54ರ ಚವ್ಹಾಣ್ ಮಾಡಿದ ಯಡವಟ್ಟಿಗೆ ವೇಶ್ಯೆ ಜೂಲಿ ಬಲಿ

ಮಾಡಿದ್ದೇನೆಂದರೆ, ಹೆಂಡತಿ ಮಗಳು ಇಲ್ಲದ ಸಮಯದಲ್ಲಿ ಅದೇನನ್ನಿಸಿತೋ ಏನೋ ವೇಶ್ಯೆಯೊಬ್ಬಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ಆಕೆಯ ಹೆಸರು ಜೂಲಿ. ಜೂಲಿಯೊಡನೆ ಇನ್ನೇನು ಸರಸದಾಟಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಅಚಾನಕ್ ಆಗಿ ಹೆಂಡತಿ ಮನೆಗೆ ಮರಳಿಬಿಟ್ಟಿದ್ದಾಳೆ. ಹೊರಗೆ ಹೆಂಡತಿ, ಒಳಗೆ ವೇಶ್ಯೆ, ಅಡಕತ್ತರಿಯಲ್ಲಿ ಚವ್ಹಾಣ್.
ಹೆಂಡತಿಯ ಆಗಮನದಿಂದ ಗಲಿಬಿಲಿಗೊಳಗಾದ ಚವ್ಹಾಣ್, ಬಾಗಿಲಿಗೆ ಒಳಗಡೆಯಿಂದ ಚಿಲುಕ ಹಾಕಿಕೊಂಡಿದ್ದಾನೆ. ಎಷ್ಟೊತ್ತಾದರೂ ಬಾಗಿಲು ತೆರೆಯದಿದ್ದರಿಂದ ಹೆಂಡತಿ ಹೊರಗಡೆಯಿಂದ ಲಾಕ್ ಮಾಡಿಕೊಂಡು ಸ್ನೇಹಿತರ ಮನೆಗೆ ಮಲಗಲು ಹೋಗಿದ್ದಾಳೆ. ಆಕೆ ಹೋದ ನಂತರ ಬಾಗಿಲು ತೆರೆಯಲು ಚವ್ಹಾಣ್ ಯತ್ನಿಸಿದಾಗ ಆಗಿಲ್ಲ. ಇನ್ನಷ್ಟು ಗೊಂದಲಕ್ಕೊಳಗಾದ ಆತ ಇನ್ನೊಂದು ಪ್ಲಾನ್ ಮಾಡಿದ.
ಬಾಲ್ಕನಿಗೆ ಬೆಡ್ ಶೀಟು, ಸೀರೆಯನ್ನು ಕಟ್ಟಿ ತಾನು ಮೊದಲು ಇಳಿದಿದ್ದಾನೆ. ಮೂರನೇ ಮಹಡಿಗೆ ಬಂದು ನೋಡಿದಾಗ ಡೋರ್ ಲಾಕ್. ಮತ್ತೆ ಕೆಳಗೆ ಇಳಿದು ಬಂದು ಜೂಲಿಗೆ ಸೀರೆ ಹಿಡಿದು ಇಳಿಯುವಂತೆ ಸೂಚಿಸಿದ್ದಾನೆ. ಆತ ಮಾಡಿ ಸಾಹಸ ತಾನೂ ಮಾಡಲು ಹೋಗಿ ಜೂಲಿ ಮೇಲಿಂದ ಬಿದ್ದು ಸತ್ತಿದ್ದಾಳೆ. ಈ ಘಟನೆ ಶುಕ್ರವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಮುಂಬೈನ ಸೆಂಟ್ರಲ್ ರೈಲ್ವೆ ಸ್ಟಾಫ್ ಕಾಲೋನಿಯಲ್ಲಿ ನಡೆದಿದೆ. ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎಂಬಂತಹ ಸ್ಥಿತಿ ಆತನದಾಗಿದೆ.












Click it and Unblock the Notifications