• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೀ ಡೆಂಟಲ್ ಡಾಕ್ಟ್ರೆ, ಸೇಡಿಗೂ ಒಂದು ಮಿತಿ ಬೇಡ್ವಾ?

By Prasad
|
ಲಂಡನ್, ಏ. 30 : "ಏಯ್, ಏನೋ ತಿಳ್ಕೊಂಡಿದ್ದಿಯಾ ನನ್ನ. ಒಂದ್ ಬಿಟ್ಟಾ ಅಂದ್ರೆ ಎಲ್ಲಾ 32 ಹಲ್ಲು ಉದುರಿರಬೇಕು..." ದ್ವೇಷ ಕಟ್ಟಿಕೊಂಡವರು, ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿರುವವರು ಹೀಗೆ ಒಬ್ಬರಿಗೊಬ್ಬರು ಕಿರುಚಾಡುತ್ತ, ಮುಷ್ಟಿ ತೋರಿಸುತ್ತ ಎಗರಾಡುವುದು ಸರ್ವೇಸಾಮಾನ್ಯ.

ಹಾಗಂತ, ಹಲ್ಲು ಉದುರಿಸಿಬಿಡ್ತಾರಾ? ಹೋಗಲಿ, ಹಲ್ಲು ಉದುರಿಸಲು ಪ್ರಯತ್ನವಾದರೂ ಮಾಡ್ತಾರಾ? ನೋ ಚಾನ್ಸ್. ಆಡಿದಂತೆ ನಡೆದುಕೊಳ್ಳುವವರು ಬಲು ಕಡಿಮೆ. ಆಡದೆ ಮಾಡುವವರು ವಿರಳಾತಿ ವಿರಳ. ಇಂಥ ವಿರಳಾತಿವಿರಳ 'ವೀರ' ಮಹಿಳೆ ಇಲ್ಲಿದ್ದಾಳೆ. ಸದ್ಯಕ್ಕೆ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿದ್ದಾಳೆ.

ಈ ಸ್ವಾರಸ್ಯಕರ ಸುದ್ದಿಯ ಹಿನ್ನೆಲೆ ಹೀಗಿದೆ. ಅನ್ನಾ ಮಾಕೊವಿಯಾಕ್ ಎಂಬ 34ರ ದಂತ ವೈದ್ಯೆ 45ರ ಹರೆಯದ ಮರೆಕ್ ಒಲ್‌‌ಜೆವಸ್ಕಿ ಎಂಬಾತನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆದರೆ, ಆತ ಮಾಡಿದ್ದೇನೆಂದರೆ, ಪ್ರೀತಿಸುವ ಹಾಗೆ ನಾಟಕವಾಡಿ ಕೊನೆಗೊಂದು ದಿನ, ನನಗೂ ನಿನಗೂ ಸಂಬಂಧವಿಲ್ಲ ಎಂದು ಕೈ ಎತ್ತಿಬಿಟ್ಟ.

ಬೇರೆಯವರಾಗಿದ್ದರೆ ಒಂದು ಬಿಟ್ಟಿರೋರು, ಇಲ್ಲ ಬಿಟ್ಟು ದೂರ ಹೋಗಿರೋರು. ಆದರೆ, ಪ್ರಥಮ ಚುಂಬನದಲ್ಲಿ ದಂತ ಭಗ್ನವಾದ ಅನ್ನಾ ಸುಮ್ಮನೆ ಬಿಡ್ತಾಳಾ? ಹಲ್ಲಿನ ನೋವಿನಿಂದ ಬಳಲುತ್ತಿದ್ದ ಮರೆಕ್, ಚಿಕಿತ್ಸೆಗೆಂದು ತನ್ನ ಮಾಜಿ ಪ್ರಿಯತಮೆಯ ಬಳಿ ಬಂದಿದ್ದಾನೆ. ಹೈಡೋಸ್ ಅರವಳಿಕೆ ಇಂಜೆಕ್ಷನ್ ಕೊಟ್ಟ ಅನ್ನಾ ಆತನ ಬಾಯಲ್ಲಿ ಒಂದೂ ಹಲ್ಲು ಇರದಂತೆ ಕಿತ್ತು ಬಿಸಾಡಿದ್ದಾಳೆ. ಹೀಗೂ ಉಂಟೆ!

