ಮದ್ವೆಗೆ ಲೇಟಾಗಿ ಬಂದ ವರನಿಗೆ ಹೆಣ್ಣು ಇಲ್ಲ ಹಣ್ಣು ಇಲ್ಲ

Ghaziabad wedding Chaos
ಗಾಜಿಯಾಬಾದ್, ಏ.20: ಕೆಲವರಿಗೆ ಎಲ್ಲಾ ಕಡೆ ಲೇಟ್ ಆಗಿ ಬರೋದು ಖಯಾಲಿಯಾಗಿರುತ್ತದೆ. ಜನ ನಮಗಾಗಿ ಕಾಯುತ್ತಿದ್ದಾರೆ ಎಂದರೆ ನಮ್ಮ ಗೌರವ ಇನ್ನೂ ಹೆಚ್ಚಾಗುತ್ತೆ ಎಂಬ ವಿಚಿತ್ರ ನಂಬಿಕೆ ಅವರಲ್ಲಿರುತ್ತದೆ. ನಮ್ಮ ವರ ಮಹಾಶಯ ಜಮೀಲನಿಗೂ ಈ ಖಯಾಲಿ ಇತ್ತೋ ಇಲ್ವೋ ಗೊತ್ತಿಲ್ಲ. ಆದರೆ, ತನ್ನ ಮದ್ವೆಗೆ ಲೇಟ್ ಆಗಿ ಹೋಗಿ ಸಕತ್ ಗೂಸಾ ತಿಂದಿದ್ದಾನೆ. ಕನ್ನಡದ ಡಕೋಟ ಎಕ್ಸ್ ಪ್ರೆಸ್ ಚಿತ್ರದ ಒಂದು ದೃಶ್ಯ ನಿಜ ಜೀವನದಲ್ಲೂ ನಡೆದು ಬಿಟ್ಟಿದೆ.

ಗಾಜಿಯಾಬಾದ್ ನ ಮುರಾದ್ ನಗರದಲ್ಲಿ ಬೆಳಗ್ಗೆ 10.30ಕ್ಕೆ ಮದುವೆ ಹಾಲ್ ನಲ್ಲಿ ವಧು ನಗ್ಮಾ ಕಡೆಯವರು ಕಾದು ಕೂತಿದ್ದರು. ಮಧ್ಯಾಹ್ನವಾದರೂ ಹುಡುಗನ ಕಡೆಯವರು ಪತ್ತೆಯಾಗಲಿಲ್ಲ. ಕೆಲವರು ಕದ್ದುಮುಚ್ಚಿ ಹೊಟ್ಟೆಪೂಜೆ ಮುಗಿಸಿಕೊಂಡರು. ಇನ್ನು ಕೆಲವರು ವರನ ಕಡೆಯವರನ್ನು ಚೆಚ್ಚಲು ತೋಳು ಮಡಚಿಕೊಂಡು ಸನ್ನದ್ಧರಾಗಿದ್ದರು.

ವರ ಜಮೀಲನ ಕಡೆಯವರು ಯಾವ ಡಕೋಟ ಎಕ್ಸ್ ಪ್ರೆಸ್ ಹತ್ತಿ ಬಂದರೋ ಏನೋ ಛತ್ರಕ್ಕೆ ಬರುವಷ್ಟರಲ್ಲಿ ಸಂಜೆ ನಮಾಜು ಸಮಯ ಮೀರಿತ್ತು. ವರನ ಕಡೆಯವರು ಮದುವೆ ಹಾಲ್ ಗೆ ಕಾಲಿಡುತ್ತಿದ್ದಂತೆ ವಧುವಿನ ಕಡೆಯವರು ಮುಗಿ ಬಿದ್ದು ಹಿಗ್ಗಾ ಮುಗ್ಗಾ ಚೆಚ್ಚಿ ಸ್ವಾಗತಿಸಿದ್ದಾರೆ.

ಈ ರೀತಿ ಹೊಡಿಬಡಿ ಸ್ವಾಗತ ಸಿಕ್ಕಿದ್ದು ಕಂಡು ಗಾಬರಿಗೊಂಡ ವರ ಜಮೀಲ್ ಗೆ ಇನ್ನೊಂದು ಶಾಕ್ ಕಾದಿತ್ತು. ಲೇಟ್ ಆಗಿ ಬಂದ ಕಾರಣ ಮದುವೆ ಕೂಡಾ ಕೈತಪ್ಪಿಹೋಗಿತ್ತು. ನಗ್ಮಾಳಿಗೆ ಇನ್ನೊಬ್ಬ ಯುವಕನನ್ನು ಕೊಟ್ಟು ಮದುವೆ ಮುಗಿಸಲಾಗಿತ್ತು. ಪೊಲೀಸರು ಬಂದು ಎರಡೂ ಕಡೆಯವರಿಗೆ ಸಮಾಧಾನ ಮಾಡಿದ ಮೇಲೆ ಈ ಗಲಾಟೆ ಎಪಿಸೋಡ್ ಮುಕ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+