ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತದಿಗೆ, ಚಿನ್ನದ ಮೇಲೆ ಹೂಡಿಕೆ ನಮ್ಮ ಸಲಹೆ

By Mahesh
|
Google Oneindia Kannada News

Different ways to invest in gold
ಅಕ್ಷಯ ತದಿಗೆಯ ಸಂದರ್ಭ ಬಂಗಾರ ಕೊಳ್ಳಲು ಪ್ರಶಸ್ತವಾದ ಕಾಲ ಎಂಬ ನಂಬಿಕೆ ಹಿಂದೂಗಳಲ್ಲಿ ಬಲವಾಗಿ ಬೇರೂರಿದೆ. ಆದರೆ, ಚಿನ್ನದ ಮೇಲೆ ಬಂಡವಾಳ ಹೂಡಿಕೆ ಎಲ್ಲ ಕಾಲಕ್ಕೂ ಅನುಕೂಲಕರ. ಚಿನ್ನದ ಮೇಲೆ ಹಣ ಹೂಡಿದರೆ ನಷ್ಟವಂತೂ ಆಗುವುದಿಲ್ಲ. ಚಿನ್ನ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎನ್ನುವುದು ಉತ್ಪೇಕ್ಷೆಯಲ್ಲ ಸತ್ಯ ಎಂಬುದು ಜನರಿಗೆ ನಿಧಾನವಾಗಿ ತಿಳಿಯುತ್ತಿದೆ.

ಚಿನ್ನ, ಬೆಳ್ಳಿ, ಪ್ಲಾಟಿನಮ್, ರಿಯಲ್ ಎಸ್ಟೇರ್ ಮೇಲೆ ಹಣ ಹೂಡುವವರು ಅಕ್ಷಯ ತದಿಗೆ ದಿನವನ್ನು ವಿಶೇಷವಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ, ಚಿನ್ನದ ಮೇಲೆ ಬಂಡವಾಳ ಹೂಡುವುದು ಹೇಗೆ ಎಂಬ ಗೊಂದಲ ಜನರಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದಕ್ಕಾಗಿ ಚಿನ್ನ ಹೂಡಿಕೆ ಬಗ್ಗೆ ಅಕ್ಷಯ ತದಿಗೆ ಅಷ್ಟೇ ಅಲ್ಲ ಸರ್ವಕಾಲಿಕ ಸೂಕ್ತ ವಿಧಾನಗಳನ್ನು ಗುಡ್ ರಿಟರ್ನ್ಸ್.ಇನ್ ನಿಮ್ಮ ಮುಂದಿಡುತ್ತಿದೆ.

ಚಿನ್ನಾಭರಣ: ಇದು ಅತ್ಯಂತ ಸಾಂಪ್ರಾದಾಯಿಕ ವಿಧಾನ, ಅಜ್ಜಿ, ಮುತ್ತಜ್ಜಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಶುಭ ವಿಧಾನ. ಆದರೆ, ಈಗಿನ ಕಾಲಕ್ಕೆ ಇದು ಅಷ್ಟು ಸೂಕ್ತ ಎನಿಸುವುದಿಲ್ಲ. ಕಾರಣ, ಚಿನ್ನಾಭರಣ ಮಾಡಿಸಲು ಹೊದರೆ ಅನೇಕ ಕಡೆ ಲೇಬರ್ ಚಾರ್ಜ್, ಡಿಸೈನ್ ಚಾರ್ಜ್ ಅದು ಇದು ಎಂದು ಬೆಲೆ ಹೆಚ್ಚಾಗುತ್ತದೆ. ಹಳೆ ಚಿನ್ನದ ಆಭರಣ ಮನೆಯಲ್ಲಿದ್ದರೆ ಬೇಕಾದಾಗ ಉಪಯೋಗಿಸಬಹುದು. ಹೊಸದರ ಮೇಲೆ ಬಂಡವಾಳ ಹೂಡುವುದು ಒಂದು ಬಾರಿಗಾದರೆ ಓಕೆ. ಮತ್ತೆ ಮತ್ತೆ ವ್ಯವಹಾರ ನಡೆಸುತ್ತಾ ಹೋದರೆ ಕೈ ಸುಟ್ಟುಕೊಳ್ಳುವುದು ಖಂಡಿತ. 22 ಕ್ಯಾರೆಟ್ ಚಿನ್ನದಲ್ಲಿ ಆಭರಣ ಮಾಡುವುದು ಎಲ್ಲರಿಗೂ ಗೊತ್ತಿದೆ. ಅಪ್ಪಟ ಬಂಗಾರ ಆಭರಣಕ್ಕೆ ಬರುವುದಿಲ್ಲ.

