ಬೇಲೇಕೇರಿ ಸಿಬಿಐಗೆ , ಸಂತೋಷ್ ಹೆಗ್ಡೆ ಫುಲ್ ಖುಷ್

ಬೃಹತ್ ಪ್ರಮಾಣದ ಅದಿರನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದರೆ ಅದನ್ನು ರಾತ್ರೋರಾತ್ರಿ ವಿದೇಶಕ್ಕೆ ರಫ್ತು ಮಾಡಲಾಗಿದೆ. ಬೇಲಿಕೇರಿ ಅದಿರು ನಾಪತ್ತೆಗೆ ಸಂಬಂಧ ರಾಜ್ಯ ಸರಕಾರ ಕೇವಲ ಎಫ್‌ಐಆರ್ ದಾಖಲು ಮಾಡಿ ಕೈತೊಳೆದು ಕೊಂಡಿದೆ ಎಂದು ದೂರಿದರು.
ಜನಾರ್ದನ ರೆಡ್ಡಿ ಹಾಗೂ ಆಂಧ್ರದ ಭಾರಿ ರಾಜಕಾರಣಿಗಳು, ಉದ್ಯಮಿಗಳ ಕಂಪನಿಗಳ ಅದಿರು ರಫ್ತು ಮಾಡಲು ಬೇಲೇಕೇರಿ ಬಂದರು ಬಳಕೆಯಲ್ಲಿತ್ತು. ಆಂಧ್ರದ ಸಿಬಿಐ ತಂಡ ಒಮ್ಮೆ ಇಲ್ಲಿ ಭೇಟಿ ನೀಡಿದ್ದು ಬಿಟ್ಟರೆ ಮತ್ತೆ ತನಿಖೆ ನಡೆದ ಯಾವುದೇ ವರದಿಯಾಗಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಂಸ್ಥೆ ನೀಡಿದ ಎರಡನೇ ವರದಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಲೋಕಾಯುಕ್ತ ವರದಿ ಅಂಶಗಳನ್ನು ಜನತಾ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದೇನೆ. ಆದರೆ, 25 ಸಾವಿರ ಪುಟಗಳ ಗಣಿ ಅಕ್ರಮ ವರದಿಯನ್ನು ಸರ್ಕಾರ ಇನ್ನೂ ಸ್ವೀಕರಿಸದಿರುವುದು ಬೇಸರ ತರಿಸಿದೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.












Click it and Unblock the Notifications