ಮತ್ತೆ ಯಡಿಯೂರಪ್ಪ ಕಾಲೆಳೆದ ಅನಂತ ಕುಮಾರ್

ಪುರಾತನ ಭ್ರಷ್ಟಾಚಾರ ಕೇಸೊಂದರಲ್ಲಿ ಬಂಗಾರು ಲಕ್ಷಣನನ್ನು ಪಕ್ಷ ನಡೆಸಿಕೊಂಡ ರೀತಿಯನ್ನು ನೆನಪಿಸಿಕೊಡುತ್ತಾ ಯಾವುದೇ ನಾಯಕನಿಗಾಗಲಿ ಇದೇ ಶಾಸ್ತಿ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ಭ್ರಷ್ಟಾಚಾರವನ್ನು ಬಲವಾಗಿ ವಿರೋಧಿಸುತ್ತದೆ. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮುಖಂಡರಿಗೆ ದೋಷಮುಕ್ತರಾಗುವವರೆಗೂ ಪಕ್ಷದಲ್ಲಿ ಸ್ಥಾನಮಾನ ನೀಡಿದ ಉದಾಹರಣೆಗಳಿಲ್ಲ. ನೀಡುವುದೂ ಇಲ್ಲ ಎಂದು ಅನಂತ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಭ್ರಷ್ಟಾಚಾರದ ಆರೋಪ ಹೊತ್ತಿದ್ದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಲಿಲ್ಲ. ಯಡಿಯೂರಪ್ಪನವರೂ ಆರೋಪಕ್ಕೊಳಗಾಗಿದ್ದರಿಂದ ಸಿಎಂ ಸ್ಥಾನವನ್ನು ತ್ಯಜಿಸುವಂತಾಯಿತು. ಯಡಿಯೂರಪ್ಪ ದೋಷಮುಕ್ತರಾಗುತ್ತಾರೆ ಎಂಬ ವಿಶ್ವಾವಾಸವಿದೆ. ಆಗ ಅವರಿಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ಯೋಚಿಸಲಿದ್ದಾರೆ ಎಂದು ಅನಂತ ಕುಮಾರ್ ಭಾನುವಾರ ಹುಬ್ಬಳ್ಳಿಯಲ್ಲಿ ಹೇಳಿದರು.
ಆದರೆ ಇಲ್ಲಿ ಸುಮಾರು ನಾನೂರು ಕೋಟಿ ರೂ. ಹುಡ್ಕೋ ಪ್ರಕರಣ ಸಮ್ಮನೆ ಹಾಗೇ ಜ್ಞಾಪಕಕ್ಕೆ ಬರುತ್ತಿದೆ.












Click it and Unblock the Notifications