ಮೀರ್ ಸಾದಿಕ್ ಗಳ ಬಗ್ಗೆ ಪುಸ್ತಕ ರಿಲೀಸ್ : ಬಿಎಸ್ ವೈ

BS Yeddyurappa
ತುಮಕೂರು, ಏ.30 ನನ್ನ ಜೊತೆಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದಂಥ ಮೀರ್‌ಸಾದಿಕ್‌ಗಳು ನಮ್ಮಲ್ಲಿದ್ದಾರೆ. ತಾನು ಯಾವ ತಪ್ಪು ಮಾಡದೆ ಇದ್ದರೂ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದವರನ್ನು ಕ್ಷಮೆ ಕೇಳುವಂತೆ ಮಾಡುತ್ತೇನೆ. ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ಬರೆದ ಪುಸ್ತಕ ಶೀಘ್ರವೇ ನು ಬಿಡುಗಡೆಗೊಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಪ್ರಪಂಚದಲ್ಲಿ ಯಾವ ತಪ್ಪು ಮಾಡದಿದ್ದರೂ ಕೇವಲ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ತಾನು. ತನ್ನನ್ನು ರಾಜಕೀಯವಾಗಿ ಮಟ್ಟ ಹಾಕುವ ಸಲುವಾಗಿ ವ್ಯವಸ್ಥಿತ ತಂತ್ರ ಹೆಣೆದಿದ್ದಾರೆ. ನನ್ನನ್ನು ರಾಜಕೀಯದಿಂದಲೇ ದೂರ ತಳ್ಳಲು ಕೆಲವರು ಮರ ಉರುಳಿಸಲು ಬುಡಕ್ಕೆ ಕೊಡಲಿ ಹಾಕಿದಂತೆ ತನ್ನನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಆದರೆ ನನ್ನನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಶಾಸಕರ ಬೆಂಬಲ : ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವನು ನಾನು, ರಾಜ್ಯ ಸುತ್ತಿ ಜನರ ವಿಶ್ವಾಸ ಗಳಿಸಿದ್ದೇನೆ. ನಾನು ಏಕಾಂಗಿಯಲ್ಲ, ನನ್ನ ಜೊತೆಗೆ ಈಗಲೂ 70 ಮಂದಿ ಶಾಸಕರಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಬಸವರಾಜು, ಅಪಘಾತ ಮಾಡಿ ತುರ್ತಾಗಿ ಯಡಿಯೂರಪ್ಪ ಕಾಣಲು ಬಂದ ಶಾಸಕ ಸುರೇಶ್‌ಗೌಡ, ಮಾಜಿ ಶಾಸಕ ಜೆಸಿ ಮಾಧುಸ್ವಾಮಿ, ಕಿರಣ್‌ಕುಮಾರ್, ಕೆರೆಗೋಡು ರಂಗಾಪುರದ ಪರದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಂಸದ ಮಲ್ಲಿಕಾರ್ಜುನಯ್ಯ ಮುಂತಾದವರಿದ್ದ ಗುಬ್ಬಿ ತಾಲೂಕಿನ ಮುದ್ದಪುರ ಗ್ರಾಮದ ಶನೈಶ್ಚರ ದೇವಾಲಯದ ನೂತನ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಯಡೀಯೂರಪ್ಪ ಕೇಂದ್ರ ಬಿಂದುವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+