ಧರಂ ರೇವಣ್ಣ ಸೈಟು ಹೊಡೆದಿದ್ದು, ತನಿಖೆಗೆ ಆದೇಶ

ಉದ್ಯಾನವನ ನಿರ್ಮಿಸಲು ಬಿಡಿಎ ಮೀಸಲಿಟ್ಟ 10 ಎಕರೆ ಭೂಮಿಯನ್ನು ಡಿ-ನೋಟಿಫೈ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸೇರಿದಂತೆ 13 ಮಂದಿಯ ವಿರುದ್ಧ ತನಿಖೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
ಮಾಜಿ ಸಿಎಂ ಧರ್ಮಸಿಂಗ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಾಲಕೃಷ್ಣೇ ಗೌಡ, ಅವರ ಪತ್ನಿ ಕವಿತಾ ಆರೋಪ ಹೊತ್ತವರಲ್ಲಿ ಪ್ರಮುಖರಾಗಿದ್ದಾರೆ.
ರಾಯಸಂದ್ರ ರವಿಕುಮಾರ್ ಅವರು ಸಲ್ಲಿಸಿದ ಖಾಸಗಿ ದೂರಿನ ಪ್ರಕಾರ ಭೂಮಿಯನ್ನು ಬಿಡಿಎ 1996ರಲ್ಲಿಯೇ ನೋಟಿಫೈ ಮಾಡಿದೆ. ಆದರೆ, ಧರಂಸಿಂಗ್ ಆಡಳಿತಾವಧಿಯಲ್ಲಿ ಈ ಭೂಮಿಯನ್ನು ಅಂದಿನ ಲೋಕೋಪಯೋಗಿ ಸಚಿವ ರೇವಣ್ಣ ಅವರ ಆದೇಶದ ಮೇರೆಗೆ 10 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ.
ಡಿನೋಟಿಫೈ ಆಗಿ ಎರಡು ತಿಂಗಳಲ್ಲೇ ಈ ಭೂಮಿಯನ್ನು ಕವಿತಾ ಎಂಬ ಹೆಸರಿನಲ್ಲಿ ಖರೀದಿಸಲಾಗಿದ್ದು,ಇದರಲ್ಲಿ 2.11 ಎಕರೆ ಪ್ರದೇಶವನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ 3.5 ಕೋಟಿ ರು ಲಾಭದೊಂದಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications