ರಾಷ್ಟ್ರಪತಿಯಾಗಿ ಎಪಿಜೆ ಅಬ್ದುಲ್ ಕಲಾಂ ಆಯ್ಕೆ ಖಚಿತ?

APJ Abdul Kalam
ನವದೆಹಲಿ, ಏ.23: ಚುನಾವಣೆ ಎಂದರೆ ಚಳಿಜ್ವರ ಬಂದಂತೆ ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರ ಬೆಚ್ಚಿ ಬೀಳುತ್ತಿದೆ. ರಾಷ್ಟ್ರಪತಿ ಚುನಾವಣೆ ಹತ್ತಿವಾಗುತ್ತಿದ್ದಂತೆ ಯುಪಿಎ ಇಬ್ಭಾಗವಾಗುತ್ತಿದೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಮಿತ್ರ ಪಕ್ಷಗಳೊಡನೆ ಕಾಂಗ್ರೆಸ್ ಕಾದಾಟ ಮುಂದುವರೆದಿದೆ. ಈ ಮಧ್ಯೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮತ್ತೊಮ್ಮೆ ರಾಷ್ಟ್ರದ 'ಪ್ರಥಮ ಪ್ರಜೆ' ಎನಿಸುವ ಸೂಚನೆ ಸಿಕ್ಕಿದೆ.

ಯುವನಾಯಕ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಜೆ ಜಯಲಲಿತಾ ಅವರ ಎಐಎಡಿಎಂಕೆ ಹಾಗೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಕಲಾಂ ಅವರಿಗೆ ಬೆಂಬಲ ನೀಡಲು ಮುಂದಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಕಾಂಗ್ರೆಸ್ ಬೆಚ್ಚುವ ಅಗತ್ಯವಿರಲಿಲ್ಲ. ಎನ್ ಸಿಪಿ ಮುಖಂಡ ಶರದ್ ಪವಾರ್ ಕೂಡಾ ಕಲಾಂ ಅವರಿಗೆ ಪೂರಕವಾಗಬಲ್ಲ ಮಾತುಗಳನ್ನು ಆಡಿದ್ದಾರೆ. ರಾಜಕೀಯ ಪಕ್ಷಗಳಿಂದ ಹೊರತಾದ ಅಭ್ಯರ್ಥಿಗೆ ಎನ್ ಸಿಪಿ ಬೆಂಬಲ ನೀಡುತ್ತದೆ. ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಶರದ್ ಪವಾರ್ ಹೇಳಿದ್ದರು.

ಈ ಮುಂಚೆ ಮಾಜಿ ಲೋಕಸಭಾ ಸ್ಪೀಕರ್ ಪಿಎ ಸಂಗ್ಮಾ ಅವರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಲು ಎನ್ ಸಿಪಿ ಉತ್ಸುಕವಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಪಕ್ಷೇತರ ವ್ಯಕ್ತಿಯನ್ನು ಮಾತ್ರ ಬೆಂಲಿಸುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಚುರುಕು ಮುಟ್ಟಿಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣರಾದ ಸ್ಯಾಮ್ ಪಿತ್ರೋಡಾ, ಹಮೀದ್ ಅನ್ಸಾರಿ ಹೆಸರನ್ನು ಇಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಅಂತಿಮವಾಗಿ ಸ್ಯಾಮ್ ಹಾಗೂ ಕಲಾಂ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಯಾವುದಕ್ಕೂ ಜುಲೈ ತಿಂಗಳವರೆಗೂ ಕಾಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+