸಿಕೊಂಡು ಮೋದಿಗೆ ವೀಸಾ ನಿರಾಕರಿಸಬೇಕೆಂದು ಮಾನವ ಹಕ್ಕುಗಳ ಕಾರ್ಯಕರ್ತರು ಬ್ರಿಟನ್ ಸರಕಾರದ ಮೇಲೆ ಇತ್ತೀಚೆಗೆ ಒತ್ತಡ ಹೇರಿದ್ದಾರೆ.

ಆದರೆ ಭಾವಿ ಪ್ರಧಾನಿ ಎಂದೇ ಬಿಂಬಿತವಾಗಿರುವ ಮೋದಿ ಅವರು ನಾಳೆ ಪ್ರಧಾನಿಯಾದರೆ, ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳು ಭಾರತದ ಪ್ರಧಾನಿಯನ್ನು ಹೇಗೆ ಸ್ವಾಗತಿಸಬಹುದು ಎಂಬುದು ಬಿಲಿಯನ್ ಡಾಲರ್/ ಬಿಲಿಯನ್ ಪೌಂಡ್ ಪ್ರಶ್ನೆಯಾಗಿದೆ.

2003ರಲ್ಲಿ ಮೋದಿ ಅವರು ಬ್ರಿಟನ್ನಿಗೆ ಹೋದಾಗ ವ್ಯಾಪಕ ಪ್ರತಿಭಟನೆಗಳು ಕಂಡುಬಂದಿತ್ತು. ನಂತರ 2005ರಲ್ಲಿ ಮತ್ತೊಮ್ಮೆ ಅವರು ಬ್ರಿಟನ್ನಿಗೆ ಭೇಟಿ ನೀಡಲು ಮುಂದಾದರು. ಆದರೆ ಮಾನವ ಹಕ್ಕುಗಳ ಕಾರ್ಯಕರ್ತರು ಅವರ ವಿರುದ್ಧ ಅರೆಸ್ಟ್ ವಾರಂಟ್ ಪಡೆಯಲು ಯತ್ನಿಸಲು ಸಿದ್ಧತೆ ನಡೆಸಿದರು. ಇದರಿಂದ ಮೋದಿ ಆಗ ತಮ್ಮ ಬ್ರಿಟನ್ ಭೇಟಿಯನ್ನು ರದ್ದುಗೊಳಿಸಿದರು.

ಈ ಬಾರಿಯೂ ಮಾನವ ಹಕ್ಕುಗಳ ಕಾರ್ಯಕರ್ತರು ಸರಕಾರದ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದ್ದು, ಯಾವುದೇ ವ್ಯಕ್ತಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂಬುದರ ಸುಳಿವು ಸಿಕ್ಕಿದರೆ ಅಂತಹವರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ.

2002ರ ಗುಜರಾತ್ ನರಹತ್ಯೆಯನ್ನು ಖಂಡಿಸಿ, 2005ರ ಮಾರ್ಚ್ ನಲ್ಲಿ ಅಮೆರಿಕ ಸರಕಾರ ಮೋದಿಗೆ ವೀಸಾ ನಿರಾಕರಿಸಿದೆ. ಅಮೆರಿಕ ತನಗೆ ವೀಸಾ ನಿರಾಕರಿಸಿದ್ದನ್ನು 'ಭಾರತದ ಸಂವಿಧಾನಕ್ಕೇ ಅವಮಾನ. ಭಾರತದ ಸಾರ್ವಭೌಮತ್ವದ ಮೇಲಿನ ಪ್ರಹಾರ' ಎಂದು ಮೋದಿ ಸಿಡಿಮಿಡಿಗೊಂಡಿದ್ದರು.

English summary
A new law banning the entry of non-European Union citizens accused of human rights violations can be used to bar Gujarat Chief Minister Narendra Modi from entering Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X