ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿಎಂ ಇಂಡಿಯಾ ಸಾಧನೆ ಆದಾಯ ಶೇ 7 ಜಂಪ್

By Mahesh
|
Google Oneindia Kannada News

IBM Q1 report
ವಾಷಿಂಗ್ಟನ್, ಏ.19:ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪ್ (ಐಬಿಎಂ) ಕಂಪನಿಯ ನಿವ್ವಳ ಲಾಭ ಶೇ 7ರಷ್ಟು ಏರಿಕೆ ಕಂಡು 3.1 ಬಿಲಿಯನ್ ಡಾಲರ್ ನಷ್ಟು ಲಾಭವಾಗಿದೆ ಎಂದು ಮೊದಲ ತ್ರೈಮಾಸಿಕ ವರದಿ ಐಬಿಎಂ ಪ್ರಕಟಿಸಿದೆ. ಭಾರತ ಸೇರಿದಂತೆ ಬ್ರೆಜಿಲ್, ರಷ್ಯಾ ಹಾಗೂ ಚೀನಾ(BRIC)ದಲ್ಲಿ ಶೇ 10 ರಷ್ಟು ಆದಾಯ ಹೆಚ್ಚಿದ ಪರಿಮಾಣ ಜಾಗತಿಕವಾಗಿ ಲಾಭದತ್ತ ಮುಖ ಮಾಡಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ 24.7 ಬಿಲಿಯನ್ ಡಾಲರ್ ಆದಾಯ ಗಳಿಸಿದ್ದು, ಸಂಸ್ಥೆಯ ಮಾರುಕಟ್ಟೆ ಶೇ 9ರಷ್ಟು ವಿಸ್ತರಣೆಗೊಂಡಿದೆ.

ಭಾರತ ಸೇರಿದಂತೆ ಐಬಿಎಂನ ಸಾಫ್ಟ್ ವೇರ್ ವಿಭಾಗ ಹೆಚ್ಚಿನ ಆದಾಯ ಗಳಿಸಿರುವುದರಿಂದ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ. ಸಾಫ್ಟ್ ವೇರ್ ವಿಭಾಗ ಒಟ್ಟು 5.6 ಬಿಲಿಯನ್ ಡಾಲರ್ ಆದಾಯ ಪಡೆದಿದೆ. 2011ರ ಇದೇ ಅವಧಿಗೆ ಹೋಲಿಸಿದರೆ ಶೇ 5 ರಷ್ಟು ಏರಿಕೆ ಕಂಡಿದೆ. ಸಿಸ್ಟಮ್ಸ್ ಹಾಗೂ ತಂತ್ರಜ್ಞಾನ ವಿಭಾಗದಿಂದ 3.7 ಬಿಲಿಯನ್ ಡಾಲರ್ ಆದಾಯ ಬಂದಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆಯಾಗಿರುವುದು ಕಂಡು ಬಂದಿದೆ ಎಂದು ಸಿಇಒ ಗಿನ್ನಿ ರೊಮೆಟ್ಟಿ ಹೇಳಿದ್ದಾರೆ.

ಐಬಿಎಂ: ಜೂನ್ 16, 1911 ( ಶತಕದ ಸಂಭ್ರಮದಲ್ಲಿ ಸಾಫ್ಟ್ ವೇರ್ ದಿಗ್ಗಜ ಐಬಿಎಂ ) ರಲ್ಲಿ ಆರಂಭವಾದ ಸಂಸ್ಥೆ ಪ್ರಸಕ್ತ ತ್ರೈಮಾಸಿಕದಲ್ಲಿ ಗ್ರೀನ್ ಹ್ಯಾಟ್, ಎಪ್ಟೋರಿಸ್ Inc, ಡಿಮ್ಯಾಂಡ್ ಟೆಕ್ Inc, ವರ್ಕ್ ಲೈಟ್ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಾರ್ಚ್ 2012ರಲ್ಲಿ ಪಂಜಾಬಿನ ಲೂಧಿಯಾನದಲ್ಲಿ ಹೊಸ ಬ್ರ್ಯಾಂಚ್ ಆರಂಭಿಸಿದೆ.

ಐಬಿಎಂ ಸಂಸ್ಥೆಗೆ ಆಕ್ಸೆಂಚರ್, ಕಂಪ್ಯೂಟರ್ ಸೈನ್ಸಸ್ ಕಾರ್ಪೊರೇಷನ್, ಫುಜಿತ್ಸು, ಎಚ್ ಪಿ, ಸಿಎ Inc, ಮೈಕ್ರೋಸಾಫ್ಟ್ ಹಾಗೂ ಅರೇಕಲ್, ಸಿಸ್ಕೋ, ಡೆಲ್, ಇಎಂಸಿ ಹಾಗೂ ಜನರಲ್ ಎಲೆಕ್ಟ್ರಿಕ್(GE) ಪ್ರತಿಸ್ಪರ್ಧಿಗಳಾಗಿದೆ. (ಗುಡ್ ರಿಟರ್ನ್ಸ್)

English summary
International Business Machines Corp's (IBM) profit jumped 10 in the BRIC countries - Brazil, Russia, India and China. and earning to 3.1 billion USD in the first quarter. software segment revenue were $5.6 billion said IBM CEO Ginni Rometty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X