• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಲೇಶ್ವರ ಮಾರುಕಟ್ಟೆ ಧ್ವಂಸ ಯಾರು ಹೊಣೆ?

By Mahesh
|
ಬೆಂಗಳೂರು, ಏ.22: ನಗರದ ಮಲ್ಲೇಶ್ವರಂನ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿನ ಅಕ್ರಮ ಮಳಿಗೆಗಳು ಹಾಗೂ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ ಅಧಿಕಾರಿಗಳಿಗೆ ಗಾಂಧಿ ಬಜಾರಿನಲ್ಲಿ ಸಿಕ್ಕ ಸ್ವಾಗತವೇ ಮಲ್ಲೇಶ್ವರಂನಲ್ಲೂ ಸಿಕ್ಕಿದೆ.

ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿ, ಸಂಚಾರ ದಟ್ಟನೆ ಅಧಿಕವಾಗಿರುವ ಸಂಪಿಗೆ ರಸ್ತೆಯಲ್ಲಿ ಎರಡು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆನಡೆಸಿ ಪ್ರತಿಭಟನೆ ಮಾಡಲಾಯಿತು.

ಪೊಲೀಸರು ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಂದರ್ಭದಲ್ಲಿ ಸ್ಥಳದಲ್ಲೆ ಕೆಲ ಸಮಯ ತೀವ್ರ ಉದ್ವಿಗ್ನ ಸ್ಥಿತಿ ಕೂಡ ನಿರ್ಮಾಣ ವಾಗಿತ್ತು.

ನಮ್ಮದೇನು ತಪ್ಪಿಲ್ಲ:
ಬಿಬಿಎಂಪಿ, ವ್ಯಾಪಾರಿಗಳಿಗೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ವ್ಯಾಪಾರಿಗಳು ಮಾಡಿರುವ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

ಕೆಲವು ವ್ಯಾಪಾರಿಗಳಿಗೆ ಗುರುವಾರ ನೋಟಿಸ್ ನೀಡಿದ್ದು ನಿಜ. ಆದರೆ, ಮೂರು ತಿಂಗಳ ಹಿಂದೆಯೇ ಅಕ್ರಮ ಒತ್ತುವತಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು 60ಕ್ಕೂ ಅಧಿಕ ಅಂಗಡಿಯ ಭಾಗಗಳನ್ನು ಧ್ವಂಸಗೊಳಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

9 ವರ್ಷಗಳಿಂದ ಒತ್ತುವರಿಯ ಬಗ್ಗೆ ಚಕಾರವೆತ್ತದ ಅಧಿಕಾರಿಗಳು, ಪಾದಚಾರಿ ಗಳು ಮತ್ತು ಸಾರ್ವಜನಿಕರು ಓಡಾಡಲು ಸ್ಥಳವಿಲ್ಲ ಎಂದು ಹೇಳುತ್ತಿದ್ದಾರೆ. ನಾನು 30-35 ಸಾವಿರ ಸಾಲ ಮಾಡಿ ಇಲ್ಲಿ ಅಂಗಡಿ ಇಟ್ಟಿದ್ದೇನೆ ಈಗ ಎಲ್ಲಾ ನಾಶವಾಗಿದೆ ಏನು ಮಾಡಲಿ ಎಂದು ಜಯಮ್ಮ ಗೋಳಿಡುತ್ತಿದ್ದಾರೆ.

ಅಗತ್ಯ ಸೌಲಭ್ಯ ಕೊರತೆ: ಮಾರುಕಟ್ಟೆಯಲ್ಲಿ ಅಗತ್ಯ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲ. ಕಟ್ಟಡ ಕೂಡ ಶಿಥಿಲಗೊಂಡಿದೆ. ಮಳೆ ಬಂದರೆ ಮಾರುಕಟೆ ನೀರಿನಿಂದ ತುಂಬಿಕೊಳ್ಳು ತ್ತದೆ. ಆದರೆ, ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಏಕಾಏಕಿ ಒತ್ತುವರಿ ತೆರವಿಗೆ ಮುಂದಾಗಿರುವುದು ಏಕೆ ಎಂದು ಸ್ಥಳೀಯರು ಕೂಡಾ ಪ್ರಶ್ನಿಸಿದ್ದಾರೆ.

ಒತ್ತುವರಿ ತೆರವಿಗೆ ಸಂಬಂಧಿಸಿ ದಂತೆ ಅಧಿಕಾರಿಗಳು, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಸೂಕ್ತ ನಿಲ್ದಾಣ ವ್ಯವಸ್ಥೆ ಇಲ್ಲ. ಸಾರ್ವಜನಿಕರು ವ್ಯಾಪಾರಕ್ಕೆ ಬಂದ ತೊಂದರೆಯಾಗುತ್ತಿದ್ದು, ಮಾರುಕಟ್ಟೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಅಕ್ರಮ ಮಳಿಗೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bruhat Bangalore Mahanagara Palike (BBMP) drive to demolish encroached on the passages and a few unauthorized shops in the Malleswaram new vegetables market become big chaos on Saturday(Apr.22). Fruit vendors protested against BBMP and held 'Rasta Roko' for two hours on busy Sampige Road Banglore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more