ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ್ ಗುರೂಜಿ ಸಮಾಜಘಾತುಕ: ಪ್ರೊ ರಾವ್

By Mahesh
|
Google Oneindia Kannada News

Ravishankar Guruji
ಬೆಂಗಳೂರು, ಏ.15: ಸರಕಾರಿ ಶಾಲೆಗಳಲ್ಲಿ ನಕ್ಸಲರನ್ನು ಸೃಷ್ಟಿಸಲಾಗುತ್ತಿದೆ ಎನ್ನುವ ರವಿಶಂಕರ ಗುರೂಜಿ, ತಮ್ಮ ಆಶ್ರಮದಲ್ಲಿ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ವಿಚಾರವಾದಿ ಪ್ರೊ.ಜಿಕೆ ಗೋವಿಂದ ರಾವ್ ಆರೋಪಿಸಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 121ನೆ ಜನ್ಮ ದಿನದ ಅಂಗವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ 'ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಐಕ್ಯ' ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರೊ.ಜಿಕೆ ಗೋವಿಂದ ರಾವ್ ತಮ್ಮ ಭಾಷಣದುದ್ದಕ್ಕೂ ಜಾತಿವಾದವನ್ನು ಖಂಡಿಸಿ ಮಾತನಾಡಿದರು.. ಮುಖ್ಯಾಂಶ ಇಲ್ಲಿದೆ

* ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್‌ರನ್ನು ಗುರೂಜಿ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಬಡವರ, ಸರಕಾರಿ ಭೂಮಿಯನ್ನು ಕೊಳ್ಳೆ ಹೊಡೆಯುವ ಇಂತಹ ನಕಲಿ ಗುರೂಜಿಗಳು ನಾಶವಾಗದಿದ್ದರೆ ಅಂಬೇಡ್ಕರ್‌ರಂತಹವರು ಹತ್ತು ಜನ್ಮವೆತ್ತಿ ಬಂದರೂ ಈ ಸಮಾಜ ಸುಧಾರಣೆ ಯಾಗುವುದಿಲ್ಲ

* ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾನವಾಗಿದೆ. ಆದರೆ, ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಸ್ಥಾನಪಲ್ಲಟಕ್ಕಾಗಿ ದಿನನಿತ್ಯ ಶಕ್ತಿ ಪ್ರದರ್ಶನ ನಡೆಯುತ್ತಿದೆ.

* ನೀರಿಲ್ಲದ ರಾಜ್ಯದಲ್ಲಿ ಬಿಯರ್ ಯಥೇಚ್ಛವಾಗಿದೆ ಎಂದು ಹೇಳುವ ಸಚಿವರು ಈ ರಾಜ್ಯದಲ್ಲಿದ್ದಾರೆ.

* ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ತಮ್ಮ ಮತಗಳನ್ನು ಹಣಕ್ಕೆ ಮಾರಿಕೊಳ್ಳದೆ ಈ ಸರ್ಕಾರನ್ನು ಕಿತ್ತೊಗೆಯಬೇಕು

* ಸಂಘಪರಿವಾರಕ್ಕೆ ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಭಗವದ್ಗೀತೆ ಹಾಗೂ ಚರಿತ್ರೆ ಬೇಕು.
* ಜನರಲ್ಲಿ ಕೋಮು ಭಾವನೆಯನ್ನು ಸೃಷ್ಟಿಸಿ ಮತ್ತು ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವುದನ್ನು ತನ್ನ ತಂತ್ರವನ್ನಾಗಿ ಮಾಡಿಕೊಂಡಿದೆ

* ಅಧಿಕಾರದ ದುರಾಸೆಯಿಂದ ದಲಿತರು ಹಾಗೂ ಮಹಿಳೆಯರು ಬಿಜೆಪಿಯಂತಹ ಕೋಮುವಾದಿ ಪಕ್ಷಕ್ಕೆ ಸೇರುವುದು ಜಗತ್ತಿನ 8ನೆ ಅದ್ಭುತ

* ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವ ತೀರ್ಥ ಸ್ವಾಮೀಜಿಗಳು ಶಾಸ್ತ್ರ ಮತ್ತು ಸಂವಿಧಾನವನ್ನು ಸಮನ್ವಯಗೊಳಿಸುವ ಮಾತನ್ನಾಡುತ್ತಾರೆ. ಈ ಅಧಿಕಾರವನ್ನು ಪೇಜಾವರ ಶ್ರೀಗಳಿಗೆ ನೀಡಿದವರು ಯಾರು?