ಚಿನ್ನದ ಕಾಯಿನ್/ ಬಾರ್ ಗಳು: ಚಿನ್ನದ ನಾಣ್ಯ ಹಾಗೂ ಬಾರ್ ಈಗಿನ ಟ್ರೆಂಡ್ ಗೆ ಬಂಡವಾಳ ಹೂಡಲು ಉತ್ತಮ ವಿಧಾನ. 10 ಗ್ರಾಮ್, 20 ಗ್ರಾಮ್ ಮುಂತಾದ ತೂಕದಲ್ಲಿ ಚಿನ್ನದ ನಾಣ್ಯಗಳು ಈಗ ಅಂಚೆ ಕಚೇರಿಯಲ್ಲೂ ಲಭ್ಯವಿದೆ. ಗೋಲ್ಡ್ ಬಾರ್ ಗಳು ಕೂಡಾ 1 ಗ್ರಾಂ, 2 ಗ್ರಾಂ..10ಗ್ರಾಂ ಹೀಗೆ ಲಭ್ಯವಿದೆ. ವಿವಿಧೆಡೆ ಬೆಲೆಯಲ್ಲಿ ಕೊಂಚ ಏರುಪೇರು ಆದರೂ, ಚಿನ್ನದ ನಾಣ್ಯದ ಮೇಲೆ ಹಣ ಹೂಡುವುದು ಜಾಣರ ಲಕ್ಷಣ. ಆದರೆ, ಅಧಿಕೃತ ಡೀಲರ್ ಗಳು, ಅಪ್ಪಟ ಚಿನ್ನ ಪರೀಕ್ಷೆಯಲ್ಲಿ ಕೆಲವೊಮ್ಮೆ ಮೋಸ ಹೋಗುವ ಸಂಭವವಿರುತ್ತದೆ. ಉಳಿದಂತೆ ಇದು ಬಂಡವಾಳ ಹೂಡಿಕೆಯ ಸರಳ, ಸುಲಭ ವಿಧಾನ.

ಇ- ಗೋಲ್ಡ್: ಷೇರುಗಳನ್ನು ಕೊಂಡಂತೆ ಇ ಗೋಲ್ಡ್ ಕೂಡಾ ಲಭ್ಯವಿರುತ್ತದೆ. ಆನ್ ಲೈನ್ ಬಂಡವಾಳ ಹೂಡಿಕೆ ವಿಧಾನ ಅಷ್ಟು ಜನಪ್ರಿಯವಲ್ಲದಿದ್ದರೂ ಸುರಕ್ಷಿತವಾಗಿದೆ. ಯಾವಾಗ ಬೇಕಾದರೂ ಇ ಗೋಲ್ಡ್ ಅನ್ನು ಕರಗಿಸಿ ವೈಯಕ್ತಿಕವಾಗಿ ಪಡೆಯಬಹುದು. ಇ ಗೋಲ್ಡ್ ಬಗ್ಗೆ ಇನ್ನೂ ಹೆಚ್ಚಿನ ಅರಿವು ಜನ ಸಾಮಾನ್ಯರಿಗೆ ಮೂಡಿಸಬೇಕಿದೆ. NSEL ನಲ್ಲಿ ನೋಂದಾಯಿಸಿರುವ ಡೀಲರ್ ನಿಂದ ಇ ಗೋಲ್ಡ್ ಖರೀದಿಸಬಹುದಾಗಿದೆ. ನೋಂದಣಿ ವೆಚ್ಚವೂ ಕಡಿಮೆಯಿದ್ದು, ಹೊಸ ಮಾದರಿಯಲ್ಲಿ ಚಿನ್ನವನ್ನು ಕೊಂಡ ಖುಷಿ ಕೂಡಾ ಗ್ರಾಹಕರಿಗೆ ಇದರಿಂದ ಲಭಿಸುತ್ತದೆ.

ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆದ್ ಫಂಡ್(ETF): ETF ಒಂದು ಮ್ಯೂಚಿಯಲ್ ಫಂಡ್ ಹೂಡಿಕೆ ವಿಧಾನವಾಗಿದೆ. ಷೇರುಪೇಟೆಯಲ್ಲಿ ಜಾಲಾಡುವವರಿಗೆ, ಅಲ್ಪಸ್ವಲ್ಪ ಮ್ಯೂಚಿಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಅನುಭವ ಉಳ್ಳವರಿಗೆ ಇದು ಸೂಕ್ತ ವಿಧಾನ. ಬಂಡವಾಳ ಹೂಡಿಕೆಯನ್ನು ಚಿನ್ನವಾಗಿ ಪರಿವರ್ತಿಸಿ ಶೇಖರಿಸಿಡುವುದು ಈ ವಿಧಾನದ ಮಾದರಿ.

ETF ಮೂಲಕ ಚಿನ್ನ ಖರೀದಿಸುವುದೆಂದರೆ ಎಲೆಕ್ಟ್ರಾನಿಕ್ ಮಾದರಿ ವ್ಯಾಪಾರ ಮಾಡಿದಂತಾಗುತ್ತದೆ. ಯೂನಿಟ್ ಲೆಕ್ಕದಲ್ಲಿ ಚಿನ್ನ ಮಾರಾಟಕ್ಕೆ ಲಭ್ಯವಿರುತ್ತದೆ. ಪ್ರತಿ ಯೂನಿಟ್ ಒಂದು ಗ್ರಾಮ್ ಚಿನ್ನಕ್ಕೆ ಸಮನಾಗಿರುತ್ತದೆ.

ನಂಬಬಲ್ಲ ETFಗಳಲ್ಲಿ ಮೋತಿಲಾಲ್ ಓಸ್ವಾಲ್ MOSt, ಕ್ಯಾನೆರಾ ರೊಬೆಕಾ, ಕೋಟಕ್ ಗೋಲ್ಡ್ ETF, ಯುಟಿಐ ಗೋಲ್ಡ್ ETF ಹಾಗೂ ರಿಲಯನ್ಸ್ ಗೋಲ್ಡ್ ಪ್ರಮುಖವಾಗಿದೆ.

ಗೋಲ್ಡ್ ಫ್ಯೂಚರ್ಸ್: ಗೋಲ್ಡ್ ಫ್ಯೂಚರ್ಸ್ ಟ್ರೇಡಿಂಗ್ ಶುರುವಾಗಿದ್ದು 2003ರ ವೇಳೆಗೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(MCX) ವೇದಿಕೆ ಮೂಲಕ ಚಿನ್ನದ ಖರೀದಿ, ಮಾರಾಟ ಹಾಗೂ ಚಿನ್ನದ ಭವಿಷ್ಯತ್ತು ವಿವರ ಲಭ್ಯವಿರುತ್ತದೆ.

ಇದು ಒಂದು ರೀತಿ ಜೂಜಾಟ ಎಂದರೂ ತಪ್ಪಾಗಲ್ಲ. ಸಂಕೀರ್ಣವಾದ ಈ ವಿಧಾನದಲ್ಲಿ ಬಂಡವಾಳ ಹೂಡಿಕೆದಾರರು ಅತ್ಯಂತ ಜಾಣ್ಮೆಯಿಂದ ಹೂಡಿಕೆ, ವ್ಯವಹಾರ ನಡೆಸಬೇಕಾಗುತ್ತದೆ. ಇಲ್ಲದಿದ್ದರೆ ಚಿನ್ನ ಕೈ ಕಚ್ಚುವುದಂತೂ ಖಂಡಿತ. (ಗುಡ್ ರಿಟರ್ನ್ಸ್)

English summary
According to Hindu religion investing in gold, silver, platinum, real estate on such occasions is considered auspicious as a belief exists that investing in the same will yield rich dividends in the future. GoodReturns.in suggests a few different ways in which you can invest in gold this Akshaya Tritiya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X