ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RIL: ನಿವ್ವಳ ಲಾಭ ಕುಸಿತ; ಆದರೆ ಸಾಲಮುಕ್ತ

By Srinath
|
Google Oneindia Kannada News

ril-q4-2012-profit-down-becomes-debt-free
ಮುಂಬೈ, ಏ.23: ನಾಲ್ಕನೇ ತ್ರೈಮಾಸಿಕ ಫಲಿತಾಂಶದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯಂತೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿ (RIL) ಸಹ ಕಳಪೆ ಸಾಧನೆ ಮಾಡಿದೆ. ಆದರೆ RIL ಈಗ ಸಾಲ ಮುಕ್ತ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 70,252 ಕೋಟಿ ರೂ. ನಗದು ಗುಡ್ಡೆಹಾಕಿಕೊಂಡಿರುವ ಮುಕೇಶ್ ಅಂಬಾನಿ ಅವರು ತಮ್ಮ ಕಂಪನಿಯನ್ನು ಸಾಲ ಮುಕ್ತಗೊಳಿಸುವುದಾಗಿ 10 ತಿಂಗಳ ಹಿಂದೆಯಷ್ಟೇ ಘೋಷಿಸಿದ್ದರು.

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿ ಸಾಲ ಶೇ. 1ರಷ್ಟು ಹೆಚ್ಚಾಗಿದ್ದರೆ ಕಂಪನಿಯ ನಗದು ಪ್ರಮಾಣ ಶೇ. 66ರಷ್ಟು ಏರಿಕೆಯಾಗಿದೆ. ಇಷ್ಟೊಂದು ಭಾರಿ ಮೊತ್ತದ ನಗದು FD, ಬ್ಯಾಂಕ್ ಡೆಪಾಸಿಟ್, ಮ್ಯೂಚುಯಲ್ ಫಂಡ್ ಮತ್ತು ಸರಕಾರಿ ಸಾಲಪತ್ರಗಳಲ್ಲಿ ಭದ್ರವಾಗಿದೆ.

ಲಾಭ ಶೇ. 21 ಕುಸಿತ: ಕಳೆದ ಹಣಕಾಸು ವರ್ಷದ (2011-12) ನಾಲ್ಕನೇ ತ್ರೈಮಾಸಿಕದಲ್ಲಿ RIL 4,236 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಶೇ 21.20ರಷ್ಟು ಭಾರಿ ಕುಸಿತ ಕಂಡಿದೆ.

ಜನವರಿ-ಮಾರ್ಚ್ ನಡುವಿನ ಅವಧಿಯಲ್ಲಿ ಕಂಪನಿಯ ವರಮಾನ ಶೇ. 18.86 ರಷ್ಟು ಹೆಚ್ಚಿದ್ದು, 87,477 ಕೋಟಿ ರೂ. ಗಳಷ್ಟಾಗಿದೆ. ಮಾರಾಟದಲ್ಲಿಯೂ ಶೇ. 17.21ರಷ್ಟು ಪ್ರಗತಿಯಾಗಿದ್ದು, ರೂ 85,182 ಕೋಟಿಗಳಷ್ಟಾಗಿದೆ. 2010-11ರ ಇದೇ ಅವಧಿಯಲ್ಲಿ ಕಂಪನಿ ರೂ73,591 ಕೋಟಿ ವರಮಾನ ಗಳಿಸಿತ್ತು. ನಿವ್ವಳ ಲಾಭ ಇಳಿಕೆಯಾದ ಹಿನ್ನೆಲೆಯಲ್ಲಿ ಕಂಪನಿಯ ಷೇರು ದರ ಒಂದಷ್ಟು ಕುಸಿತ ಕಂಡಿದೆ.

ಡಿವಿಡೆಂಡ್ ರೂ 8.50: 2011-12ನೇ ಹಣಕಾಸು ವರ್ಷದಲ್ಲಿ (ನಾಲ್ಕೂ ತ್ರೈಮಾಸಿಕಗಳಲ್ಲಿ) ಕಂಪನಿ ನಿವ್ವಳ ಲಾಭದಲ್ಲಿ ಶೇ 1.21ರಷ್ಟು ಕುಸಿತ ಕಂಡಿದೆ. 2010-11ರಲ್ಲಿ ರೂ 20,286 ಕೋಟಿಯಷ್ಟಿದ್ದ ನಿವ್ವಳ ಲಾಭ ನಂತರದ ವರ್ಷದಲ್ಲಿ ರೂ20,040 ಕೋಟಿಗೆ ಇಳಿದಿದೆ. ಒಟ್ಟಾರೆ ವರಮಾನ ವಾರ್ಷಿಕ ಶೇ. 33.78ರಷ್ಟು ಹೆಚ್ಚಿ, 3,36,096 ಕೋಟಿ ರೂ ಆಗಿದೆ. ಒಟ್ಟಾರೆ ಮಾರಾಟವೂ ಶೇ. 32.93ರಷ್ಟು ಹೆಚ್ಚಿದ್ದು, 3,29,904 ಕೋಟಿ ರೂ ನಷ್ಟಾಗಿದೆ. ಕಂಪನಿ 10 ರೂ ಮುಖಬೆಲೆಯ ಪ್ರತಿ ಷೇರಿಗೆ ರೂ 8.50 ರಂತೆ ಲಾಭಾಂಶ ಘೋಷಿಸಿದೆ.

English summary
At the end of last financial year ended March 31, 2012, Reliance Industries Ltd (RIL) had total cash balance of Rs 70,252 crore (USD 13.8 billion), as against an outstanding debt of Rs 68,259 crore (USD 13.4 billion) - making the country's most valued firm debt free on a net cash basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X