ಸಧ್ಯ! ಅಡುಗೆ ಅನಿಲ ಬೆಲೆ ಡಿಕಂಟ್ರೋಲ್ ಮಾಡೊಲ್ಲ

diesel-prices-to-be-decontrolled-but-not-lpg
ನವದೆಹಲಿ,ಏ.25: ಸುಮಾರು ಒಂದು ವರ್ಷದ ಹಿಂದೆ ಪೆಟ್ರೋಲ್ ಬೆಲೆ ನಿಯಂತ್ರಣ ನಿರ್ಧಾರವನ್ನು ಮಾರುಕಟ್ಟೆ ಮುಕ್ತಗೊಳಿಸಿ, ಆಗಾಗ್ಗೆ ಗ್ರಾಹಕರಿಗೆ ಸಮ ಬರೆ ಹಾಕುತ್ತಿರುವ ಕೇಂದ್ರ ಸರಕಾರ ಸದ್ಯಕ್ಕೆ ಅಡುಗೆ ಅನಿಲ ಬೆಲೆ ಡಿಕಂಟ್ರೋಲ್ ಮಾಡೊಲ್ಲ ಎಂದು ಭರವಸೆ ನೀಡಿದೆ. ಅಷ್ಟರಮಟ್ಟಿಗೆ ಗೃಹಿಣಿಯರು ಬಚಾವ್!

ಆದರೆ ಡೀಸೆಲ್ ಬೆಲೆ ನಿಗದಿ ಅಧಿಕಾರವನ್ನು ನಿಯಂತ್ರಣ ಮುಕ್ತಗೊಳಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಡೀಸಲ್ ಬಳಕೆದಾರರಿಗೆ ಇನ್ನು ಸಂಕಷ್ಟ ಶುರುವಾಗಲಿದೆ. ಹೆಚ್ಚಾಗಿ ಡೀಸೆಲ್ ಬಳಸುವ ಮೇಲ್ಮಧ್ಯಮ ವರ್ಗದವರು ಇನ್ನು ಮುಂದೆ ಆಗಾಗ ಡೀಸೆಲ್ ಬೆಲೆ ಹೆಚ್ಚಳ ತಾಪತ್ರಯ ಅನುಭವಿಸಬೇಕಾಗುತ್ತದೆ.

ಮಂಗಳವಾರ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ನಮೋ ನಾರಾಯಣ ಮೀನಾ ಈ ವಿಷಯ ತಿಳಿಸಿದ್ದಾರೆ. ಡೀಸೆಲ್ ಬೆಲೆ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸುವ ನಿರ್ಧಾರಕ್ಕೆ ಕಳೆದ ಜೂನ್‌ನಲ್ಲಿಯೇ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು.

ಆದರೆ, ಕಚ್ಚಾ ತೈಲ ಬೆಲೆ ಹೆಚ್ಚಳವಾದಾಗ ಅಥವಾ ಹಣದುಬ್ಬರದಿಂದಾಗಿ ಜನರ ಹೊರೆ ತಗ್ಗಿಸಬೇಕಾದ ಸಂದರ್ಭ ಎದುರಾದಾಗ ಡೀಸೆಲ್‌ನ ಚಿಲ್ಲರೆ ಮಾರಾಟ ದರ ನಿಗದಿಯಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ ಎಂದೂ ಅವರು ಸಮಾಧಾನ ಮಾಡಿದ್ದಾರೆ.

ಡೀಸೆಲ್ ಬೆಲೆಯನ್ನು ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧರಿಸುವ ಅಧಿಕಾರವನ್ನು ತೈಲ ಕಂಪನಿಗಳಿಗೇ ಬಿಡಲಾಗುವುದು ಎಂದ ಅವರು, ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ನಿರ್ಧಾರವನ್ನು ನಿಯಂತ್ರಣ ಮುಕ್ತಗೊಳಿಸುವ ಯಾವ ಪ್ರಸ್ತಾವವೂ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವು ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಆಘಾತ ನೀಡುವ ಲಕ್ಷಣಗಳಿವೆ. ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ಏನು ಸುಳಿವು ನೀಡಿದ್ದರೋ ಅದನ್ನು ಈಗ ಸರ್ಕಾರವೇ ದೃಢಪಡಿಸಿದಂತಾಗಿದೆ. ಡೀಸೆಲ್ ಬೆಲೆ ಹೆಚ್ಚಳವು ಇತರೆಲ್ಲಾ ದರಗಳ ಹೆಚ್ಚಳಕ್ಕೂ ಕಾರಣವಾಗುವುದರಿಂದ ಈ ಪ್ರಸ್ತಾವವನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+