• search

ಎಚ್ ಡಿ ಕುಮಾರಸ್ವಾಮಿ ಪ್ರಕರಣ ಊರ್ಜಿತವಾ?

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  hdk-bda-denotification-case-doesnt-hold-water
  ಬೆಂಗಳೂರು, ಏ.17: ಕಾನೂನು ತಜ್ಞರ ಪ್ರಕಾರ ಥಣಿಸಂದ್ರ ಬಿಡಿಎ ನಿವೇಶನಗಳ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಯಾವುದೇ ಹುರುಳಿಲ್ಲ. ಇಲ್ಲಿ ಎರಡು ಮುಖ್ಯ ವಿಷಯಗಳು ಗಮನಾರ್ಹವಾಗಿದೆ:

  ಅಧಿಕಾರ ದುರುಪಯೋಗ ಆಗಿಲ್ಲ. ಜತೆಗೆ ಪ್ರಕರಣದ ಸಂಬಂಧ ಕುಮಾರಸ್ವಾಮಿಗೆ ಯಾವುದೇ ಲಂಚ ರುಷುವತ್ತು ಸಂದಾಯವಾಗಿದೆ ಎಂದು ಆರೋಪಪಟ್ಟಿಯಲ್ಲಿ ಎಲ್ಲೂ ಹೇಳಿಲ್ಲ.

  ಲಂಚವೋ ಮತ್ತೊಂದು ಆಮಿಷಕ್ಕೆ ಇಲ್ಲದೇ ಕುಮಾರಸ್ವಾಮಿ ಸುಮ್ ಸುಮ್ನೆ ಏಕೆ ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡುತ್ತಾರೆ. ಆದ್ದರಿಂದ ಭ್ರಷ್ಟಾಚಾರ ತಡೆ ಕಾಯಿದೆಯಡಿ ಕುಮಾರಸ್ವಾಮಿಯನ್ನು ಪ್ರಾಸಿಕ್ಯೂಟ್ ಮಾಡಲು ಬರುವುದಿಲ್ಲ ಎಂಬುದು ವಕೀಲರ ಒಕ್ಕೊರಲ ಅಭಿಪ್ರಾಯ.

  ಕಾದುನೋಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಮನ್ಸ್ ನೀಡಬೇಕೇ? ಬೇಡವೇ? ಎಂಬುದನ್ನು ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಏ. 21ರಂದು ನಿರ್ಧರಿಸಲಿದ್ದಾರೆ.

  ಕುಮಾರಸ್ವಾಮಿಗೆ ಭಾರಿ ಡೌಟು: ಆರೋಪಪಟ್ಟಿ ಸಲ್ಲಿಸಿರುವ ಕುರಿತು ನೀಡಿರುವ ಪ್ರತಿಕ್ರಿಯೆಯಲ್ಲಿ ಕುಮಾರಸ್ವಾಮಿ ಸಹ ಇದನ್ನೇ ಪ್ರತಿಪಾದಿಸಿದ್ದಾರೆ - 'ನಾನಾಗಲೀ, ಚನ್ನಿಗಪ್ಪ ಅವರಾಗಲೀ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ವೈಯಕ್ತಿಕವಾಗಿ ಯಾವುದೇ ಲಾಭವನ್ನೂ ಮಾಡಿಕೊಂಡಿಲ್ಲ' ಎಂದಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

  'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ವಾಧೀನದಲ್ಲಿದ್ದ ಸ್ವತ್ತನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪ್ರಕರಣಗಳಲ್ಲಿ ನೇರ ಲಾಭ ಪಡೆದ ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ ಅವರನ್ನು ಇದೇ ಪೊಲೀಸರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ' ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

  ಭೂಮಾಲೀಕರೂ ಆದ ಕಿವಿ, ಮೂಗು, ಗಂಟಲು ತಜ್ಞ ರವಿ ಪ್ರಕಾಶ್ ಮತ್ತು ಯುವಿಸಿಇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಎವಿ ಶ್ರೀರಾಮ್ ಪ್ರಕರಣದ 3 ಮತ್ತು 4 ನೆಯ ಆರೋಪಿಗಳು. 2007ರಲ್ಲಿ ನಡೆದ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಜ್ಯೋತಿ ರಾಮಲಿಂಗಂ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಆರೋಪಟ್ಟಿಯಲ್ಲಿ ಕೋರಲಾಗಿದೆ.

  ಚಾಮರಾಜನಗರದ ಎಂಎಸ್ ಮಹದೇವಸ್ವಾಮಿ ಎಂಬುವವರು ಜ. 2 ರಂದು ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ತನಿಖಾಧಿಕಾರಿ ರವಿಶಂಕರ್ ಅವರು 52 ಪುಟಗಳ ಚಾರ್ಜ್ ಶೀಟ್ ಹಾಗೂ 1600 ಪುಟಗಳ ದಾಖಲೆಗಳುಳ್ಳ ವರದಿಯನ್ನು ಲೋಕಾಯುಕ್ತ ಕೋರ್ಟಿಗೆ ಸಲ್ಲಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In the Arkavathy land denotification case the charges against Kumaraswamy does not hold water say legal experts. Some legal experts are already picking holes in the charges. There is neither abuse of position, nor did Kumaraswamy, as chief minister receive any illegal gratification - is the main contention.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more