ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧಿಗಳಿಗಾಗಿ ಡಿಡಿ ಚಾನೆಲ್ ಆರಂಭಿಸಿ: ಅಡ್ವಾಣಿ

By Mahesh
|
Google Oneindia Kannada News

LK Advani
ಮುಂಬೈ, ಏ.23: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತ್ಯೇಕ ಸರ್ಕಾರಿ ನ್ಯೂಸ್ ಚಾನೆಲ್ ಆರಂಭಿಸುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರು ಕೂಡಾ ಟಿವಿ ಚಾನೆಲ್ ಕಡೆ ಒಲವು ತೋರಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಸಿಂಧಿ ಸಮುದಾಯಕ್ಕಾಗಿ ಪ್ರತ್ಯೇಕ ದೂರದರ್ಶನ ವಾಹಿನಿ ಆರಂಭಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಎಲ್ ಕೆ ಅಡ್ವಾಣಿ ಹೇಳಿದ್ದಾರೆ.

ಸಿಂಧಿ ಜನಾಂಗದವರು ದೇಶದೆಲ್ಲೆಡೆ ತಮ್ಮ ಸಂಸ್ಕೃತಿ, ಪ್ರತಿಭೆಯಿಂದ ಹೆಸರುವಾಸಿಯಾಗಿದ್ದಾರೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಿಂಧಿಗಳು ಮಾಡಿಕೊಂಡು ಬಂದಿದ್ದಾರೆ. ಇವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನನ್ನ ಉದ್ದೇಶ ಇದಕ್ಕೆ ರಾಷ್ಟ್ರೀಯ ವಾಹಿನಿ ಬಹುಮುಖ್ಯವಾಗಿ ಬೇಕಾಗುತ್ತದೆ ಎಂದು ಸಿಂಧಿ ಜನಾಂಗಕ್ಕೆ ಸೇರಿದ ಅಡ್ವಾಣಿ ಹೇಳಿದ್ದಾರೆ.

ಸಿಂಧಿಗಳ ಸಂಸ್ಕೃತಿ ಹಾಗೂ ಭಾಷೆ ಉಳಿವಿಗಾಗಿ ಪ್ರತ್ಯೇಕ ದೂರದರ್ಶನ ಬೇಕು ಎಂದು ಸಿಂಧಿ ಜನಾಂಗದವರು ಬಹು ವರ್ಷಗಳಿಂದ ಪ್ರಧಾನಿ ಸಚಿವಾಲಯಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ.

ಖ್ಯಾತ ನಾಮರು: ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಾಲನಿ, ಲಾಲ್ ಕೃಷ್ಣ ಅಡ್ವಾಣಿ, ರಾಮ್ ಜೇಠ್ಮಲಾನಿ, ಅಫ್ತಾಬ್ ಶಿವದಾಸಾನಿ, ತಮನ್ನಾ ಭಾಟಿಯಾ, ಬಬಿತಾ, ಹಂಸಿಕಾ ಮೊಟ್ವಾನಿ, ಪ್ರೀತಿ ಜಿಂಗಾನಿಯಾ, ಅಂಜನಾ ಸುಖಾನಿ, ಹಾಟ್ ಮೇಲ್ ಖ್ಯಾತಿಯ ಸಬೀರ್ ಭಾಟಿಯಾ ಮುಂತಾದವರು ಸಿಂಧಿ ಜನಾಂಗದ ಹೆಸರಾಂತ ವ್ಯಕ್ತಿಗಳಾಗಿದ್ದಾರೆ. ಪಾಕಿಸ್ತಾನದ ಜುಲ್ಫಿಕರ್ ಭುಟ್ಟೋ, ಬೆನಜೀರ್ ಭುಟ್ಟೋ ಕುಟುಂಬ ಕೂಡಾ ಇದೇ ಜನಾಂಗಕ್ಕೆ ಸೇರಿದೆ.

English summary
Senior BJP Leader L K Advani today said that he would personally request Prime Minister Manmohan Singh to start a DD Sindhi channel to showcase the culture and talent of the community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X