* ಮಠದ ಧರ್ಮ ನಿಜವಾದ ಧರ್ಮ ಅಲ್ಲ. ರಾಮಕೃಷ್ಣ ಪರಮಹಂಸರ ಧರ್ಮ ನಿಜವಾದ ಮಾನವ ಧರ್ಮವಾಗಿದೆ. ಈಗಿರುವ ಬಹುತೇಕ ಸ್ವಾಮಿಗಳು ಕಾವಿಯ ಮರೆಯಲ್ಲಿರುವ ಪುಢಾರಿಗಳು

ಮೋದಿ ರೌಡಿ : ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜಕಾರಣದ ಪಕ್ಕಾ ರೌಡಿ. ಮೋದಿಯ ಆಡಳಿತದಲ್ಲಿ ಹಿಟ್ಲರ್, ಸ್ಟಾಲಿನ್‌ರ ಕಾಲಕ್ಕಿಂತ ಹೆಚ್ಚು ಹತ್ಯೆಗಳು ನಡೆದಿವೆ. ಆದರೂ ಕೂಡ ಅವರನ್ನು ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಲಾಗುತ್ತಿದೆ.

* ಕೇವಲ ಬೃಹತ್ ಕಟ್ಟಡಗಳು, ರಸ್ತೆಗಳನ್ನು ನಿರ್ಮಿಸಿದರೆ ಮಾತ್ರ ಅಭಿವೃದ್ಧಿ ಆಗುವುದಿಲ್ಲ. ಆ ರಾಜ್ಯದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಏಳಿಗೆಯೇ ನಿಜವಾದ ಅಭಿವೃದ್ಧಿ

* ಪ್ರಾಚೀನ ಸಾಹಿತ್ಯ ಕ್ಷ್ಷೇತ್ರದಲ್ಲೂ ಜಾತಿಯ ವಾಸನೆ ಕಂಡು ಬಂದಿದ್ದು, ಮೇಲ್ವರ್ಗದವರಿಗೆ ಸಾಹಿತ್ಯ ಸೃಷ್ಟಿಸಿದರೆ ಆಚಾರ್ಯ ಎಂದು, ಮಧ್ಯಮವರ್ಗದವರಿಗೆ ಶರಣರೆಂದೂ ಕೆಳವರ್ಗದ ಸಾಹಿತ್ಯ ಸೃಷ್ಟಿಕರ್ತರನ್ನು ದಾಸ ಎಂದು ಕರೆಯಲಾಗುತ್ತಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

* ಆಹಾರದ ಹಕ್ಕು ಪ್ರಕೃತಿಯ ಧರ್ಮ. ಗೋ ಮಾಂಸದ ವಿಷಯವಾಗಿ ಬೆಂಗಳೂರಿನಲ್ಲಿ ಸಂಭವಿಸಿದ ಹಲವು ಕೋಮು ಗಲಭೆಗಳಲ್ಲಿ ಸಮಸ್ಯೆಗೆ ಸಿಲುಕಿದವರು ಬಡ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು.

* ಬ್ರಾಹ್ಮಣರ ಬುದ್ದಿ, ಬನಿಯಾಗಳ ದುಡ್ಡು, ಶೂದ್ರರ ತೋಳ್ಬಲದಿಂದ ಅಲ್ಪಸಂಖ್ಯಾತ ವರ್ಗ ಸಂಕಷ್ಟಕ್ಕೆ ಸಿಲುಕಿದೆ.

English summary
Professor GK Govinda Rao condemned Ravishankar Guruji and his Art of Living concept, said AOL is producing millitants and communalism is increased due to fundamentalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X