ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಲಂಚ: ಯಡಿಯೂರಪ್ಪ ವಿರುದ್ಧ ತನಿಖೆಗೆ ಶಿಫಾರಸು?

By Srinath
|
Google Oneindia Kannada News

sc-cec-panel-recommends-illegal-mining-probe-bsy
ನವದೆಹಲಿ, ಏ.20: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡುವಾಗ ಲಂಚ ಪಡೆದಿರುವುದು ಸಾಬೀತಾಗಿದ್ದು, ಅದನ್ನು ಸಿಬಿಐನಂತಹ ಸಂಸ್ಥೆಯಿಂದ ತನಿಖೆಗೊಳಪಡಿಸಬಹುದೆಂದು ಸುಪ್ರೀಂಕೋರ್ಟಿಗೆ CEC ಶಿಫಾರಸು ಮಾಡಿದೆ ಎನ್ನಲಾಗಿದೆ.

CEC ಕೋರ್ಟಿಗೆ ಸಲ್ಲಿಸಿರುವ ವರದಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, 'ಪ್ರಕರಣವನ್ನು ಸಿಬಿಐನಂತಹ ಸಂಸ್ಥೆಯಿಂದ ತನಿಖೆಗೊಳಪಡಿಸಬಹುದು' ಎಂದು ವರದಿಯಲ್ಲಿ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ.
ಆದರೆ ಪ್ರಕರಣದ ಸಂಬಂಧ ಕೇಂದ್ರ ಉನ್ನತಾಧಿಕಾರ ಸಮಿತಿ (CEC) ಸಲ್ಲಿಸಿರುವ ವರದಿ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸುಪ್ರೀಂಕೋರ್ಟ್ ಇಂದೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಅಥವಾ ಈ ಹಿಂದಿನಂತೆ ವಿಚಾರಣೆಯನ್ನು ಮುಂದೂಡಬಹುದು.

ಮುಂದೆ, CEC ವರದಿಯನ್ನಾಧರಿಸಿ ಸುಪ್ರೀಂಕೋರ್ಟ್ ಒಂದು ವೇಳೆ ಸಿಬಿಐ ತನಿಖೆಗೆ ಆದೇಶಿಸಿದರೆ ಮಾತ್ರ ಯಡಿಯೂರಪ್ಪ ನಿಜಕ್ಕೂ ಸಂಕಟಕ್ಕೆ ಸಿಲುಕಬಹುದು. ಅಲ್ಲಿಯವರೆಗೂ ಯಡಿಯೂರಪ್ಪನವರು ನಿರಾಳರಾಗಿರಬಹುದು.

CEC ವರದಿ ಅಂತಿಮವಲ್ಲ. ವರದಿಯನ್ನು ಒಪ್ಪುವುದು, ಬಿಡುವುದು ಸುಪ್ರೀಂಕೋರ್ಟ್ ವಿವೇಚನೆಗೆ ಬಿಟ್ಟ ವಿಷಯ. ಒಂದು ವೇಳೆ ತನಿಖೆ ನಡೆದು, ಆರೋಪ ಸಾಬೀತಾದರೆ ಮಾತ್ರ ನಾನು ಸಂಕಷ್ಟಕ್ಕೆ ಸಿಲುಕಬಹುದು ಎಂದು ಇದೇ ವೇಳೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಗಣಿ ಉದ್ಯಮಿ ಪ್ರವೀಣಚಂದ್ರ ಅವರು ಚಿತ್ರದುರ್ಗ ಆಸುಪಾಸಿನಲ್ಲಿ ಗಣಿಗಾರಿಕೆ ಗುತ್ತಿಗೆಗಾಗಿ ಅರ್ಜಿ ಸಲ್ಲಿಸಿದ್ದರು. 2010ರ ಅ. 12ರಂದು ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಅಂದಿನ ರಾಜ್ಯ ಸರ್ಕಾರ (ಮುಖ್ಯಮಂತ್ರಿ ಯಡಿಯೂರಪ್ಪ) ಗುತ್ತಿಗೆಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದರು. ಅದಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಣಿಗೆ ಗುತ್ತಿಗೆಗೆ ಅನುಮತಿ ನೀಡಬಹುದು ಎಂದು ಅನುಮೋದಿಸಿದ್ದರು.

ಈ ಮಧ್ಯೆ, ಪ್ರವೀಣಚಂದ್ರ ಅವರು 2009ರ ಜನವರಿಯಲ್ಲಿ ಆರು ಕೋಟಿ ರೂ. ಲಂಚವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರಿಗೆ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು CEC ವರದಿಯಲ್ಲಿ ತಿಳಿಸಿದೆ.

English summary
A Supreme Court panel today recommended a probe by the Central Bureau of Investigation (CBI) against former Karnataka Chief Minister BS Yeddyuruppa in a case relating to alleged irregularities in illegal-mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X