• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುವರ್ಣ ನ್ಯೂಸ್ ವಿರುದ್ಧ ಎಫ್‌ಐಆರ್‌ ದಾಖಲು

By Srinath
|
ಮಂಗಳೂರು,ಏ. 19: ಯಾಕೋ ಮಾಧ್ಯಮಗಳ ವಿರುದ್ಧ ಪೊಲೀಸು, ಕೋರ್ಟು ಕೇಸುಗಳು ಹೆಚ್ಚಾಗುತ್ತಿವೆ. ಖಂಡಿತಾ ಇದು ಒಳ್ಳೆಯ ಲಕ್ಷಣವಲ್ಲ. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅವರು ಸುವರ್ಣ ಚಾನೆಲ್‌ ವಿರುದ್ಧ ಇಲ್ಲಿನ ಜೆಎಂಎಫ್‌ಸಿ 2 ನೇ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಪ್ರಕರಣದ ಸಂಬಂಧ FIR ದಾಖಲಿಸುವಂತೆ ನ್ಯಾಯಾಲಯವು ಬಂದರು ಪೊಲೀಸ್‌ ಠಾಣೆಗೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಬಂದರು ಪೊಲೀಸ್‌ ಠಾಣೆಯಲ್ಲಿ ಸುವರ್ಣ ನ್ಯೂಸ್ ಚಾನೆಲ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ಅಶ್ಲೀಲ ಚಿತ್ರ ಪ್ರದರ್ಶನ ಮತ್ತು ದುರುದ್ದೇಶ ಪೂರ್ವಕವಾಗಿ ಸುಳ್ಳು ವರದಿ ಪ್ರಸಾರ ಮಾಡಿದ ಆರೋಪವನ್ನು ಚಾನೆಲ್‌ ಮೇಲೆ ಹೊರಿಸಲಾಗಿದೆ.

ನ್ಯಾಯ ಬೇಕು -ಪಾಲೆಮಾರ್‌: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧ ಎಸಗಲಾಗಿದೆ. 'ಸುಳ್ಳು ವರದಿ ಪ್ರಸಾರ ಮಾಡಿದ್ದರಿಂದ ತಾನು ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಜನರಿಗೆ ತನ್ನ ಮೇಲೆ ತಪ್ಪು ಅಭಿಪ್ರಾಯ ಬರುವಂತಾಗಿದೆ. ತನಗೆ ನ್ಯಾಯ ಸಿಗಬೇಕು' ಎಂದು ಪಾಲೆಮಾರ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು. ನ್ಯಾಯಾಲಯದಲ್ಲಿ ಕೃಷ್ಣ ಪಾಲೆಮಾರ್‌ ಪರವಾಗಿ ವಕೀಲರಾದ ಪಿ.ಪಿ. ಹೆಗ್ಡೆ ಅವರು ವಾದ ಮಂಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister and Suratkal MLA Krishna Palemar had recently filed a private complaint in the junior magistrate first class (JMFC) II court in Mangalore against the Bangalore-based Suvarna TV Kannada news channel. The court on April 18 has directed the Bunder police to file a criminal case against the channel. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more