ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುದ್ದು ಹಾಜರಾಗಲು ಮಾಜಿ ಸಿಎಂಗಳಿಗೆ ಸಮನ್ಸ್

By Prasad
|
Google Oneindia Kannada News

BS Yeddyurappa and HD Kumaraswamy
ಬೆಂಗಳೂರು, ಏ. 21 : ಸಂಕಷ್ಟಗಳು ಬಂದರೆ ಸಾಲುಸಾಲಾಗಿ ಬರುತ್ತವೆ ಎಂಬುದಕ್ಕೆ ಯಡಿಯೂರಪ್ಪನವರೇ ಜ್ವಲಂತ ಸಾಕ್ಷಿ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಸಿಇಸಿ ಸುಪ್ರೀಂ ಕೋರ್ಟಿಗೆ ವರದಿ ನೀಡಿದ್ದರ ಮರುದಿನವೇ, ಅಕ್ರಮ ಭೂಕಬಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಲಾಗಿದೆ.

ನ್ಯಾಯವಾದಿ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಖಾಸಗಿ ದೂರನ್ನು ಪರಿಗಣಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ. ಸುಧಾಕರ್ ರಾವ್ ಅವರು, ಯಡಿಯೂರಪ್ಪ, ಅವರ ಮಕ್ಕಳಾದ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಆದರ್ಶ ಡೆವಲಪರ್ಸ್ ನಿರ್ದೇಶಕರಾದ ಬಿ.ಎಂ. ಜೈಶಂಕರ್ ಮತ್ತು ಬಿ.ಎಂ. ಕರುಣೇಶ್ ಅವರು ಮೇ 24ರಂದು ಖುದ್ದು ಹಾಜರಾಗಬೇಕೆಂದು ಆದೇಶಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ಭೂಮಿ (ವರ್ಗಾವಣೆ ನಿಯಂತ್ರಣ) ಕಾಯ್ದೆಯಡಿ ಎಲ್ಲ ಆರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಎಚ್ಎಸ್ಆರ್ ಬಡಾವಣೆಯಲ್ಲಿ ನಿವೇಶನವನ್ನು ಅಕ್ರಮವಾಗಿ ವರ್ಗಾಯಿಸಿದ್ದರಿಂದ ರಾಜ್ಯದ ಬೊಕ್ಕಸಕ್ಕೆ 1.92 ಕೋಟಿ ರು. ನಷ್ಟವಾಗಿತ್ತು. ನಾಗರಬಾವಿಯಲ್ಲಿ ಡಿನೋಟಿಫಿಕೇಷನ್ ಮಾಡಿದ್ದಕ್ಕೆ ಪ್ರತಿಯಾಗಿ ಜೈಶಂಕರ್ ಅವರಿಂದ ಲಂಚ ಸ್ವೀಕರಿಸಿದ್ದರು ಎಂದು ಆರೋಪಿಸಲಾಗಿದೆ.

ಎಚ್ಡಿಕೆ, ಚೆನ್ನಿಗಪ್ಪ ವಿರುದ್ಧವೂ ಸಮನ್ಸ್ :
ಅರ್ಕಾವತಿ ಬಡಾವಣೆಯ ಅಕ್ರಮ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಮಹದೇವಸ್ವಾಮಿ ಎಂಬುವವರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಮೇ 21ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೆಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಅರಣ್ಯ ಸಚಿವ ಚೆನ್ನಿಗಪ್ಪ ಮತ್ತು ಈ ಅಕ್ರಮದಿಂದ ಲಾಭ ಪಡೆದ ಇನ್ನಿಬ್ಬರಿಗೆ ಸಮನ್ಸ್ ಜಾರಿ ಮಾಡಲಾಗಿದೆ. (ಪಿಟಿಐ)

English summary
Lokayukta special court has issued summons to BS Yeddyurappa and 5 others to appear before court in person on May 24 in a case related to land scam. The same court has also issued summons to HD Kumaraswamy and 3 others to appear on May 21 in person in a case related to denotification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X