ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ, ನೋ ಇಂಟರೆಸ್ಟ್ ಎಂದ ಗೌಡ್ರು

By Mahesh
|
Google Oneindia Kannada News

HD Deve Gowda
ಹಾಸನ, ಏ.27: ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆ ವೇಳೆ ದೇವೇಗೌಡರ ಹೆಸರನ್ನು ಸೂಚಿಸುವಂತೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಒಕ್ಕಲಿಗರ ವೇದಿಕೆ ಒತ್ತಾಯಿಸಿತ್ತು. ಜೆಡಿಎಸ್ ಪಕ್ಷದಲ್ಲೂ ಕೆಲವರು ಸಾಧ್ಯಾಸಾಧ್ಯತೆ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಒಕ್ಕಲಿಗರ ಕನಸಿಗೆ ಮಾಜಿ ಪ್ರಧಾನಿ ದೇವೇಗೌಡರು ತಣ್ಣಿರೆರಚಿದ್ದಾರೆ.

ದೇಶದ ಮುಂದಿನ ರಾಷ್ಟ್ರಪತಿ ಆಯ್ಕೆ ವಿಷಯದಲ್ಲಿ ತಾವು ಯಾರ ಹೆಸರನ್ನೂ ಹೇಳುವುದಿಲ್ಲ. ಚುನಾವಣೆ ಕಣಕ್ಕೂ ಇಳಿಯುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಹೇಳಿದ್ದಾರೆ. ಹಾಸನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಈ ಬಗ್ಗೆ ದೊಡ್ಡ ದೊಡ್ಡ ಪಕ್ಷಗಳವರು ಮಾತನಾಡುತ್ತಾರೆ ಏನಾಗುತ್ತದೆ ನೋಡೋಣ ಎಂದರು.

ಇಂಥ ವಿಷಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸಣ್ಣ ಪಕ್ಷಗಳು ಲೆಕ್ಕಕ್ಕೆ ಬರುವುದು ಕೊನೆಯಲ್ಲಿ ಎಂದರು. ಯಾರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಬೇಕು ಎನ್ನುವುದರ ಬಗ್ಗೆ ನಾನು ಏನನ್ನೂ ಹೇಳ ಬಯಸುವುದಿಲ್ಲ. ನನಗೆ ರಾಷ್ಟ್ರಪತಿ ಸ್ಥಾನದ ಬಗ್ಗೆ ಗೌರವವಿದೆ. ಒಕ್ಕಲಿಗರ ಸಂಘದ ಒತ್ತಾಯದ ಬಗ್ಗೆ ಇತರೆ ಪಕ್ಷಗಳು ನಿರ್ಧಾರ ಕೈಗೊಳ್ಳಬೇಕು. ನಾನೆಂದು ಅಧಿಕಾರ ಬಯಸಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಕಣಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೆ ತಮ್ಮ ಬೆಂಬಲ ನೀಡುತ್ತಾರೆ ಎಂಬ ಗುಟ್ಟನ್ನು ಜೆಡಿಎಸ್ ಸಂಸದ ದೇವೇಗೌಡರು ಬಿಟ್ಟು ಕೊಟ್ಟಿಲ್ಲ. ಇತರೆ ಪಕ್ಷಗಳು ಈಗಾಗಲೇ ತಮ್ಮ ಬೆಂಬಲದ ಅಭ್ಯರ್ಥಿಗಳನ್ನು ಹೆಸರಿಸಿದೆ. ಕಲಾಂ ಅವರ ಪರ ಎಸ್ ಪಿ, ಎಐಎಡಿಎಂಕೆ, ಟಿಎಂಸಿ ಮುಂತಾದ ಪಕ್ಷಗಳು ನಿಂತಿದೆ. ಜುಲೈ ತಿಂಗಳ ಅಂತ್ಯಕ್ಕೆ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ.

English summary
Former Prime Minister HD Deve Gowda said he is not interested in upcoming Indian Presidential election and will not name any candidate and support. Pratibha Patil term will be over by end of July, 2012. National parties will ask regional parties opinion only at the end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X