ಪ್ರೇಮ ಪ್ರಕರಣ : ಮಂಗಳೂರಿನಲ್ಲಿ ಯುವತಿಯ ಅಪಹರಣ

Young girl kidnapped in Mangalore
ಮಂಗಳೂರು, ಏ. 21 : ದೇವಸ್ಥಾನದಿಂದ ಮರಳುತ್ತಿದ್ದ 20ರ ಹರೆಯದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪರಿಚಿತ ಯುವಕರು ಅಪಹರಿಸಿದ ಘಟನೆ ಶುಕ್ರವಾರ ಸಂಜೆ ಮಂಗಳೂರಿನ ಬೋಲಾರದಲ್ಲಿ ನಡೆದಿದೆ. ಲತಿಕಾ ಅಪಹೃತಳಾದ ಯುವತಿ.

ಬ್ಯಾಚಲರ್ ಆಫ್ ಸೋಷಿಯಲ್ ಸರ್ವೀಸ್ ವಿದ್ಯಾರ್ಥಿನಿಯಾಗಿರುವ ಜೆಪ್ಪು ಪ್ರದೇಶದ ವಾಸಿಯಾಗಿರುವ ಲತಿಕಾ ತನ್ನ ತಾಯಿಯೊಂದಿಗೆ ಆಂಜನೇಯ ದೇವಸ್ಥಾನಕ್ಕೆ ಭೇಟಿಯಿತ್ತು ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೆಲ ಅಪರಿಚಿತ ಯುವಕರು ಲತಿಕಾಳನ್ನು ಬಲವಂತವಾಗಿ ಮಾರುತಿ ಓಮ್ನಿ ವ್ಯಾನ್‌ನಲ್ಲಿ ಹೊತ್ತೊಯ್ದಿದ್ದಾರೆ.

ಲತಿಕಾ ಅವರ ತಾಯಿ ರೇವತಿ ಅವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪ್ರಕಾರ, ಇಬ್ಬರೂ ದೇವಸ್ಥಾನದಿಂದ ಮರಳುತ್ತಿದ್ದಾಗ, ನಾಲ್ವರು ಯುವಕರು ಲತಿಕಾಳ ಬಾಯಿಮುಚ್ಚಿ ವಾಹನದೊಳಕ್ಕೆ ಎಳೆದುಕೊಂಡಿದ್ದಾರೆ. ರೇವತಿ ಪ್ರತಿರೋಧಿಸಿದರೂ ಅವರನ್ನು ತಳ್ಳಿ ಲತಿಕಾಳನ್ನು ಅಪಹರಿಸಿದ್ದಾರೆ.

ಪ್ರೇಮ ಪ್ರಕರಣವೇ ಯುವತಿಯ ಅಪಹರಣಕ್ಕೆ ಮುಖ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳ್ತಂಗಡಿಯ ವಿತೇಶ್ ಎಂಬ ಯುವಕ ಲತಿಕಾಳನ್ನು ಪ್ರೀತಿಸುತ್ತಿದ್ದ. ಲತಿಕಾ ಈ ಪ್ರೇಮವನ್ನು ಒಪ್ಪದಿದ್ದರಿಂದ ವಿತೇಶ್ ಅವಪಹಿರಿಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ವಿತೇಶನ ಹುಡುಕಾಟದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+