ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ರಿಗುಪ್ಪೆ ಕೌನ್ಸಿಲರ್ ಬೆಂಗಳೂರಿನ ಹೊಸ ಮೇಯರ್

|
Google Oneindia Kannada News

D. Venkatesha Murthy
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 46ನೇ ಮೇಯರ್ ಆಗಿ ಕತ್ರಿಗುಪ್ಪೆ ವಾರ್ಡ್ ಸದಸ್ಯ ಡಿ. ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಪದ್ಮನಾಭನಗರ ವಾರ್ಡ್ ಸದಸ್ಯ ಎಲ್ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ವುಡ್ ಲ್ಯಾಂಡ್ಸ್ ಹೋಟೆಲಿನಲ್ಲಿ ನಡೆದ ಉಪಾಹಾರ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ನಾಯಕರು ವೆಂಕಟೇಶ್ ಮೂರ್ತಿ ಮತ್ತು ಶ್ರೀನಿವಾಸ್ ರನ್ನು ಆಯ್ಕೆ ಮಾಡಿದರು.

ನೂತನವಾಗಿ ಆಯ್ಕೆಯಾದ ಮೇಯರ್ ಮತ್ತು ಉಪಮೇಯರ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಕೆಂಪೇಗೌಡ ಪೌರಸಭಾಂಗಣದ ಆವರಣದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಗುರುವಾರ (ಏ.26) ಮಧ್ಯಾಹ್ನ 3 ಗಂಟೆ ವೇಳೆಗೆ ಮೇಯರ್ ಹಾಗೂ ಉಪ ಮೇಯರ್ ಅವರ ಆಯ್ಕೆ ಪ್ರಕಟಣೆ ಅಧಿಕೃತವಾಗಿ ಹೊರಬಿತ್ತು.

ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಶಾಖಾಂಬರಿನಗರ ವಾರ್ಡ್‌ನ ಸೋಮಶೇಖರ್, ಬನಶಂಕರಿ ದೇವಸ್ಥಾನ ವಾರ್ಡ್‌ನ ಎ. ಎಚ್. ಬಸವರಾಜು ಮೇಯರ್ ಹುದ್ದೆಗೆ ಪ್ರಬಲ ಪೈಪೋಟಿ ನೀಡಿದ್ದರು.

English summary
Katriguppe BJP corporator D Venkatesha Murthy elected Mayor of Bangalore. Dy Mayor L Srinivas (Padmanabhanagar ward) Congratulations to the new team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X