ಕೋಟಿ ಗೆದ್ದು ಕೋಟಿ ದಾನಮಾಡಿದ ಕೋಟ್ಯಾಧಿಪತಿ

ಇದರಲ್ಲಿ ಏನು ವಿಶೇಷ, ಗಂಡ ಗೆದ್ದ ದುಡ್ಡು ಹೆಂಡತಿ ಕೈ ಸೇರಿದೆ ಎಂದು ಮೂಗು ಮುರಿಯುವಂತಿಲ್ಲ. Huntsville ನಿವಾಸಿ ಜೇಮ್ಸ್ ಎರಡು ಬಾರಿ ಬ್ರೈನ್ ಟ್ಯೂಮರ್ ಹೊಡೆತಕ್ಕೆ ಸಿಕ್ಕಿ ಬದುಕುಳಿದ್ದಾನೆ.
ಪ್ರಪಂಚದಲ್ಲಿ ಕೇವಲ 4% ಕಾಣಿಸಿಕೊಳ್ಳುವ ಈ ವಿಚಿತ್ರ ಕಾಯಿಲೆ ಹೆಸರು oligodendroglioma. ಈ ವಿರಳ ಕಾಯಿಲೆ ವಿರುದ್ಧ ಸಮರ ಸಾರಿರುವ ಜೇಮ್ಸ್ ಪತ್ನಿ ನ್ಯಾನ್ಸಿ Operation Oligo Cure ಎಂಬ ಲಾಭರಹಿತ ಸಂಸ್ಥೆ ಹುಟ್ಟುಹಾಕಿದ್ದಾರೆ. ಜೇಮ್ಸ್ ತಾನು ಗೆದ್ದ ಹಣವನ್ನು ಈ ಸಂಸ್ಥೆಗೆ ನೀಡಿ ಎಲ್ಲರ ಮನ ಗೆದ್ದಿದ್ದಾನೆ.
2010ರಲ್ಲಿ ಟ್ಯೂಮರ್ ಫ್ರೀ ಎನಿಸಿಕೊಂಡ 40 ವರ್ಷದ ಪೆರಿಗೆ ಇಬ್ಬರು ಮಕ್ಕಳಿದ್ದಾರೆ. ತಾಳ್ಮೆ ಹಾಗೂ ಸಹಿಸುವ ಗುಣ ನನ್ನ ಪತ್ನಿಯಿಂದ ಕಲಿತೆ. ಇದು ಟ್ಯೂಮರ್ ಕೊಲ್ಲಲು, ಗೇಮ್ ಗೆಲ್ಲಲು ಸಹಕಾರಿಯಾಯಿತು ಎಂದು ಜೇಮ್ಸ್ ಹೇಳಿದ್ದಾನೆ.












Click it and Unblock the Notifications