ಇಷ್ಟಕ್ಕೇ ಸುಮ್ಮನಾಗದೆ. ಅರವಳಿಕೆ ನೀಡಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದ ಪ್ರಿಯತಮನಿಗೆ ಏನಾಗಿದೆ ಎಂದು ಕೂಡ ಗೊತ್ತಾಗದಂತೆ ಬಾಯಿಯನ್ನು ಮುಚ್ಚಿ, ದವಡೆ ಮತ್ತು ತಲೆ ಸೇರಿಸಿ ಪಟ್ಟಿ ಬಿಗಿದುಬಿಟ್ಟಿದ್ದಾಳೆ. ಅರವಳಿಕೆ ನೀಡಿದ್ದರಿಂದ ಏನೋ ಹೆಚ್ಚುಕಡಿಮೆ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದರೂ ಆತನಿಗೆ ಏನೂ ಮಾಡಲಾಗಿಲ್ಲ. ಸೇಡಿಗೂ ಒಂದು ಮಿತಿ ಬೇಡವಾ?

ಅವಳಿಗೆ ಕೈಕೊಟ್ಟಿದ್ದು ನಿಜ. ಆದರೆ, ಆಕೆ ವೃತ್ತಿಪರತೆ ಮೆರೆಯುತ್ತಾಳೆ ಎಂದು ತಿಳಿದಿದ್ದೆ. ಹೀಗೆ ಮಾಡುತ್ತಾಳೆ ಎಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಆತ ಕಣ್ಣೀರು ಹಾಕಿದ್ದಾನೆ. ಕಥೆ ಇಲ್ಲಿಗೇ ಮುಗಿದಿಲ್ಲ. ಆತ ಬಾಯಲ್ಲಿ ಒಂದೂ ಹಲ್ಲು ಇರದಿದ್ದರಿಂದ ಹೊಸ ಗೆಳತಿ ಕೂಡ ಟಾಟಾ ಹೇಳಿಬಿಟ್ಟಿದ್ದಾಳೆ. ವಿಚಾರಣೆಯನ್ನು ಎದುರಿಸುತ್ತಿರುವ ಅನ್ನಾಳ ಆರೋಪ ಸಾಬೀತಾದರೆ ಜೈಲಲ್ಲಿ ರಾಗಿ ಬೀಸುವುದು ಖಚಿತ.

ಪ್ರೀತಿಸುವುದು, ಹೊಂದಾಣಿಕೆಯಾಗದಿದ್ದರೆ ಬೇರ್ಪಡುವುದು ಅತ್ಯಂತ ಸಹಜವಾದ ಕ್ರಿಯೆ. ಇದೇನೋ ಪೋಲಂಡ್‌ನಲ್ಲಿ ನಡೆದ ವಿದ್ಯಮಾನ. ಅಂಗಿ ಬದಲಾಯಿಸಿದಂತೆ ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಕಟ್ಟಿಕೊಳ್ಳುವುದು ಹೊಸದೂ ಅಲ್ಲ. ಇಂಥದೇ ಘಟನೆಗಳು ಭಾರತದಲ್ಲಾದರೆ, ಪ್ರೀತಿ ಪ್ರೇಮ ಪರಿತ್ಯಕ್ತಳಾದ ಹುಡುಗಿ ಏನು ಮಾಡಬೇಕು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಪ್ರೀತಿ ಪ್ರೇಮ ಸುದ್ದಿಗಳುView All

English summary
Height of revenge. Female dental doctor in Poland has removed all teeth of ex-lover, who dumped her. New girl friend of the person has deserted him as he has no teeth. The dentist is facing inquiry and could be sent to jail for 3 years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more