ಆಂಡ್ರ್ಯಾಡ್ ಮಾರುಕಟ್ಟೆಗೂ ಲಗ್ಗೆ ಇಟ್ಟ ಜಗನ್ ಪಕ್ಷ

ವೈಎಸ್ ಜಗನ್ ಇಚ್ಛೆಯಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐಟಿ ವಿಂಗ್, ಹೊಚ್ಚ ಹೊಸ ಆಂಡ್ರ್ಯಾಡ್ ಅಪ್ಲಿಕೇಷನ್ ಬಿಟ್ಟಿದೆ. ಗೂಗಲ್ ಪ್ಲೇನಲ್ಲಿ ಲಭ್ಯವಿರುವ ಈ ಅಪ್ಲಿಕೇಷನ್ ರಾಜಕೀಯ ಪಕ್ಷವೊಂದರ ಮೊಟ್ಟಮೊದಲ ಅಧಿಕೃತ ಅಪ್ ಎಂದು ಪರಿಗಣಿಸಲ್ಪಟ್ಟಿದೆ.
ಡೌನ್ ಲೋಡ್ ಮಾಡಿ ನೋಡಿ : www.ysrcongress.mobi (ಅಥವಾ) http://play.google.com. ನಲ್ಲಿ ಸರ್ಚ್ ಮಾಡಿ ನಿಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು.
ಬೇರೆ ಪಕ್ಷಗಳಿಂದ ನಾವು ಭಿನ್ನ ಎಂದು ತೋರಿಸಿಕೊಳ್ಳಲು ತಂತ್ರಜ್ಞಾನದ ಮೊರೆ ಹೊಗಿರುವ ಜಗನ್ ಗೆ ಇಂಡ್ ಸಿಸ್ ಸಿಸ್ಟಮ್ಸ್ ನ ಸಿಇಒ ಸುರೇಶ್ ಬೊಮ್ಮ ಸಾಥ್ ನೀಡಿದ್ದಾರೆ.
ವೈಎಸ್ ಆರ್ ಕಾಂಗ್ರೆಸ್ ಪಕ್ಷ ಐಟಿ ವಿಂಗ್ ನ ಸದಸ್ಯರಾಗಿರುವ ಸುರೇಶ್, ಸದ್ಯ ಆಂಡ್ರ್ಯಾಡ್ ನಲ್ಲಿ ಲಭ್ಯವಿರುವ ಅಪ್ಲಿಕೇಷನ್ ನಂತರ ಐಫೋನ್ ಹಾಗೂ ಬ್ಲ್ಯಾಕ್ ಬೆರಿಯಲ್ಲೂ ಲಭ್ಯವಾಗಲಿದೆ ಎಂದಿದ್ದಾರೆ.
ವೈಎಸ್ ಆರ್ ಕಾಂಗ್ರೆಸ್ ಅಪ್ ನಲ್ಲಿ ಪಕ್ಷದ ವಿವರ, ಚಿತ್ರಗಳು, ವಿಡಿಯೋಗಳನ್ನು ನೋಡಬಹುದು. ಕೊಂಚ ಸ್ಲೋ ಎನ್ನಬಹುದಾದರೂ ಫೋಟೋ ಗ್ಯಾಲರಿ ಉತ್ತಮವಾಗಿದೆ. ರಾಜಕೀಯ ಪಕ್ಷಗಳು ತಂತ್ರಜ್ಞಾನ ಬಳಸಿ ಜನರನ್ನು ಸೆಳೆಯುವುದು ಸಾಮಾನ್ಯವಾದರೂ ವೈಎಸ್ ಜಗನ್ ಪ್ರಯತ್ನಕ್ಕೆ ಭಾರಿ ಬೆಂಬಲ, ಪ್ರಶಂಸೆ ವ್ಯಕ್ತವಾಗಿದೆ.












Click it and Unblock the Notifications